Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿಹಾರ ಚುನಾವಣೆ : ರೋಚಕ ಗೆಲುವು ಕಂಡ 5 ಕ್ಷೇತ್ರಗಳು ; ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳು…!

ಪಾಟ್ನಾ :ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಇದು ಒಂದು ಮಹತ್ವದ ದಿನವಾಗಿದೆ. ರಾಜ್ಯದ ಒಟ್ಟು 243 ಸ್ಥಾನಗಳ ಪೈಕಿ ಎನ್‌ಡಿ ಮೈತ್ರಿಕೂಟವು 202 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಅಥವಾ ಗೆಲುವು ಸಾಧಿಸಿದೆ. ಆದಾಗ್ಯೂ, ಕೆಲವು ಅಭ್ಯರ್ಥಿಗಳಿಗೆ ಸ್ಪರ್ಧೆಯು ಕೊನೆಯ ಕ್ಷಣದವರೆಗೂ ರೋಚಕವಾಗಿತ್ತು. ಸಂದೇಶ್ ಕ್ಷೇತ್ರದ ಸ್ಪರ್ಧೆಯು ಬಿಹಾರದಲ್ಲಿ ಅತ್ಯಂತ ರೋಚಕವಾಗಿತ್ತು. ಯಾಕೆಂದರೆ, ಅಲ್ಲಿ ಜೆಡಿ(ಯು) ಅಭ್ಯರ್ಥಿ ರಾಧಾಚರಣ ಸಹಾ ಅವರು ಆರ್‌ಜೆಡಿಯ ದೀಪು ಸಿಂಗ್ ಅವರನ್ನು ಕೇವಲ 27 ಮತಗಳ ತೀರಾ ಕಡಿಮೆ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಅತ್ಯಂತ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ ಐದು ಪ್ರಮುಖ ಅಭ್ಯರ್ಥಿಗಳ ವಿವರ :

ಸಂದೇಶ: ಜೆಡಿ (ಯು) ನ ರಾಧಾ ಚರಣ್ ಸಹಾ ಅವರು ಆರ್‌ಜೆಡಿಯ ದೀಪು ಸಿಂಗ್ ಅವರನ್ನು ಕೇವಲ 27 ಮತಗಳ ಅಂತರದಿಂದ ಸೋಲಿಸಿದರು. ಸಹಾ 80,598 ಮತಗಳನ್ನು (43.99%) ಪಡೆದರು, ಆದರೆ ಸಿಂಗ್ 80,571 ಮತಗಳನ್ನು (43.97%) ಪಡೆದರು.
ರಾಮಗಢ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕ ಸತೀಶಕುಮಾರ ಸಿಂಗ್ ಯಾದವ್ ಅವರು ಬಿಜೆಪಿಯ ಅಶೋಕಕುಮಾರ ಸಿಂಗ್ ಅವರನ್ನು ಕೇವಲ 30 ಮತಗಳ ಅಂತರದಿಂದ ಸೋಲಿಸಿದರು, ಇದು ಬಿಹಾರದಲ್ಲಿ ಪಕ್ಷದ ಏಕೈಕ ಗೆಲುವು. ಯಾದವ್ 72,689 ಮತಗಳನ್ನು (37.29%) ಮತ್ತು ಸಿಂಗ್ 72,659 ಮತಗಳನ್ನು (37.29%) ಪಡೆದರು.
ಅಗಿಯಾನ್ : ಬಿಜೆಪಿಯ ಮಹೇಶ ಪಾಸ್ವಾನ್ ಅವರು ಸಿಪಿಐ (ಎಂಎಲ್) (ಎಲ್) ನ ಶಿವಪ್ರಕಾಶ ರಂಜನ್ ಅವರನ್ನು ಕೇವಲ 95 ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾದರು. ಪಾಸ್ವಾನ್ 69,412 ಮತಗಳನ್ನು (45.2%) ಮತ್ತು ರಂಜನ್ 69,317 ಮತಗಳನ್ನು (45.14%) ಪಡೆದರು.
ಢಾಕಾ: ಆರ್‌ಜೆಡಿಯ ಫೈಸಲ್ ರೆಹಮಾನ್ ಅವರು ಬಿಜೆಪಿಯ ಪವನಕುಮಾರ ಜೈಸ್ವಾಲ್ ಅವರನ್ನು 178 ಮತಗಳ ಅಲ್ಪ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ರೆಹಮಾನ್ 112,727 ಮತಗಳನ್ನು (45.72%) ಗಳಿಸಿದರೆ, ಜೈಸ್ವಾಲ್ 112,549 ಮತಗಳನ್ನು (45.64%) ಗಳಿಸಿದರು.
ಫೋರ್ಬ್ಸ್‌ಗಂಜ್: ಕಾಂಗ್ರೆಸ್ ಅಭ್ಯರ್ಥಿ ಮನೋಜ ಬಿಶ್ವಾಸ ಅವರು ಬಿಜೆಪಿಯ ವಿದ್ಯಾ ಸಾಗರ ಕೇಶರಿ ಅವರನ್ನು 221 ಮತಗಳ ಅಂತರದಿಂದ ಸೋಲಿಸಿದರು. ಬಿಶ್ವಾಸ್ 120,114 ಮತಗಳನ್ನು (47.77%) ಗಳಿಸುವಲ್ಲಿ ಯಶಸ್ವಿಯಾದರು, ಮತ್ತು ಕೇಶರಿ 119,893 ಮತಗಳನ್ನು (47.68%) ಪಡೆದರು.
ರಾತ್ರಿ 10:00 ಗಂಟೆಯ ಹೊತ್ತಿಗೆ, ಎನ್‌ಡಿಎ 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ ಮುಂದಿದೆ ಅಥವಾ ಗೆಲುವು ಮುನ್ನಡೆ ಸಾಧಿಸಿದೆ. ಬಿಜೆಪಿ 90 ಸ್ಥಾನಗಳಲ್ಲಿ ಗೆಲುವಿನತ್ತ ಹೋಗಿದ್ದರೆ ಜೆಡಿಯು 85 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಮಹಾಘಟಬಂಧನ್ ಕೇವಲ 35 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುವ ಮೂಲಕ ನೀರಸ ಪ್ರದರ್ಶನ ನೀಡಿತು, ಇದು 2020 ರ ಚುನಾವಣೆಯಲ್ಲಿ ಅದರ ಸಂಖ್ಯೆಗಿಂತ ಬಹಳ ಕಡಿಮೆಯಾಗಿದೆ. ಆರ್‌ಜೆಡಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು ಮತ್ತು ಕಾಂಗ್ರೆಸ್ ಪ್ರಸ್ತುತ ಆರು ಸ್ಥಾನಗಳಲ್ಲಿ ಮಾತ್ರ ಮುಂದಿದೆ. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ತನ್ನ ಮೊದಲ ರಾಜಕೀಯ ಸ್ಪರ್ಧೆಯಲ್ಲಿ ಶೂನ್ಯ ಸಾಧನೆ ಮಾಡಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಹುಕೋಟಿ ವಂಚನೆ : ನೀಲಣ್ಣವರ, ಆಪ್ತರ ನಿವಾಸಗಳ ಮೇಲೆ ಇಡಿ ದಾಳಿSIR : ಗಣತಿ ನಮೂನೆ ಸಲ್ಲಿಸಲು 17 ರವರೆಗೆ ಅವಕಾಶಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸುಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿ