ಎಮ್ಮೆ ಮೇಯಿಸಬೇಡ ಅಂದಿದ್ದಕ್ಕೆ ಮಾರಣಾಂತಿಕ ಹಲ್ಲೆ..!

ಎಮ್ಮೆ ಮೇಯಿಸಬೇಡ ಅಂದಿದ್ದಕ್ಕೆ ಮಾರಣಾಂತಿಕ ಹಲ್ಲೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಎಮ್ಮೆ ಮೇಯಿಸಬೇಡ ಅಂದಿದ್ದಕ್ಕೆ ಮಾರಣಾಂತಿಕ ಹಲ್ಲೆ..!

ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಕುಟುಂಬ ಅಂದರ್..!

ಬೆಳಗಾವಿ: ತಮ್ಮ ಖಾಲಿ ಜಾಗದಲ್ಲಿ ಎಮ್ಮೆ ಮೇಯುಸುತಿದ್ದ ಸಹೋದರ ಸಂಬಂಧಿಗಳಿಗೆ ಮೇಯಿಸಬೇಡ  ಅಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಎಮ್ಮೆ ಮೇಯಿಸುತ್ತಿದ್ದ ಕುಟುಂಬದವರೆಲ್ಲರೂ ಸೇರಿಕೊಂಡು ಜಾಗದ ಮಾಲಿಕನ ಹೊಟ್ಟೆಯನ್ನು ಚಾಕುವಿಂದ ಹರಿದು, ಸಲಿಕೆ, ಬಡಿಗೆ ಹಾಗೂ ಕಲ್ಲಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಿನ್ನೆ (ಭಾನುವಾರ) ರಾತ್ರಿ ನಡೆದಿದೆ.

ಅಂಬೇವಾಡಿ ಗ್ರಾಮದ ಶಾಂತಿ ನಗರದ ಮನೋಹರ ಪಾಂಡು ತರಳೆ ಹಲ್ಲೆಗೋಳಗಾದ ವ್ಯಕ್ತಿ. ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ಒಂದೇ ಕುಟುಂಬದ 1.ಗಂಗಾರಾಮ ಲುಮಣ್ಣಾ ತರಳೆ, 2.ಶಾಂತಾ ಗಂಗಾರಾಮ ತರಳೆ 3.ದಶರಥ ಗಂಗಾರಾಮ ತರಳೆ ಹಾಗೂ 4. ಉಮೇಶ ಗಂಗಾರಾಮ ತರಳೆ ಎಂಬುವರನ್ನು ಕಾಕತಿ ಪಿಐ ಐ ಎಸ್ ಗುರುನಾಥ, ಪಿಎಸ್ಐ ಮಂಜುನಾಥ ಹುಲಕುಂದ, ಆಧಿತ್ಯ ರಾಜನ ಸಿಬ್ಬಂದಿ ವೀರುಪಾಕ್ಷಿ ಮಾನಗಾವಿ, ಪ್ರಕಾಶ ಬಲ್ಲಾಳ ಸೇರಿಕೊಂಡು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಕೊಲೆ ಯತ್ನದಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ತನಿಖೆ ನಡೆಸಿ ಮಧ್ಯರಾತ್ರಿ ಹಿಂಡಲಗಾ ಕಳಿಸಿದ್ದಾರೆ.