ಮಲಪ್ರಭಾ ನದಿ ತೀರದಲ್ಲಿ ಭಯ ಸೃಷ್ಟಿಸಿದ ಮೊಸಳೆ
ಬೆಳಗಾವಿ: ಬೈಲಹೊಂಗಲ ಸಮೀಪದ ಮಾಟೊಳ್ಳಿ, ಲಿಂಗದಳ್ಳಿ ಗ್ರಾಮದ ಮಲಪ್ರಭಾ ನದಿ ತೀರದಲ್ಲಿ ಇದೀಗ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದೆ. ಇದರಿಂದ ನದಿಗೆ ಇಳಿಯುವ, ನದಿತೀರದ ನಾಗರಿಕರಲ್ಲಿ ಭಯ ಸೃಷ್ಟಿಯಾಗಿದೆ. ಆಗಾಗ ಮೊಸಳೆ ಕಾಣಿಸಿಕೊಳ್ಳುತ್ತಿದ್ದು ಯುವಕರು ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದು ವೈರಲ್ ಆಗಿದ್ದು ನದಿ ತಟದ ಜನ ಈಗ ನದಿ ಬಳಿ ಹೋಗಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ತಾಲೂಕು ಆಡಳಿತ ನದಿ ತಟದ ಜನರು ನದಿಗೆ ಇಳಿಯಬಾರದು. ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ. ನಾಗರಿಕರು ಸಹಾ ಈಗ ಮಲಪ್ರಭೆಯಲ್ಲಿ ಕಂಡುಬಂದಿರುವ ಮೊಸಳೆಗಳನ್ನು ಹಿಡಿಯಲು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.