This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಭೂಮಿಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ MLA Lakshmi Hebbalakkar performed Bhumi Puja


 

ಬೆಳಗಾವಿ :                                                  ತಾಲೂಕಿನ ಸುಳಗಾ (ಯು) ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ರೂ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಂಜೂರು ಮಾಡಿಸಿದ್ದು. ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಇಂದು ಅವರು ಚಾಲನೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಅಭೂತಪೂರ್ವವಾದ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಕ್ಷೇತ್ರದ ಜನತೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದು ಇನ್ನು ಮುಂದೆಯೂ ಮಾದರಿ ಕ್ಷೇತ್ರವಾಗಿಸುವಲ್ಲಿ ತಮ್ಮ ಬೆಂಬಲ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಕೋರಿದರು.

ಈ ಸಂದರ್ಭದಲ್ಲಿ ಮನೋಜ ಕಲಕಾಂಬ್ಕರ್, ಬಾಗಣ್ಣ ನರೋಟಿ, ಮಲ್ಲಪ್ಪ ಸುಳಗೇಕರ್, ಯಲ್ಲಪ್ಪ ಕಲಕಾಂಬ್ಕರ್, ನಿರ್ಮಲಾ ಕಲಕಾಂಬ್ಕರ್, ಮಾರುತಿ ಪಾಟೀಲ, ರಾಜಶ್ರೀ ಕೋಲಕಾರ, ರೇಖಾ ಪಾಟೀಲ, ದೀಪಾ ತೋರೆ, ವೈಷ್ಣವಿ ಕಾಟವೇಕರ್, ವರ್ಷ ಸಾವಗಾಂವ್ಕರ್, ಮಹಾದೇವ ಕಂಗ್ರಾಳಕರ್, ಗಣಪತ್ ಗಡ್ಕರಿ, ಪರುಶರಾಮ ಹೊಳೆನ್ನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply