ಕಾಕತಿ ಪೊಲೀಸರಿಂದ ತಡರಾತ್ರಿ ಅತ್ಯುತ್ತಮ ಕಾರ್ಯಾಚರಣೆ..!

ಕಾಕತಿ ಪೊಲೀಸರಿಂದ ತಡರಾತ್ರಿ ಅತ್ಯುತ್ತಮ ಕಾರ್ಯಾಚರಣೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಕಾಕತಿ ಪೊಲೀಸರಿಂದ ತಡರಾತ್ರಿ ಅತ್ಯುತ್ತಮ ಕಾರ್ಯಾಚರಣೆ..!

ಮಹಾರಾಷ್ಟ್ರ ಪಾಲಾಗುತ್ತಿದ್ದ ಕನ್ನಡಿಗರ ಸಾವಿರಾರು ಚೀಲ ಅಕ್ಕಿಯನ್ನು ರಕ್ಷಿಸಿದ ಪಿಐ ಗುರುನಾಥ ..!

ಲಕ್ಷಾಂತರ ರೂ ಮೌಲ್ಯದ ಪಡಿತರ ಸಾಗಿಸುತ್ತಿದ್ದವರು ಸಿಕ್ಕಿ ಬಿದ್ದಿದ್ದಿ ಹೇಗೆ ಗೋತ್ತಾ..?

Kakati PI Gurunath I S

ಬೆಳಗಾವಿ : ಬಡವರ ಹಸು ನೀಗಿಸಲು ಕರ್ನಾಟಕ ಸರಕಾರ ನೀಡುತ್ತಿರುವ ಪಡಿತರವನ್ನು ಖದೀಮರು ತುಂಬಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಕಳ್ಳ ಸಂತೆಯಲ್ಲಿ ಮಾರಲು ಎರಡು ಟ್ರಕ್ ಗಳಲ್ಲಿ ಸಾಗಿಸುತ್ತಿದ್ದ ಕನ್ನಡಿಗರ ಲಕ್ಷಾಂತರ ರೂ ಮೌಲ್ಯದ  1200 ಅಕ್ಕಿಯ ಚೀಲಗಳನ್ನು ಕಾಕತಿ ಪಿಐ ಗುರುನಾಥ ಐ ಎಸ್ ಹಾಗೂ ಸಿಬ್ಬಂದಿ ನಿನ್ನೆ (ಶನಿವಾರ) ತಡರಾತ್ರಿ ವಂಟಮೂರಿ ಘಾಟ್ ಹತ್ತಿರ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿ ಇಬ್ಬರು ಖದಿಮರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

1) ಮಹಮ್ಮದಹ ಹುಸೇನ ಅಬ್ದುಲ್ ಖಾದತ ಹುಲಗುರ , ವಯಸ್ಸು 34 ವರ್ಷ ಸಾ ॥ ರಾಮಲಿಂಗೇಶ್ವರ ನಗರ , ಗೋಕುಲ ರೋಡ , ಉದ್ಯಮ ನಗರ . ಹುಬ್ಬಳ್ಳಿ

 2 ) ಖಾಜಾಮೈನುದ್ದೀನ್ ಖಾದರಬಾಷಾ ಬನ್ನೂರ ಸಾ || ನೇಕಾರ ನಗರ , ಹಳೇ ಹುಬ್ಬಳ್ಳಿ ಇಬ್ಬರು ಬಂಧಿತ ಆರೋಪಿಗಳು. 

ಇವರಿಬ್ಬರು ಎರಡು ಟ್ರಕ್ KA 33 / B / 0699 ನೇದ್ದರಲ್ಲಿ 50 ಕೆ . ಜಿ . ಯ 600 ಚೀಲಗಳಷ್ಟು ಮತ್ತು ಟ್ರಕ್ ನಂ KA -63 / 8749 ರಲ್ಲಿ 50 ಕೆ . ಜಿ .ಯ 620 ಚೀಲಗಳಷ್ಟು , ಒಟ್ಟು 12,00,000 / - ( 12 ಲಕ್ಷ ರೂ ) ಮೌಲ್ಯದ ಒಟ್ಟು 60 ಟನ್ 10 ಕ್ವಿಂಟಲ್ ರೇಶನ್ / ಪಡಿತರ ಅಕ್ಕಿಯನ್ನು ಘನ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ಪಡಿತರ ಚೀಟಿದಾರರಿಗೆ ನೀಡಬೇಕಾದ ಅಕ್ಕಿ ಅಂತಾ ಗೋತ್ತಿದ್ದು ಇದನ್ನು ಪಡಿತರ ಚೀಟಿದಾರರ ಕಡೆಯಿಂದ ಕಾನೂನು ಬಾಹಿರವಾಗಿ ಬಡಜನರ ಕಡೆಯಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡಿದ್ದಾರೆ. ಅದನ್ನು ದುರುಪಯೋಗಪಡಿಸಿಕೊಂಡು ತಮ್ಮ ಸ್ವಂತ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಹಾಗೂ ಅಕ್ಕಿಯು ಅವಶ್ಯಕ ವಸ್ತುವಾಗಿದ್ದು ಕಾಳಸಂತೆಯಲ್ಲಿ ಲಾಭಕ್ಕಾಗಿ ಎರಡು ವಾಹನಗಳಲ್ಲಿ ಹೇರಿ ಮಾರಾಟ ಮಾಡಲು ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದಾಗ ಇದರ ಬಗ್ಗೆ ಪಕ್ಕಾ ಮಾಹಿತಿ ಪಡೆದ ಕಾಕತಿ ಪಿಐ ಗುರುನಾಥ ಐ ಎಸ್ ಹಾಗೂ ಸಿಬ್ಬಂದಿ ತುಕಾರಾಮ ದೊಡಮನಿ, ನಿಡೋನಿ ಹಾಗೂ ಇತರರು ದಾಳಿ ನಡೆಸಿ ವಶಪಡಿಸಿಕೊಂಡು ಅತ್ಯುತ್ತಮ ಕಾರ್ಯಾಚರಣೆ ನಡೆಸಿದ್ದಾರೆ.

ವಶಪಡಿಸಿಕೊಂಡ ವಾಹನದಲ್ಲಿರುವ ಚೀಲಗಳಲ್ಲಿನ ಅಕ್ಕಿ ಬಗ್ಗೆ ಬೆಳಗಾವಿ ಗ್ರಾಮೀಣ ಆಹಾರ ನಿರೀಕ್ಷಕ ಬಾಗೋಜಿಕೊಪ್ಪ ಪರಿಶೀಲನೆ ನಡೆಸಿ ಕರ್ನಾಟಕ ಸರ್ಕಾರ ನೀಡುವ ಪಡಿತರ ಎಂದು ಧೃಡಪಡಿದ್ದಾರೆ.

ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ 1955 ಹಾಗೂ 2016 ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.