Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿದೇಶಕ್ಕೆ ತೆಗೆದುಕೊಂಡು ಹೋಗಿದ್ದ ಸಾವಿರ ವರ್ಷಗಳ ಹಿಂದಿನ ತಾಮ್ರ ಶಾಸನಕ್ಕೆ ಕೊನೆಗೂ ಭಾರತಕ್ಕೆ ವಾಪಸ್..!

Advertisement

ಹೇಗ್‌: ಕಳೆದ 100 ವರ್ಷಗಳಿಂದ ನೆದರ್ಲೆಂಡ್ಸ್‌ನ ಲೇಡನ್‌ ವಿವಿಯಲ್ಲಿ ಇರಿಸಲಾಗಿದ್ದ 1000 ವರ್ಷಗಳ ಹಿಂದಿನ ಚೋಳರ ಕಾಲಕ್ಕೆ ಸೇರಿದ "ಅನೈಮಂಗಲಂ ಪ್ಲೇಟ್ಸ್‌' ಎಂದು ಕರೆಯಲ್ಪಡುವ 21 ತಾಮ್ರದ ಶಾಸನಗಳನ್ನು ನೆದರ್ಲೆಂಡ್ಸ್‌ ಸರ್ಕಾರ ಶನಿವಾರ ಭಾರತಕ್ಕೆ ಹಿಂದಿರುಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೆದರ್ಲೆಂಡ್ಸ್‌ ಪ್ರವಾಸದಲ್ಲಿರುವಾಗಲೇ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ.

ತಮಿಳು ಲಿಪಿಯುಳ್ಳ 21 ತಾಮ್ರದ ಹಾಳೆಗಳನ್ನು ವೃತ್ತಾಕಾರದ ತಾಮ್ರದ ತಂತಿಯಲ್ಲಿ ಸೇರಿಸಲಾಗಿದ್ದು, ಇದರ ಒಟ್ಟು ತೂಕ 30 ಕೇಜಿಯಿದೆ. ಇದು ತಮಿಳುನಾಡು ಪ್ರಾಂತ್ಯವನ್ನು ಕ್ರಿ.ಶ. 985ರಿಂದ 1014ರವರೆಗೆ ಆಳಿದ 1ನೇ ರಾಜ ರಾಜ ಚೋಳ ಕಾಲದ್ದು. ಅದರಲ್ಲಿ, ಶ್ರೀವಿಜಯ ರಾಜ್ಯವನ್ನು ಆಳಿದ ಶ್ರೀ ಮಾರ ವಿಜಯತುಂಗ, ನಾಗಪಟ್ಟಣಂ ಪ್ರಾಂತ್ಯದಲ್ಲಿ ಬೌದ್ಧ ಧರ್ಮಗುರುಗಳಿಗಾಗಿ ಕಟ್ಟಿಸಿದ್ದ "ಚಾಮುಂಡಿ ವಿಹಾರ' ಎಂಬ ಬೌದ್ಧಮಠಕ್ಕೆ ಅನ್ನೈಮಂಗಲಂ ಎಂಬ ಗ್ರಾಮವನ್ನು ದಾನವಾಗಿ ನೀಡಿದ ಉಲ್ಲೇಖವಿದೆ.

ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ತಾಮ್ರದ ಫಲಕ ಹಸ್ತಾಂತರಿಸಿದೆ. ನೆದರ್ಲೆಂಡ್ ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಇದನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ.

ಭಾರತಕ್ಕೆ ಹಸ್ತಾಂತರ ಮಾಡಲಾದ ತಾಮ್ರ ಫಲಕಗಳು

ನೆದರ್ಲೆಂಡ್ ತಲುಪಿದ್ದು ಹೇಗೆ?: ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್‌ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರ ದಲ್ಲಿ ಅದು ಲೈಡೆನ್ ವಿವಿ ಸೇರಿತ್ತು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಮತ್ತು ಅನುದಾನ ಒದಗಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಕಿರಣ್ ಜಾಧವ ಆಟೋನಗರ, ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿSSLC ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಥಳಿತವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನಇನ್ಮುಂದೆ ವೈದ್ಯರ ಚೀಟಿ ಇಲ್ಲದೇ ಕೆಮ್ಮಿನ ಔಷಧ ಮಾರಾಟ ನಿಷೇಧಮಾರಿಹಾಳ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ; ಉಚಿತ ನೇತ್ರ ತಪಾಸಣೆಯಿಂದ ಗ್ರಾಮಸ್ಥರಿಗೆ ಪ್ರಯೋಜನಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ ಸರ್ಕಾರಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ