ಬೆಳಗಾವಿ : ಚುಟುಕು ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಗಾರ್ಗಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಪುನರ್ ನೇಮಕ ಮಾಡಲಾಗಿದೆ. ಸಾಹಿತ್ಯ ಸಂಸ್ಕೃತಿ ಕ್ಷೇತ್ರದ ಅವರ ದೀರ್ಘ ಅನುಭವ ಜಿಲ್ಲಾ ಸಮಿತಿಗೆ ದೊರಕುವಂತಾಗಲಿ ಮತ್ತು ಚುಸಾಪ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗುವಂತೆ ಮಾಡಲಿ ಎಂದು ಚುಟುಕು ಸಾಹಿತ್ಯ ಪರಿಷತ್ ಆಶಯ ವ್ಯಕ್ತಪಡಿಸಿದೆ.