ಸ್ವಚ್ಛ ಭಾರತ ಅಭಿಯಾನಕ್ಕೆ ಮುಕ್ತಿ ಯಾವಾಗ..ಉಪಯೋಗವಾಗದ ಸಂಚಾರಿ ಶೌಚಾಲಯಗಳು

ಬೀದಿ ಬದಿಯಲ್ಲಿ ಮಲ ಮೂತ್ರ ವಿಸರ್ಜನೆ


ಮೂಡಲಗಿ 1 : ತಾಲೂಕು ಕೇಂದ್ರವಾಗಿ ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿ ಮಾತ್ರ ನಿಧಾನವಾಗಿ ಸಾಗಿದೆ,ನಗರ ಬೆಳೆದಂತೆ ದಿನೇ ದಿನೇ ಜನದಟ್ಟಣೆಯೂ ಹೆಚ್ಚುತ್ತಿದೆ ಹೀಗಿರುವಾಗ ನಗರದೆಲ್ಲೆಡೆ ಜನರು ಬೀದಿ ಬದಿಯಲ್ಲಿ ಮಲ,ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ವಾಸನೆ ಹಾಗೂ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ,ಪುರಸಭೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿರುವುದರಿಂದ ಸ್ವಚ್ವ ಭಾರತ ಅಭಿಯಾನ ಇಲ್ಲಿ ಕಣ್ಮರೆಯಾಗುತ್ತಿದೆ,

ಬಳಕೆಯಾಗದ ಸಂಚಾರಿ ಶೌಚಾಲಯಗಳು ಪುರಸಭೆ ಆವರಣದಲ್ಲಿ ಹಾಳಾಗಿ ಹೋಗುತ್ತಿವೆ,ಪುರಸಭೆ ಮುಂದೆಯೇ ಹಾಗೂ ಏರಿಯಾಗಳಲ್ಲಿ ಬೀದಿ ಬದಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಮಹಿಳೆಯರು ದಿನನಿತ್ಯ ಓಡಾಡುವ ಸ್ಥಳಗಳಲ್ಲಿ ಮುಜಗುರಕ್ಕಿಡಾಗುತ್ತಿದ್ದರೆ.

ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲು ಆಗುತ್ತಿದೆ ಅಂತಾರೆ ವಿದ್ಯಾವಂತ ನಾಗರಿಕರು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಚ ಭಾರತ ಅಭಿಯಾನ ಒತ್ತು ನೀಡಬೇಕು.

 

ಚರಂಡಿ ಸಮಸ್ಯೆ

ಹಲವು ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ ಅಂತೂ ಹೇಳತಿರದು,ತಾಜಾ ಉದಾಹರಣೆಯೆಂದರೆ ಹಳೆದ ಮೂರ್ನಾಲ್ಕು ದಿನಗಳಿಂದ ಚರಂಡಿ ನೀರು ತುಂಬಿಕೊಂಡು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ನಿಂತಲ್ಲೇ ನಿಂತಿರುವುದರಿಂದ ದುರ್ವಾಸನೆ ಬೀರುತ್ತಿದೆ, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.


Leave A Reply

Your email address will not be published.