Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಮಾಸ ಪ್ರಯುಕ್ತ ವಿಶೇಷ ಉಪನ್ಯಾಸ

 

ಬೆಳಗಾವಿ : ರವಿವಾರದಂದು ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಆರ್. ಎಲ್. ಎಸ್.ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಶಶಿಕಾಂತ ತಾರದಾಳೆ ' 'ಮಾನವ ಧರ್ಮ' ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಕಷ್ಟದಲ್ಲಿ ಇರುವವರಿಗೆ ಸಹಾಯ, ಶೋಷಿತರಿಗೆ ನಿರ್ಗತಿಕರಿಗೆ, ಬಡವರಿಗೆ ನಮ್ಮ ಕೈಲಾದ ಸೇವೆ ಮಾಡುವುದೇ ಧರ್ಮ. ನಮ್ಮ ನಮ್ಮಲ್ಲಿ ಒಡೆದು ಆಳುವುದು, ಆಸ್ತಿ ಅಂತಸ್ತು ಬರಲಿ ಎಂಬ ಹಪಾಹಪಿ ನಮ್ಮ ಧರ್ಮವಲ್ಲ . ನಮ್ಮಲ್ಲಿರುವ ಒಳ್ಳೆಯತನವನ್ನು ಬೀರುವುದೇ ಧರ್ಮ. ಜೀವನ ಮಾದರಿಯಾಗಲಿ, ಎಲ್ಲರಿಗೂ ಅನುಕರಣೀಯವಾಗಲಿ, ಆ ನಿಟ್ಟಿನಲ್ಲಿ ನಾವೆಲ್ಲ ವ್ಯಸನಮುಕ್ತ ಸಮಾಜವನ್ನು ಕಟ್ಟುವುದೇ ನಮ್ಮ ಧರ್ಮವಾಗಿದೆ. ಸಮಯ ಪ್ರಜ್ಞೆ,ಸಂಸ್ಕಾರ, ನಮ್ಮತನ ಮನೋಭಾವನೆ ಇರಬೇಕು. ಹೃದಯವಂತಿಕೆ ಮತ್ತು ಹಂಚಿಕೊಳ್ಳುವ ಭಾವದಿಂದ ಎಲ್ಲರೂ ಬದುಕೋಣ.ಆ ನಿಟ್ಟಿನಲ್ಲಿ ಮಾನವರಾಗಿ ಹುಟ್ಟಿರುವ ನಾವು ನಿಜವಾದ ಧರ್ಮವನ್ನು ಪಾಲಿಸೋಣ ಎಂದು ಮಾನವ ಧರ್ಮದ ಕುರಿತಾದ ಅನೇಕ ಭಾವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಲಿಂಗಾಯತ ಸಂಘಟನೆಯ ಸುರೇಶ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಪಿರಮಿಡ್ ಮೆಡಿಟೇಷನ್ ಸೆಂಟರ್ ಮುಖ್ಯಸ್ಥೆ ಸರೋಜಾ ಮಲ್ಲಿಕಾರ್ಜುನ ಧ್ಯಾನದ ಮಹತ್ವವನ್ನು ವಿವರಿಸುತ್ತಾ ಧ್ಯಾನದಿಂದ ರೋಗ ಮುಕ್ತಿ ಪಡೆಯಬಹುದು. ಧ್ಯಾನ ಎಂದರೆ ನಾವು ಧ್ಯಾನದ ಸ್ಥಿತಿಗೆ ಬರುವುದೇ ಧ್ಯಾನ ಎಂದು ಹೇಳುತ್ತಾ ಧ್ಯಾನದಿಂದ ಅಪಾರ ಸಾಧನೆ ಸಾಧ್ಯ. ಆ ನಿಟ್ಟಿನಲ್ಲಿ ಧ್ಯಾನದ ಮಹತ್ವ ಅರಿತು ನಾವೆಲ್ಲ ಧ್ಯಾನದ ಶಕ್ತಿಯಿಂದ ಎಲ್ಲವನ್ನು ಗೆಲ್ಲೋಣ ಎಂದರು. ಸ್ವಾತಂತ್ರೋತ್ಸವದ ಶುಭವಾರದ ನಿಮಿತ್ತ ಬಸಮ್ಮ ವಸ್ತ್ರದ ' ಮೇರೆ ವತನ್ ಕೆ ಲೋಗೋ' ದೇಶಭಕ್ತಿ ಗೀತೆ ಹಾಡಿ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದರು.

ವಿ.ಕೆ.ಪಾಟೀಲ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಬಾಳ ಗೌಡ ದೊಡ್ಡಭಂಗಿ,ಸುನಿಲ ಸಾಣಿಕೊಪ್ಪ, ಬಾಬು ತಿಗಡಿ,ಶಿವಾನಂದ ನಾಯಕ, ವಿ. ಎಂ. ಬೇವಿನಕೊಪ್ಪಮಠ,ಸುವರ್ಣ ತಿಗಡಿ,ಸುವರ್ಣಾ ಗುಡಸ,ಜಯಕ್ಕಾ,ಬಿ.ಪಿ.ಜೇವಣಿ, ಶಿವಾನಂದ ತಲ್ಲೂರ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಬಾಳಪ್ಪ ಕಾಡಣ್ಣವರ ಪ್ರಸಾದ ಸೇವೆ ಮಾಡಿದರು. ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿ ಕೊಟ್ಟರು. ವಿ. ಕೆ. ಪಾಟೀಲ ಸ್ವಾಗತಿಸಿದರು. ಎಂ.ವೈ. ಮೆಣಸಿನಕಾಯಿ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ