Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚೀನಾದ ರೋಬೋಟ್‌ ನಿಂದ ಗಿನ್ನೆಸ್‌ ದಾಖಲೆ : 100 ಕಿಮೀಗಿಂತಲೂ ಹೆಚ್ಚು ದೂರ ನಡೆದ ರೋಬೋಟ್‌…!

ಶಾಂಘೈ (ಚೀನಾ): ಚೀನಾದ ಮಾನವ ರೂಪದ (Humanoid) ರೋಬೋಟ್, ಮೂರು ದಿನಗಳಲ್ಲಿ 100 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records – GWR) ಸ್ಥಾಪಿಸಿದೆ. ಮಾನವರೂಪಿ ಯಂತ್ರವೊಂದು ಅತ್ಯಂತ ದೂರ ನಡೆದ ದಾಖಲೆ ಇದಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 169 ಸೆಂಟಿಮೀಟರ್ ಎತ್ತರದ ಅಗಿಬಾಟ್ A2 (Agibot A2) ಎಂಬ ಮಾನವರೂಪಿ ರೋಬೋಟ್ ತನ್ನ ಪ್ರಯಾಣವನ್ನು ನವೆಂಬರ್ 10 ರ ಸಂಜೆ ಪೂರ್ವ ಚೀನಾದ ಸುಝೌ (Suzhou) ನಗರದಿಂದ ಪ್ರಾರಂಭಿಸಿತು. ಇದು ಹೆದ್ದಾರಿಗಳು ಮತ್ತು ನಗರದ ಬೀದಿಗಳನ್ನು ದಾಟಿ, ನವೆಂಬರ್ 13 ರಂದು ಶಾಂಘೈನ ಐತಿಹಾಸಿಕ ಬಂಡ್ (Bund) ಪ್ರದೇಶವನ್ನು ತಲುಪಿತು. ಈ ರೋಬೋಟ್ ಒಟ್ಟು 106.286 ಕಿಲೋಮೀಟರ್ ದೂರವನ್ನು ಕ್ರಮಿಸಿದೆ.
ದಾಖಲೆಯ ವಿವರಗಳು
ಈ ರೋಬೋಟ್ ಅನ್ನು ಅಗಿಬಾಟ್ ಇನ್ನೊವೇಶನ್‌ (ಶಾಂಘೈ) ಟೆಕ್ನಲಾಜಿಸ್‌ (Agibot Innovation (Shanghai) Technology Co., Ltd). ಕಂಪನಿಯು ನಿರ್ಮಿಸಿದೆ. ಅಗಿಬಾಟ್ A2 ರೋಬೋಟ್ ಏಪ್ರಿಲ್ ಮತ್ತು ಮೇ 2025 ರ ನಡುವೆ ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಸಮಯದಲ್ಲಿ ಅದು ಬೀಳುವುದನ್ನು ತಪ್ಪಿಸಲು ವಿಶೇಷವಾಗಿ ಮಾರ್ಪಾಡು ಮಾಡಲಾಗಿತ್ತು. ಈ ರೋಬೋಟ್ ಆಗಸ್ಟ್ 17 ರಂದು 40°C ಗೆ ಸಮೀಪಿಸುತ್ತಿರುವ ಅಧಿಕ ತಾಪಮಾನದಲ್ಲಿ 24 ಗಂಟೆಗಳ ಕಾಲ ಸ್ವತಂತ್ರವಾಗಿ ನಡಿಗೆಯನ್ನು (autonomous walk) ಯಶಸ್ವಿಯಾಗಿ ಪೂರ್ಣಗೊಳಿಸಿತ್ತು, ಇದನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.
“100 ಕಿ.ಮೀ ಗಿಂತ ಹೆಚ್ಚು ನಡಿಗೆಯ ಈ ಗಿನ್ನೆಸ್‌ ವಿಶ್ವ ದಾಖಲೆ (GWR) ಸವಾಲು ಅಗಿಬಾಟ್ A2 ರೋಬೋಟ್‌ಗೆ ಮಹತ್ವದ ಪ್ರಗತಿಯನ್ನು ಖಚಿತಪಡಿಸುತ್ತದೆ,” ಎಂದು ಗಿನ್ನೆಸ್ ವಿಶ್ವ ದಾಖಲೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಂಚಾರ ನಿಯಮ ಪಾಲಿಸಿದ ರೋಬೋಟ್

ರೋಬೋಟ್ ತಯಾರಕ ಕಂಪನಿಯು ‘X’ ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅದರ ಈ ಎರಡು-ಕಾಲಿನ ರೋಬೋಟ್ ತನ್ನ ನಿರಂತರ 106.286 ಕಿಲೋಮೀಟರ್ ಪ್ರಯಾಣದ ಸಮಯದಲ್ಲಿ ಸಂಚಾರ ನಿಯಮಗಳಿಗೆ ಬದ್ಧವಾಗಿ ಸಂಚರಿಸಿದೆ. ಈ ಸಾಧನೆಯನ್ನು ಗುರುವಾರ ಮೊದಲನೆಯದೆಂದು ಪ್ರಮಾಣೀಕರಿಸಲಾಗಿದೆ.
ಅಗಿಬಾಟ್ ಪ್ರಕಟಿಸಿದ ವೀಡಿಯೊ ತುಣುಕುಗಳು ಅಗಿಬಾಟ್ A2 ರೋಬೋಟ್ ಸೈಕ್ಲಿಸ್ಟ್‌ಗಳು ಮತ್ತು ಸ್ಕೂಟರ್‌ಗಳ ಪಕ್ಕದಲ್ಲಿ ರಸ್ತೆಯ ಉದ್ದಕ್ಕೂ ನಡೆಯುವುದನ್ನು ತೋರಿಸುತ್ತವೆ.
ಗ್ರಾಹಕ ಸೇವೆಗೆ ವಿನ್ಯಾಸ
ಕಂಪನಿಯು ನೀಡಿರುವ ಮಾಹಿತಿ ಪ್ರಕಾರ, ಅಗಿಬಾಟ್ A2 ರೋಬೋಟ್ ಅನ್ನು ಗ್ರಾಹಕ ಸೇವಾ (customer service) ಕೆಲಸಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಚಾಟ್ ಕಾರ್ಯ ಮತ್ತು ಲಿಪ್‌ ರೀಡಿಂಗ್‌ (lip-reading) ಸಾಮರ್ಥ್ಯಗಳನ್ನು ಹೊಂದಿದೆ.
ಕಳೆದ ಆಗಸ್ಟ್‌ನಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ವಿಶ್ವದ ಪ್ರಥಮ ಮಾನವರೂಪಿ ರೋಬೋಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅಲ್ಲಿ ಬ್ಯಾಸ್ಕೆಟ್‌ಬಾಲ್‌ನಿಂದ ಹಿಡಿದು ಸ್ಪರ್ಧಾತ್ಮಕ ಸ್ವಚ್ಛತೆವರೆಗೆ ವಿವಿಧ ವಿಭಾಗಗಳಲ್ಲಿ 500ಕ್ಕೂ ಹೆಚ್ಚು “ಕ್ರೀಡಾಪಟುಗಳು” ಭಾಗವಹಿಸಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿಬಹುಕೋಟಿ ರೂ.ವಂಚನೆ ಪ್ರಕರಣ: ಆರೋಪಿಯ ಬಂಧನಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರಬೆಳಗಾವಿಗೆ ಮತ್ತೆ ಅನ್ಯಾಯ : ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸುಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಅಶೋಕ ಚಂದರಗಿನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನʼಪ್ರತಿಭಟನೆ ಪ್ರತಿಧ್ವನಿಸಲಿಲ್ಲ….ʼ : ಕಾಂಗ್ರೆಸ್‌ ಸಂಸದ ಶಶಿ ತರೂರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ವೇಣುಗೋಪಾಲ ಎಚ್ಚರಿಕೆಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!