ಬೈಲಹೊಂಗಲ : ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನೇಹ ಸಮ್ಮೇಳನ ಆಗಸ್ಟ್ 3 ರಂದು ಬೆಳಗ್ಗೆ 10:30 ಕ್ಕೆ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಶಾಸಕ ಮಹಾಂತೇಶ ಕೌಜಲಗಿ, ಹಿರಿಯ ನ್ಯಾಯವಾದಿ ಝಡ್.ಎ. ಗೋಕಾಕ, ಝಿ ಟಿವಿ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದರಾದ ಸಂಜು ಬಸಯ್ಯ ದಂಪತಿಗಳು, ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ನಿರ್ದೇಶಕ ದೀಪಕ ಸಂಗೊಳ್ಳಿ ಉಪಸ್ಥಿತರಿರುವರು. ಕೌಜಲಗಿ ಕಾನೂನು ಮಹಾವಿದ್ಯಾಲಯದ ಚೇರ್ಮನ್ ಶಿರೀಶ ತುಡುವೇಕರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಾಚಾರ್ಯ ಪಿ.ಎನ್.ಪಾಟೀಲ ಹಾಗೂ ಕಾರ್ಯಕ್ರಮದ ಸಂಯೋಜಕ ಡಿ.ಬಿ. ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.