ಖಾನಾಪುರ : ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ತಾಲೂಕು ಪಂಚಾಯತ್ ಖಾನಾಪುರ ಹಾಗೂ ತಾಲೂಕು ಶಿಕ್ಷಣ ಕ್ಷೇತ್ರ ಅಧಿಕಾರಿ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರ ಉದ್ಘಾಟಿಸಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ರಕ್ತದಾನ ಮಹಾ ದಿನಗಳಲ್ಲಿ ಒಂದು ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಶ್ರೀ ಸರ ದೇಸಾಯಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಮತ್ತು ಶಿಕ್ಷಕರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.