ಚಿಕ್ಕೋಡಿ:
ಇವರು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ, ಸಣ್ಣ ಹಳ್ಳಿಯ ನಿವಾಸಿ, ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೊಟೇಲ್ ಪಕ್ಕದಲ್ಲಿ, ಪಾನ್-ಬೀಡಾ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಇವರ ಹೆಸರು ರಾಜೀವ ಶೆಟ್ಟಿ, ರವಿವಾರ ದಿ : 14-06-2026 ರಂದು ಸಂಜೆಯ ಸಮಯಕ್ಕೆ ಒಬ್ಬ ಅಪರಿಚಿತ ವಿದ್ಯಾವಂತ ಯುವಕ, ಇವರ ಅಂಗಡಿಗೆ ಬಂದು ವ್ಯಾಪಾರ ಮಾಡಿ ಹಣ ಕೊಟ್ಟು ತೆರಳಿದರು, ಅವರ ಪಾಕೆಟ್ (ಮನಿ ಪರ್ಸ) ಜಾರಿ ಇವರ ಅಂಗಡಿಯ ಮುಂದೆ ಬಿದ್ದಿತು, ಇದನ್ನು ಯಾರೂ ಕೂಡ ಕಂಡಿರಲಿಲ್ಲ, ಕೆಲ ಸಮಯದ ನಂತರ ರಾಜೀವ ಇವರ ಗಮನಕ್ಕೆ ಬಂದಿತು, ಕೂಡಲೇ ಅದನ್ನು ಎತ್ತಿಕೊಂಡ ರಾಜೀವ ಇದು ಯಾರದು ? ಎಂಬ ಬಗ್ಗೆ ಯೋಚಿಸಿದರು, ಗೊತ್ತಾಗದೇ ಇರುವಾಗ ಅವರು ಪಾಕೆಟ್ ತೆರೆದು ನೋಡಿದರು, ಅದರಲ್ಲಿ ಸುಮಾರು 10,000/- ಗಳ ವರೆಗೆ ಹಣ ಹಾಗೂ ಮಹತ್ವದ ಕಾರ್ಡುಗಳು ಕಂಡ ಅವರು ಗಾಬರಿಯಾದರು, ಅದರಲ್ಲಿ ವ್ಹಿ ಆರ್ ಎಲ್ ಬಸ್ ಟಿಕೇಟ್ ಕಂಡು ಬಂದಿತು, ಯಾರಾದರೂ ಬರಬಹುದು ಎಂದು ಕಾದಿದಾಗ ಅಪರಿಚಿತ ಯುವಕ ಹುಡುಕುತ್ತಾ ಇವರ ಬಳಿ ಬಂದು ಪಾಕೆಟ್ ಕಂಡಿದ್ದೀರಾ ಅಂತಾ ಪ್ರಶ್ನಿಸಿದರು, ತಕ್ಷಣ ಪಾಕೀಟನ್ನು ಅವರ ಕೈಗೆ ನೀಡಿ ಮಾನವೀಯತೆ ಮೆರೆದರು, ಕೂಡಲೇ ಆ ಯುವಕ ಇವರ ಪ್ರಾಮಾಣಿಕ ನಡತೆಯನ್ನು ಕಂಡು ಒಂದು ಸಾವಿರ ರೂ ಹಣ ನೀಡಲು ಮುಂದಾದರು, ಸದಾ ಅಡಚಣೆಯಲ್ಲಿರುವ ರಾಜೀವ ಹಣ ಸ್ವೀಕರಿಸದೇ ತಿರಸ್ಕರಿಸಿ ಪರರ ಹಣ ನಮಗೆ ಬೇಕಿಲ್ಲ ಸರ್, ಧನ್ಯವಾದಗಳು ಅಂತಾ ಹೇಳಿ ನಗುಮುಖದಿಂದ ಯುವಕನನ್ನು ಕಳಿಸಿದರು, ಇಲ್ಲಿ ನಾವು ಕಾಣುವುದು ಇಷ್ಟೇ ಎಷ್ಟೇ ಬಡತನ ಇದ್ದರೂ ತಮ್ಮ ಪ್ರಾಮಾಣಿಕ ಬದುಕು ಸಾಗಿಸುವ ಇಂತಹ ಗುಣವಂತರು ನಮ್ಮ ನಿಮ್ಮ ಮುಂದೆ ಇದ್ದಾರೆ ಎಂಬುದನ್ನು ಮೆಚ್ಚಲೇ ಬೇಕು.
ಬರಹ : ಚಂದ್ರಕಾಂತ ಹುಕ್ಕೇರಿ, ಸಮಾಜ ಸೇವಕರು, ಚಿಕ್ಕೋಡಿ.