ಗೌಂಡವಾಡ ಜಮೀನು ವಿವಾದ : ಒರ್ವ ಕೊಚ್ಚಿ ಕೊಲೆ..?

ಗೌಂಡವಾಡ ಜಮೀನು ವಿವಾದ : ಒರ್ವ ಕೊಚ್ಚಿ ಕೊಲೆ..?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜಮೀನು ವಿವಾದ : ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಬಿರ್ಜೆ ಕುಟುಂಬ..?

ಬೆಂಕಿ ಹೊತ್ತಿ ಉರಿಯುತ್ತಿರುವ ಗೌಂಡವಾಡ..? ಲಲಕ್ಷಾಂತರ ರುಪಾಯಿ ಹಾನಿ.

ಕಮೀಷನರ್, ಡಿಸಿಪಿ, ನೇತೃತ್ವದಲ್ಲಿ ಪರಿಸ್ಥಿತಿ ನಿಯಂತ್ರಣ ..?

ಬೆಳಗಾವಿ : ಕಳೆದ ಒಂದೂವರೆ ವರ್ಷದಿಂದ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಜಗಳದಲ್ಲಿ ಮುಂಚುನಿಯಲ್ಲಿದ್ದ ವ್ಯಕ್ತಿಯನ್ನು ನಿನ್ನೆ ರಾತ್ರಿ ಕೊಚ್ಚಿ ಕೊಲೆ ಮಾಡುವ ಮೂಲಕ ಮತ್ತೆ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ನಿನ್ನೆ (ಶನಿವಾರ) 35 ವರ್ಷದ ಸತೀಶ ಪಾಟೀಲ ಎಂಬ ಯುವಕನನ್ನು ಬಿರ್ಜೆ ಕುಟುಂಬದವರು ಕಾರು ಪಾರ್ಕಿಂಗ್ ಮಾಡಿದ ನೇಪವೊಡ್ದಿ ರಾತ್ರಿ 9 ಗಂಟೆ ವೇಳೆಗೆ  ಜಗಳ ತೆಗೆದು ಜಂಬೆಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿನ ಹಲವು ವಾಹನಳು, ಮೇವಿನ ಬಣವೆಗಳು ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಕೆಲ ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ.

ಕೊಲೆಗಾರನ್ನು ಕೊಲೆ ಮಾಡಿಯೇ ತಿರುವುದಾಗಿ ಗ್ರಾಮದಲ್ಲಿನ ಬಹುಪಾಲ ಜನರು ಪಣತೋಟ್ಟು ನಿಂತಿದ್ದು ಉದ್ವೇಗದಲ್ಲಿ ಕೊಲೆಗಾರರನ್ನು ಹುಡುಕುತ್ತಿರುವುದಾಗಿ ತಿಳಿದು ಬಂದಿದೆ.

ಘಟನೆ ಸ್ಥಳಕ್ಕೆ ಕಾಕತಿ ಪಿಐ ಗುರುನಾಥ ಪಿಎಸ್ಐ ಅವಿನಾಶ ಯರಗೊಪ್ಪ ಸೇರಿದಂತೆ ಕಾಕತಿ ಠಾಣೆಯ ಎಲ್ಲ ಸಿಬ್ಬಂದಿಗಳು ಬಿಡುಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ಕೊಲೆಗೆ ಸಂಭಂದಿಸಿದಂತೆ ಇಬ್ಬರು ಮಹಿಳೆಯರು ಸೇರಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಗೌಂಡವಾಡ ಗ್ರಾಮಕ್ಕೆ ಖುದ್ದು ಡಿಸಿಪಿ ರವೀಂದ್ರ ಗಡಾದಿ, ಸ್ನೇಹಾ ಪಿ ವಿ, ಎಸಿಪಿ ನಾರಾಯಣ ಬರಮನಿ, ಗಣಪತಿ ಗುಡಾಜಿ ಹಾಗೂ ಹಿರಿಯ ಅಧಿಕಾರಿಗಳು ಧಾವಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಯಶಸ್ವಿಯಾಗಿದ್ದಾರೆ.