ಜಗಳ ಮಾಡುತ್ತಿದ್ದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಹಾಪ್ ಮರ್ಡರ್ ..?

ಜಗಳ ಮಾಡುತ್ತಿದ್ದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಹಾಪ್ ಮರ್ಡರ್ ..?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬುದ್ಧಿವಾದ ಹೇಳಿದ್ದಕ್ಕೆ ಹಾಪ್ ಮರ್ಡರ್ ..?

ಆರೋಪಿಯನ್ನು ರಾತೋರಾತ್ರಿ ಬಂಧಿಸಿ ಜೈಲಿಗಟ್ಟಿದ ಕಾಕತಿ ಪೊಲೀಸರು ..!

ಬೆಳಗಾವಿ : ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ಆಸ್ತಿ ವಿವಾದದಲ್ಲಿ ಬುದ್ದಿವಾದ ಹೇಳಲು ಹೋಗಿದ್ದವನಿಗೆ ವ್ಯಕ್ತಿಯೊರ್ವ ಕುಡಗೋಲಿನಿಂದ ಕುತ್ತಿಗೆ ಕಡಿದು, ತಲೆ ಮೇಲೆ ಹೊಡೆದು, ಹಾಗೂ ಬೆರಳುಗಳನ್ನು ಕತ್ತರಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಿನ್ನೆ (ಬುಧವಾರ ಸೆ.14) ತಾಲೂಕಿನ ಪಣಗುತ್ತಿ ಗ್ರಾಮದಲ್ಲಿ ನಡೆದಿದೆ.

35 ವರ್ಷದ ಯಲ್ಲಪ್ಪಾ ಕರೇಪ್ಪಾ ಕೊಚ್ಚರಗಿ ಗಂಭೀರವಾಗಿ ಹಲ್ಲೆಗೊಳಗಾದ ವ್ಯಕ್ತಿ. ಬಸ್ಸಪ್ಪಾ ಬಸ್ಸಪ್ಪಾ (ತಂದೆ) ಹಾಲಬಾರ (38) ಎಂಬಾತ ಬಂಧಿತ ಆರೋಪಿ.

ನಿನ್ನೆ ಆರೋಪಿ ಬಸ್ಸಪ್ಪಾ ಹಾಗೂ ಅವನ ಸಹೋದರರು ಆಸ್ತಿ ವಿಷಯದಲ್ಲಿ ಜಗಳವಾಡುತ್ತಿದ್ದರು ಈ ಸಮಯದಲ್ಲಿ ಯಲ್ಲಪ್ಪಾ ಇವರಿಗೆ ಸಹೋದರರಾಗಿ ನೀವು ಸೇಣಸಾಡಬೇಡು ಎಂದು ಬುದ್ದಿವಾದ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಬಸ್ಸಪ್ಪಾ ಯಲ್ಲಪ್ಪಾ ಕೊಚ್ಚರಗಿಯನ್ನು ಕುಡಗೋಲು ತಂದು ಕೊಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇತನನ್ನು ತಕ್ಷಣ ನಗರದ ವಿಜಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಯ 75% ಭಾಗ ಕತ್ತರಿಸಿ ಹೋಗಿದ್ದರಿಂದ ಬದುಕುಳಿಯುವ ಸಂಭವ ಕಡಿಮೆ ಎಂದು ತಿಳಿದಿದೆ.

ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿ ಬಸ್ಸಪ್ಪನನ್ನು ಕಾಕತಿ ಪಿಐ ಮಾರ್ಗದರ್ಶನದಲ್ಲಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಗ್ರಾಮಕ್ಕೆ ನುಗ್ಗಿ ವಶಕ್ಕೆ ಪಡೆದು ಪ್ರಕರಣ ಪಡೆದುಕೊಂಡು ನ್ಯಾಯಾಂಗ ತನಿಖೆಗೆ ಒಳಪಡಿಸಿ ರಾತೋರಾತ್ರಿ ಹಿಂಡಲಗಾ ಜೈಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.