ಬೆಳಗಾವಿ : ಅಖಿಲ ಭಾರತ ಮಾಧ್ವ ಮಹಾಮಂಡಲದ ಶ್ರೀ ಕೃಷ್ಣಮಠ ಹಾಗೂ ಸಭಾ ಭವನದ ವತಿಯಿಂದ
ಆರ್.ಪಿ.ಡಿ. ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಅಧಿಕ ಜೇಷ್ಠ ಮಾಸದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಮೇ
17 ರಿಂದ ಜೂನ್ 15 ರ ವರೆಗೆ
ಆಯೋಜನೆ ಮಾಡಲಾಗಿದೆ.
ಅಧಿಕ ಮಾಸ ಮೂರು ವರ್ಷಗಳಿಗೊಮ್ಮೆ ಬರುವ ಮಾಸ. ಈ ಮಾಸಕ್ಕೆ ನಿಯಾಮಕ ಆನಂದಾವತಿ ಪುರುಷೋತ್ತಮ. ಅದರಂತೆ ಈ ಮಾಸದಲ್ಲಿ 33 ಸಂಖ್ಯೆಯಲ್ಲಿ ಮಾಡುವ ದೇವತಾ ಕಾರ್ಯಗಳು, ದಾನಗಳು, ಹೆಚ್ಚು ಫಲದಾಯಕಗಳು. "ಅನಂತಂ ವಿಷ್ಣುಸನ್ನಿಧೇ'' ಎಂದು ಹೇಳಿದಂತೆ ಪುರಾಣ ಪುರುಷೋತ್ತಮನಾದ ಶ್ರೀಕೃಷ್ಣನ ಸನ್ನಿದಾನದಲ್ಲಿ ಮಾಡುವ ಕಾರ್ಯಗಳಂತೂ ಅನಂತ ಫಲದಾಯಕಗಳು. ಆದ್ದರಿಂದ ಈ ಅಧಿಕ ಜೇಷ್ಠ ಮಾಸದ ಪರ್ವಕಾಲದಲ್ಲಿ ಪ್ರತಿನಿತ್ಯವೂ ಶ್ರೀಕೃಷ್ಣನ ಸನ್ನಿಧಾನದಲ್ಲಿ 33 ಗಂಧ, ತುಳಸಿ, ಪುಷ್ಪ ಅಪೂಪ, ಮಂಗಳಾರತಿ ಸೇವೆ ನಡೆಯಲಿದೆ. ಪುರುಷೋತ್ತಮ ಪ್ರೀತ್ಯರ್ಥವಾಗಿ ಪ್ರತಿ ನಿತ್ಯ ಪುರುಷೋತ್ತಮ ಹೋಮ ಹಾಗೂ 33 ಕಲಶಗಳಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ, ಅಖಂಡ ಒಂದು ತಿಂಗಳು ಶ್ರೀಮದ್ ಭಾಗವತ ಪ್ರವಚನ ಮತ್ತು ಅಧಿಕ ಮಾಸ ಮಹಾತ್ಮೆ ಪ್ರವಚನ ಕಾರ್ಯಕ್ರಮವನ್ನು ಶ್ರೀನಿವಾಸ ಆಚಾರ್ಯ ಹೊನ್ನಿದಿಬ್ಬ ನಡೆಸಿ ಕೊಡುವರು.
ಪ್ರತಿನಿತ್ಯ ಪುರುಷೋತ್ತಮ ಹೋಮ ಸಹಿತ ಒಂದೊಂದು ವಿಶೇಷ ಹೋಮಗಳು ನಡೆಯಲಿವೆ.
ಗಣಹೋಮ, ಧನ್ವಂತರಿ ಹೋಮ, ಲಕ್ಷ್ಮೀ ಹೃದಯ ಹೋಮ, ನವಗ್ರಹ ಹೋಮ,
ಸುದರ್ಶನ ಹೋಮ, ನಾರಾಯಣ ಹೃದಯ ಹೋಮ, ನಾರಾಯಣ ಹೋಮ, ವಾಮನಮಂತ್ರ ಹೋಮ, ನಾಮತ್ರಯ ಮಂತ್ರ ಹೋಮ, ಕೃಷ್ಣಮಂತ್ರ ಹೋಮ, ಭೂವರಾಹ ಮಂತ್ರ ಹೋಮ, ನರಸಿಂಹಮಂತ್ರ ಹೋಮ, ವಿಷ್ಣುಗಾಯತ್ರಿ ಹೋಮ, ದುರ್ಗಾ ಹೋಮ,
ವಿಷ್ಣುಸಹಸ್ರನಾಮ ಹೋಮ,
ಗಾಯತ್ರಿ ಹೋಮ, ಮನ್ಯುಸೂಕ್ತ ಪುನಶ್ಚರಣ ಹೋಮ, ಪವಮಾನ ಹೋಮ, ವಾಸುದೇವಮಂತ್ರ ಹೋಮ, ವಾಯುಸ್ತುತಿ ಪುನಶ್ಚರಣ ಹೋಮ,
ಸಂತಾನಗೋಪಾಲಕೃಷ್ಣ ಹೋಮ, ಪುರುಷಸೂಕ್ತ ಹೋಮ, ಮೃತ್ಯುಂಜಯ ಹೋಮ, ಶ್ರೀಸೂಕ್ತ ಹೋಮ,
ಭಾಗ್ಯಸೂಕ್ತ ಹೋಮಗಳನ್ನು ಏರ್ಪಡಿಸಲಾಗಿದೆ. ಮಾಹಿತಿಗೆ ಸಂಪರ್ಕಿಸಬಹುದು.
ಪಂ. ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ :ಮೊಬೈಲ್ ಸಂಖ್ಯೆ -9886457735
ಮತ್ತು ಪಂ. ವೆಂಕಟೇಶಾಚಾರ್ಯ ಉಪಾಧ್ಯಾಯ ಮೊಬೈಲ್ ಸಂಖ್ಯೆ : 9480750660 ಇಲ್ಲಿಗೆ ಸಂಪರ್ಕಿಸಬಹುದು.
