Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕುಟುಂಬವನ್ನೇ ಕಳೆದುಕೊಂಡ ದುಃಖ : ಶಾಂತಿ ಅರಸಿ 30 ವರ್ಷಗಳಿಂದ ಸೈಕಲ್ ತುಳಿಯುತ್ತಿರುವ 90ರ ವೃದ್ಧ…!

Advertisement
ಬೀಜಿಂಗ್: ಜೀವನದಲ್ಲಿ ಎದುರಾದ ಭೀಕರ ದುರಂತವೊಂದು ಮನುಷ್ಯನನ್ನು ಎತ್ತ ಸಾಗುವಂತೆ ಮಾಡಬಹುದು ಎಂಬುದಕ್ಕೆ ಚೀನಾದ ಈ 90 ವರ್ಷದ ವೃದ್ಧನ ಕಥೆಯೇ ಸಾಕ್ಷಿ. ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಈ ವೃದ್ಧ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಚೀನಾದಾದ್ಯಂತ ಸೈಕಲ್‌ನಲ್ಲಿ ಸಂಚರಿಸುತ್ತಾ ಸಮಾಧಾನ ಹುಡುಕುತ್ತಿದ್ದಾರೆ.
ಚೀನಾದ ಹೆನಾನ್ ಪ್ರಾಂತ್ಯದ ಕೈಫೆಂಗ್ ಮೂಲದ ಜಾಂಗ್ ಝಾಂಗ್‌ಯಿ ಅವರ ಜೀವನ 1990ರ ದಶಕದವರೆಗೆ ಸುಗಮವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಭೀಕರ ರಸ್ತೆ ಅಪಘಾತವೊಂದರಲ್ಲಿ ಇವರ ಮಗ, ಸೊಸೆ ಮತ್ತು ಎಂಟು ವರ್ಷದ ಮೊಮ್ಮಗ ಸ್ಥಳದಲ್ಲೇ ಸಾವಿಗೀಡಾದರು. ಈ ಆಘಾತವನ್ನು ತಾಳಲಾರದ ಜಾಂಗ್ ಅವರ ಪತ್ನಿ ಕೂಡ ಮರು ವರ್ಷವೇ ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಕಣ್ಣೆದುರೇ ಇಡೀ ಕುಟುಂಬ ಮಾಯವಾದಾಗ, ಒಂಟಿಯಾದ ಜಾಂಗ್ ಅವರಿಗೆ ಮನೆಯ ನಾಲ್ಕು ಗೋಡೆಗಳು ನರಕದಂತೆ ಭಾಸವಾಗತೊಡಗಿದವು. ಮನೆಯಲ್ಲಿದ್ದರೆ ಹಳೆಯ ನೆನಪುಗಳು ಕಾಡುತ್ತವೆ ಎಂಬ ಕಾರಣಕ್ಕೆ ಅವರು ಎಲ್ಲವನ್ನೂ ತೊರೆದು ಸೈಕಲ್ ಏರಿ ಹೊರಟರು.

ಸಾವಿರಾರು ಕಿಲೋಮೀಟರ್‌ಗಳ ಸುದೀರ್ಘ ಪ್ರಯಾಣ
ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿರುವಂತೆ, ಅಂದು ಆರಂಭವಾದ ಇವರ ಪಯಣ ಇಂದಿಗೂ ನಿಂತಿಲ್ಲ. ಮೊದಲು ದ್ವಿಚಕ್ರ ಸೈಕಲ್‌ನಲ್ಲಿ ಪ್ರಯಾಣ ಆರಂಭಿಸಿದ ಅವರು, ವಯಸ್ಸಾದಂತೆ ಸಮತೋಲನ ಕಾಪಾಡಿಕೊಳ್ಳಲು ಈಗ ಮೂರು ಚಕ್ರದ ಸೈಕಲ್ (Tricycle) ಬಳಸುತ್ತಿದ್ದಾರೆ.
ಕ್ಸಿಂಜಿಯಾಂಗ್, ಗಾನ್ಸು, ಶಾಂಘೈ, ಝೆಜಿಯಾಂಗ್ ಮತ್ತು ಫುಜಿಯಾನ್ ಸೇರಿದಂತೆ ಚೀನಾದ ಬಹುತೇಕ ಪ್ರಾಂತ್ಯಗಳನ್ನು ಇವರು ಸೈಕಲ್‌ನಲ್ಲೇ ಸುತ್ತಿದ್ದಾರಲ್ಲದೆ ಪರ್ವತಗಳು, ಮರುಭೂಮಿಗಳು ಮತ್ತು ನಗರಗಳನ್ನು ದಾಟಿ ಸಾವಿರಾರು ಕಿಲೋಮೀಟರ್ ಕ್ರಮಿಸಿದ್ದಾರೆ. “ನಾನು ಭೂತಕಾಲವನ್ನು ಮರೆತಿದ್ದೇನೆ. ಈಗ ನನ್ನ ಉಳಿದ ಜೀವನವನ್ನು ಪ್ರವಾಸ ಮಾಡುವುದರಲ್ಲೇ ಕಳೆಯಲು ಬಯಸುತ್ತೇನೆ ಎಂದು ಜಾಂಗ್ ಝಾಂಗ್‌ಯಿ ಹೇಳುತ್ತಾರೆ.

ಇತ್ತೀಚೆಗೆ ಫುಜಿಯಾನ್‌ನಲ್ಲಿ ‘ಬಾಯಿ ಕ್ಸಿಯಾವೊಬಾಯಿ’ ಎಂಬ ಮಹಿಳೆ ಇವರನ್ನು ಭೇಟಿಯಾದ ಮೇಲೆ ಜಾಂಗ್ ಅವರ ಕಥೆ ಜಗತ್ತಿಗೆ ತಿಳಿಯಿತು. ವಯಸ್ಸಾದಂತೆ ಜಾಂಗ್ ಅವರ ನೆನಪಿನ ಶಕ್ತಿ ಕುಂದುತ್ತಿದ್ದರೂ, ದಾರಿಯಲ್ಲಿ ಸಿಗುವ ಅಪರಿಚಿತರು ನೀಡುವ ಆಹಾರ, ಬಟ್ಟೆ ಮತ್ತು ಪ್ರೀತಿಯಿಂದಲೇ ಅವರು ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಕೊನೆಗೂ ಮನೆಗೆ ಮರಳುವ ಹಂಬಲ
ಮೂರು ದಶಕಗಳ ಕಾಲ ಅಲೆಮಾರಿಯಾಗಿದ್ದ ಜಾಂಗ್, ಈಗ ಇಳಿವಯಸ್ಸಿನಲ್ಲಿ ತನ್ನೂರಿಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿದ ಕೈಫೆಂಗ್‌ನ ಸ್ಥಳೀಯ ಅಧಿಕಾರಿಗಳು, ಅವರು ಮರಳಿ ಬಂದ ತಕ್ಷಣ ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಜಾಂಗ್ ಅವರು ಇನ್ನೂ ದಾರಿಯಲ್ಲೇ ಇದ್ದಾರೆ. ಪ್ರಕೃತಿಯ ಮಡಿಲಲ್ಲಿ, ನಿರಂತರ ಚಲನೆಯಲ್ಲಿ ತನಗೆ ಎದುರಾದ ಬದುಕಿನ ಮಹಾದುಃಖಕ್ಕೆ ಮದ್ದನ್ನು ಹುಡುಕುತ್ತಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!