Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

48 ಗಂಟೆಯಲ್ಲಿ ಮನೆಗಳ್ಳರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ

Advertisement

ಬೆಳಗಾವಿ : ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿರುವ ಕಟಕೋಳ ಪೊಲೀಸರು ಬಂಧಿತರಿಂದ ರೂ.21,02,560 ಮೌಲ್ಯದ 154.6 ಗ್ರಾಂ ಬಂಗಾರದ ಆಭರಣ ಹಾಗೂ 11,250 ಕಿಮ್ಮತ್ತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹಣಮಂತ ಯಲ್ಲಪ್ಪ ಮಾರಾಪುರ (27) (ಸಾಃ ಕಮಲದಿನ್ನಿ ತಾಃ ಮೂಡಲಗಿ), ಹಸೀನಾ ಅಪ್ಪಾಸಾಬ ನದಾಫ್, ಶರೀಫ್ (24) (ಸಾ: ಹೊಸಕೋಟಿ ತಾಃ ರಾಮದುರ್ಗ ಹಾಲಿಃ ಕಮಲದಿನ್ನಿ ತಾಃ ಮೂಡಲಗಿ) ಇವರಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.

ಮೇ 5 ರಂದು ದಿಲ್‌ಶಾದ ಸೈದುಸಾಬ ನದಾಫ್ (ಹಾಸ್ಟೆಲ್ ವಾರ್ಡನ್, ಸಾಃ ಹೊಸಕೋಟಿ, ತಾಃ ರಾಮದುರ್ಗ ಹಾಲಿಃ ನೆಹರೂ ನಗರ ಬೆಳಗಾವಿ) ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ, ಮನೆಯದ್ದ 154.6 ಗ್ರಾಂ ಬಂಗಾರದ ಆಭರಣ, 21,02,560 ರೂ. ಹಾಗೂ 11,250 ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳರು ಕಳವು ಮಾಡಿದ ಬಗ್ಗೆ ದೂರು ನೀಡಿದ್ದನ್ನು ಕಟಕೋಳ ಪೊಲೀಸ್ ಠಾಣಾ ಅಪರಾಧ ಸಂಖ್ಯೆ. 85/2026 ಕಲಂ: 305, 331(4) ಬಿ.ಎನ್.ಎಸ್-2023 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ, ಇವರ ನೇತೃತ್ವದಲ್ಲಿ ಕಟಕೋಳ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಕೊಣ್ಣೂರೆ, ನುರಿತ ಅಪರಾಧ ವಿಭಾಗದ ಸಿಬ್ಬಂದಿ ಎಸ್.ಎಸ್.ವಜ್ರಮಟ್ಟಿ, ಎಂ.ಸಿ.ಮನ್ನಿಕೇರಿ, ಎಮ್.ಆರ್.ಲಡ್ಡಿ, ಎಸ್.ಎಫ್.ಭಾಂಗಿ, ವಿ.ಆರ್.ಗಲಬಿ ತನಿಖಾ ಸಹಾಯಕರಾದ ಆರ್.ಬಿ.ಗೋಕಾಕ, ಡಿ.ಎಚ್.ನದಾಫ್ ಮತ್ತು ಬಿ.ಎಸ್.ಚುಂಚನೂರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ವಿನೋದ ಠಕ್ಕನ್ನವರ ಹಾಗೂ ಸಚಿನ್ ಪಾಟೀಲ ಇವರ ತಂಡವನ್ನು ರಚಿಸಿದ್ದು, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಹಣಮಂತ ಯಲ್ಲಪ್ಪ ಮಾರಾಪುರ ಮತ್ತು ಹಸೀನಾ ಇವರನ್ನು 48 ಗಂಟೆಯಲ್ಲಿ ಕಟಕೋಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 32 ಗ್ರಾಂ ರಾಣಿ ಸರ, ಅ.ಕಿ=435200 ರೂ, 34 ಗ್ರಾಂ ಅವಲಕ್ಕಿ ಸರ ಅ.ಕಿ=462400 ರೂ, 4.5 ಗ್ರಾಂ ಚೈನ ಒಂದು 61200 ರೂ, 3.5 ಗ್ರಾಂ ಹರಳಿನ ಜುಮಕಿ 47600 ರೂ, 1.8 ಗ್ರಾಂ ಚಿಕ್ಕ ಮಕ್ಕಳ 4 ಉಂಗುರ 24480/-ರೂ, 10 ಗ್ರಾಂ ಬೆಳ್ಳಿ ಸುತ್ತು ಉಂಗುರ 2500 ರೂ, 39 ಗ್ರಾಂ ತಾಳ ಚೈನ್ 530400 ರೂ, 32 ಗ್ರಾಂ ಬಳೆ ನಾಲ್ಕು 435200 ರೂ, 6.5 ಗ್ರಾಂ ಚೈನ ಲಾಕೇಟ್ 88400 ರೂ, 1.3 ಗ್ರಾಂ ಕಿವಿಯ ರಿಂಗ 17680 ರೂ, 35 ಗ್ರಾಂ ಬೆಳ್ಳ ಪೆಂಡದ ಗೆಜ್ಜೆ 8750 ರೂ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ನಂ :ಕೆಎ-49/256-2878 ಹೀಗೆ ಒಟ್ಟು 21,02,560 ಮೌಲ್ಯದ 154.6 ಗ್ರಾಂ ಬಂಗಾರದ ಆಭರಣ, ಹಾಗೂ 11,250 ಕಿಮ್ಮತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಆರೋಪಿತರಿಂದ ಕಡೆಯಿಂದ ಕಟಕೋಳ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!