Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೊಲೆ ರಹಸ್ಯ ಬಿಚ್ಚಿಟ್ಟ ಸಾಕು ಗಿಳಿ ; ಅದರ ಒಂದು ಪುಟ್ಟ ನುಡಿಯಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು…!

ಅಪರಾಧ ಲೋಕದ ಇತಿಹಾಸದಲ್ಲಿ ಸಾಕುಪ್ರಾಣಿಗಳು ನೀಡಿದ ಸುಳಿವಿನಿಂದ ಪ್ರಕರಣಗಳನ್ನು ಭೇದಿಸಿದ ಅನೇಕ ಉದಾಹರಣೆಗಳಿವೆ.

 ಅಮೆರಿಕಾದಲ್ಲಿ ನಡೆದ ಈ ಕೊಲೆ ಪ್ರಕರಣವು 2015ರಲ್ಲಿ ಮನೆಯಲ್ಲಿದ್ದ ಸಾಕು ಗಿಳಿಯೊಂದು ತನ್ನ ಯಜಮಾನನ ಕೊನೆಯ ಕ್ಷಣದ ಆರ್ತನಾದವನ್ನು ಅನುಕರಿಸುವ ಮೂಲಕ ಕೊಲೆಗಡುಕ ಯಾರು ಎಂಬುದನ್ನು ಪತ್ತೆ ಹಚ್ಚಲು ನೆರವಾದ ಪ್ರಸಂಗಕೊಲೆ ಆರೋಪಿಯನ್ನು ಪತ್ತೆ ಹಚ್ಚಲು ನೆರವಾಗಿದ್ದು ಯಾವತ್ತಿಗೂ ಗಮನ ಸೆಳೆಯುತ್ತದೆ.

ಮಿಚಿಗನ್‌ನ ಸ್ಯಾಂಡ್ ಲೇಕ್ ನಿವಾಸಿ 45 ವರ್ಷದ ಮಾರ್ಟಿನ್ ಡ್ಯೂರಾಮ್ ಅವರು ತಮ್ಮದೇ ಮನೆಯಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರು. ಅವರ ದೇಹದಲ್ಲಿ ಹಲವಾರು ಗುಂಡೇಟುಗಳಿದ್ದವು. ಅವರ ಪತ್ನಿ ಗ್ಲೆನ್ನಾ ಡ್ಯೂರಾಮ್ ಕೂಡ ಗುಂಡೇಟಿನಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊದಲ ನೋಟಕ್ಕೆ ಇದು ಯಾರೋ ಹೊರಗಿನವರು ಮಾಡಿದ ದಾಳಿಯಂತೆ ಕಂಡರೂ, ತನಿಖಾ ತಂಡಕ್ಕೆ ಅಸಲಿ ಸತ್ಯ ತಿಳಿದಿರಲಿಲ್ಲ.

ಆದರೆ ತನಿಖೆ ನಡೆಯುತ್ತಿರುವಾಗ, ಮನೆಯಲ್ಲಿದ್ದ ‘ಬಡ್’ ಎಂಬ ಆಫ್ರಿಕನ್ ಗ್ರೇ (African Grey) ತಳಿಯ ಗಿಳಿಯ ವರ್ತನೆ ಎಲ್ಲರ ಗಮನ ಸೆಳೆಯಿತು. ಮಾರ್ಟಿನ್ ಸಾವಿನ ನಂತರ ಆ ಗಿಳಿಯು ವಿಚಿತ್ರವಾಗಿ ವರ್ತಿಸಲು ತೊಡಗಿತ್ತು. ಕುಟುಂಬದ ಸದಸ್ಯರ ಪ್ರಕಾರ, ಆ ಗಿಳಿಯು ಮಾರ್ಟಿನ್ ಮತ್ತು ಗ್ಲೆನ್ನಾ ನಡುವೆ ನಡೆದ ಭೀಕರ ಜಗಳವನ್ನು ಪದೇ ಪದೇ ಅನುಕರಿಸುತ್ತಿತ್ತು. ಗಿಳಿಯು ಗಂಡ-ಹೆಂಡತಿಯ ಜಗಳದ ಧ್ವನಿಯಲ್ಲಿ ಕಿರುಚುತ್ತಾ, ಕೊನೆಯಲ್ಲಿ ಮಾರ್ಟಿನ್ ಧ್ವನಿಯನ್ನು ಅನುಕರಿಸಿ “ಡೋಂಟ್ ಶೂಟ್!” (ಗುಂಡು ಹಾರಿಸಬೇಡ!) ಎಂದು ದೈನ್ಯವಾಗಿ ಕೂಗುತ್ತಿತ್ತು.

ಮಾರ್ಟಿನ್ ಅವರ ಮಾಜಿ ಪತ್ನಿ ಕ್ರಿಸ್ಟಿನಾ ಕೆಲ್ಲರ್ ಪ್ರಕಾರ, ಆ ಗಿಳಿಯು ಮಾರ್ಟಿನ್ ಸಾವಿನ ಸಮಯದಲ್ಲಿ ಅನುಭವಿಸಿದ ಆತಂಕ ಮತ್ತು ನೋವಿನ ಧ್ವನಿಯನ್ನು ಅಚ್ಚುಕಟ್ಟಾಗಿ ನಕಲು ಮಾಡುತ್ತಿತ್ತು. ಆಫ್ರಿಕನ್ ಗ್ರೇ ಗಿಳಿಗಳು ಮನುಷ್ಯರ ಧ್ವನಿ ಮತ್ತು ಸಂಭಾಷಣೆಯನ್ನು ನೆನಪಿಟ್ಟುಕೊಳ್ಳುವ ಅದ್ಭುತ ಸಾಮರ್ಥ್ಯ ಹೊಂದಿರುವುದು ಇಲ್ಲಿ ನಿರ್ಣಾಯಕವಾಯಿತು.

ಕಟಕಟೆಯಲ್ಲಿ ಗಿಳಿಯ ಸಾಕ್ಷ್ಯ ಸಾಧ್ಯವೇ?
ಕಾನೂನಿನ ಪ್ರಕಾರ ಪ್ರಾಣಿ ಅಥವಾ ಹಕ್ಕಿಯ ಮಾತುಗಳನ್ನು ನ್ಯಾಯಾಲಯದಲ್ಲಿ ಅಧಿಕೃತ ಸಾಕ್ಷ್ಯವನ್ನಾಗಿ ಪರಿಗಣಿಸಲು ಬರುವುದಿಲ್ಲ. ಆದರೂ, ಪೊಲೀಸರು ಗಿಳಿಯ ಸುಳಿವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ಚುರುಕುಗೊಳಿಸಿದರು. ವಿಧಿವಿಜ್ಞಾನ ಪರೀಕ್ಷೆ (Forensic evidence), ದಂಪತಿ ನಡುವಿದ್ದ ಆರ್ಥಿಕ ಸಂಕಷ್ಟ ಮತ್ತು ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು ಪತ್ನಿ ಗ್ಲೆನ್ನಾ ಕಡೆಗೆ ಬೆರಳು ತೋರಿಸಿದವು. ಗ್ಲೆನ್ನಾ ಮೊದಲು ಪತಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು ಸಾಬೀತಾಯಿತು.
2017ರಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ನಡೆದು, ಗ್ಲೆನ್ನಾ ಡ್ಯೂರಾಮ್ ಅವರನ್ನು ಮೊದಲ ಹಂತದ ಕೊಲೆಗಾರ್ತಿ ಎಂದು ಘೋಷಿಸಲಾಯಿತು. 

ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಈ ಪ್ರಕರಣವು ಕೇವಲ ಕೊಲೆ ರಹಸ್ಯದ ಕಾರಣಕ್ಕಷ್ಟೇ ಅಲ್ಲದೆ, ಅರಿಯದ ಸಾಕುಪ್ರಾಣಿಯೊಂದು ಹೇಗೆ ಅಚಾನಕ್ಕಾಗಿ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂಬ ಕಾರಣಕ್ಕೆ ಇಂದಿಗೂ ಜಗತ್ತಿನಾದ್ಯಂತ ನೆನಪಿಸಿಕೊಳ್ಳಲಾಗುತ್ತದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಪೊಲೀಸರ ಬೇಜವಾಬ್ದಾರಿಗೆ ಮೊಮ್ಮಗನಿಂದಲೇ ಕೊಲೆಯಾದ ಅಜ್ಜಿ..!ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಅವಘಡ; 68 ಪ್ರಯಾಣಿಕರ ಸ್ಥಳಾಂತರವಿದೇಶಕ್ಕೆ ತೆಗೆದುಕೊಂಡು ಹೋಗಿದ್ದ ಸಾವಿರ ವರ್ಷಗಳ ಹಿಂದಿನ ತಾಮ್ರ ಶಾಸನಕ್ಕೆ ಕೊನೆಗೂ ಭಾರತಕ್ಕೆ ವಾಪಸ್..!ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು