"ಆಪರೇಷನ್ ಗಂಗಾ" ಬಗ್ಗೆ ಮಾಹಿತಿ ನೀಡದ ಮೋದಿ ಸರಕಾರ..!

"ಆಪರೇಷನ್ ಗಂಗಾ" ಬಗ್ಗೆ ಮಾಹಿತಿ ನೀಡದ ಮೋದಿ ಸರಕಾರ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

"ಆಪರೇಷನ್ ಗಂಗಾ" ಬಗ್ಗೆ ಮಾಹಿತಿ ನೀಡದ ಮೋದಿ ಸರಕಾರ..!

ನ್ಯಾಯವಾದಿ ಉಗಾರೆ ಅರ್ಜಿಗೆ ಹಿಂಬರಹ ಬರೆದ ಸಚಿವಾಲಯ..!

ಬೆಳಗಾವಿ : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ "ಆಪರೇಷನ್ ಗಂಗಾ" ಕಾರ್ಯಾಚರಣೆ ಸಮಯದಲ್ಲಿ ಮಾಡಲಾದ ಖರ್ಚು ವೆಚ್ಚ ಹಾಗೂ ಇದರ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದ ಸಂಖ್ಯೆ ಕುರಿತು ಮಾಹಿತಿ ನೀಡುವಂತೆ ನ್ಯಾಯವಾದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಏಪ್ರಿಲ್ 20 ರಂದು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯಕ್ಕೆ  ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಅರ್ಜಿಯನ್ನು ಪರಿಶೀಲನೆ ನಡೆಸಿದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ಅರ್ಜಿದಾರ ಉಗಾರ ಅವರಿಗೆ ಹಿಂಬರ ನೀಡಿದ್ದಾರೆ.