ಗೌಂಡವಾಡ ಸತೀಶ ಪಾಟೀಲ ಕೊಲೆ ; ಮತ್ತೊಬ್ಬ ಆರೋಪಿ ಬಂಧನ..!

ಗೌಂಡವಾಡ ಸತೀಶ ಪಾಟೀಲ ಕೊಲೆ ; ಮತ್ತೊಬ್ಬ ಆರೋಪಿ ಬಂಧನ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಗೌಂಡವಾಡ ಸತೀಶ ಪಾಟೀಲ ಕೊಲೆ ; ಮತ್ತೊಬ್ಬ ಆರೋಪಿ ಬಂಧನ..!

11 ಕ್ಕೆ ಏರಿದ ಬಂಧಿತರ ಸಂಖ್ಯೆ ..!

ಬೆಳಗಾವಿ :ಜೂನ್ 18 ರಂದು ದೇವಸ್ಥಾನ ಜಮೀನು ವಿವಾದದಕ್ಕೆ ಸಂಬಂಧಿಸಿದಂತೆ  ವಿರೋಧಿಗಳ ಕೈಯಲ್ಲಿ ಕೊಲೆಯಾದ ಸತೀಶ ಪಾಟೀಲ ಪ್ರಕರಣದ 25 ಆರೋಪಿಗಳ ಪೈಕಿ ಇನ್ನೂರ್ವನನ್ನು ಇಂದು ಕಾಕತಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಗೌಂಡವಾಡ ಗ್ರಾಮದ  23 ವರ್ಷದ ಆರೋಪಿ ಮಹಾಂತೇಶ ಜಯಪ್ಪಾ ನಿಲಜಕರ ಎಂಬಾತ ಅತ್ತಿವಾಡ ಗ್ರಾಮದಲ್ಲಿ ಅವಿತ ಕುಳಿತಿದ್ದನು.  ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಸಿಬ್ಬಂದಿ ಪ್ರಕಾಶ ಬಲ್ಲಾಳ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಈತನ ಬಂಧನ ಸೇರಿ ಇಲ್ಲಿಯವರೆಗೆ 11 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೂಳಿದ 14 ಆರೋಪಿಗಳಿಗಾಗಿ ಕಾಕತಿ ಪೊಲೀಸರು ಬಲೆ ಬಿಸಿದ್ದಾರೆ.