Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕುಡಿಯಲು ಹಣಕ್ಕೆ ಪೀಡಿಸುತ್ತಿದ್ದ ಮಗನನ್ನು ಕೊಂದ ತಾಯಿ

Advertisement

ಮೈಸೂರು: ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಎರಡನೇ ಮಗನನ್ನು ಚಾಮುಂಡಿ ಬೆಟ್ಟ ರಸ್ತೆಯ ತಾವರೆ ಕಟ್ಟೆಯ ಬಳಿ ಕರೆತಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಕೆಸರೆಯ ಕುರಿಮಂಡಿ ನಿವಾಸಿ ಮಂಜುಳಾ (60) ಬಂಧಿತ ಆರೋಪಿ. ರಮೇಶ್(45) ಕೊಲೆಯಾದವರು. ತಾವರೆ ಕಟ್ಟೆಯ ಬಳಿ ಏ.14ರಂದು ಬೆಳಿಗ್ಗೆ ಅಪರಿಚಿತ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಜರ್‌ಬಾದ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಎಂ.ಮಹದೇವಸ್ವಾಮಿ ನೇತೃತ್ವದ ತಂಡವು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಮೂಲಕ ಆರೋಪಿಯ ಚಲನ ವಲನ ಗಮನಿಸಿ ಗುರುವಾರ ಬಂಧಿಸಿದರು.

ಆರೋಪಿಯ ಪತಿ ನಿಧನರಾಗಿದ್ದು, ತಾಯಿ ಹಾಗೂ ಅವಿವಾಹಿತ ಮಗ ಒಟ್ಟಿಗೇ ವಾಸಿಸುತ್ತಿದ್ದರು. ಮಹಿಳೆಯು ಜೀವನೋಪಾಯಕ್ಕೆ ಮನೆಕೆಲಸವನ್ನು ನೆಚ್ಚಿಕೊಂಡಿದ್ದರು. ಮದ್ಯವ್ಯಸನಿಯಾಗಿದ್ದ ಮಗ ಏ.13ರ ರಾತ್ರಿ ಹಣ ಕೊಡುವಂತೆ ಜಗಳವಾಡಿ ಹಿಂಸೆ ನೀಡಿದ್ದ. ಅದರಿಂದ ಬೇಸತ್ತ ಆಕೆ, ಏ.14ರಂದು ಬೆಳಿಗ್ಗೆ 8.30ರ ವೇಳೆ ರಿಕ್ಷಾದಲ್ಲಿ ಆತನನ್ನು ಕರೆತಂದು ದೊಣ್ಣೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಕೊಂದರೆಂದು ವಿಚಾರಣೆ ವೇಳೆ ಗೊತ್ತಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ವಿವಿಧೆಡೆ 200 ಸಿಸಿಟಿವಿ ಕ್ಯಾಮೆರಾಗಳಲ್ಲಿ ಇಬ್ಬರ ಚಲನವಲನ ಗಮನಿಸಿದ ಬಳಿಕ ಆಕೆಯನ್ನು ಸೆರೆಹಿಡಿಯಲಾಗಿದೆ' ಎಂದು ನಗರ ಪೊಲೀಸ್‌ ಆಯುಕ್ತ ಸೀಮಾ ಲಾಟ್ಕರ್ ತಿಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು ಎರಡನೇ ಹಂತದ ಸಚಿವ ಸಂಪುಟ ರಚನೆ ವೇಳೆ ಗಾಣಿಗ ಸಮಾಜದ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅವಕಾಶ ನೀಡಲು ಗಾಣಿಗ ಮುಖಂಡರ ಮನವಿಬಣ್ಣದ ಕುಂಚದಿಂದ ಕ್ಯಾಮೆರಾದ ಕಣ್ಣಿನವರೆಗೆ  ಕರ್ನಾಟಕ ಛಾಯಾ ರತ್ನ ಪಿ.ಕೆ. ಬಡಿಗೇರ ಅವರ ಸಾಧನೆಯ ಬೆಳಕುಈಜು ಬಾರದ ಅಣ್ಣ-ತಮ್ಮ ನೀರುಪಾಲುಈಜಲು ಹೋದ ಬಾಲಕ ಸಾವುಶಿವಗಿರಿ ಸೊಸೈಟಿ : ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಬೈಲೂರು ಗ್ರಾಮದಲ್ಲಿ ಹೆಸ್ಕಾಂ 33/11 ಕೆವಿ ಉಪಕೇಂದ್ರ ಸ್ಥಾಪನೆಗೆ  ಶಾಸಕರ ವಿಶೇಷ ಮುತುವರ್ಜಿವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕ ವಿಠ್ಠಲ ಹಲಗೇಕರ ಮಹತ್ವದ ಹೆಜ್ಜೆರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ10 ಗಂಟೆ ಒಳಗೆ ಕಚೇರಿಯಲ್ಲಿರಿ