ಹಲಗಾ ಬಳಿ ನಡೆದ ಭೀಕರ ಕೊಲೆ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು..!

ಹಲಗಾ ಬಳಿ ನಡೆದ ಭೀಕರ ಕೊಲೆ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಹಲಗಾ ಬಳಿ ನಡೆದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು..!

2 ಲಕ್ಷಕ್ಕಾಗಿ ಕುಚುಕುನನ್ನು ಕೊಚ್ಚಿ ಕೊಂದ ಗೆಳೆಯ..!

ಚೈನೈಗೆ ಹೋಗುತ್ತಿದ್ದವನ ಚಟ್ಟ ಕಟ್ಟಿದ್ದು ಹೇಗೆ ಗೊತ್ತಾ..?

ಬೆಳಗಾವಿ : ತಾಲೂಕಿನ ಹಲಗಾ ಗ್ರಾಮದಲ್ಲಿ ನಿನ್ನೆ (ಶುಕ್ರವಾರ) ನಡೆದ ವ್ಯಕ್ತಿಯೋರ್ವನ ಭೀಕರ ಕೊಲೆ ಘಟನೆಯ ಪ್ರಕರಣವನ್ನು ಬೆಳಗಾವಿ ನಗರ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶುಕ್ರವಾರ ಸಂಜೆ 5 ಘಂಟೆ ಸುಮಾರಿಗೆ  ಮೂಲತಃ ಕೊಂಡಸಕೊಪ್ಪ ಗ್ರಾಮದ ಹಾಗೂ ಹಾಲಿ ಸಿಂದೋಳ್ಳಿ ಗ್ರಾಮದಲ್ಲಿ ನೆಲೆಸಿದ್ದ 38 ವರ್ಷದ ಗದಗಯ್ಯ ರೇವಣಯ್ಯ ಹಿರೇಮಠನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಯ ಪತ್ತೆ ಹಚ್ಚಲಾಗಿದೆ.

ಕೊಂಡಸಕೊಪ್ಪ ಗ್ರಾಮದ 32 ವರ್ಷದ ವಿಠ್ಠಲ ಸಾಂಬ್ರೇಕರ ಎಂಬಾತ ಕೊಲೆ ಆರೋಪಿ ಎಂದು ತಿಳಿದು ಬಂದಿದೆ. ಕೊಲೆ ಮಾಡಿ ಪರಾರಿಯಾಗಿರುವ ಈತನಿಗಾಗಿ ಬಾಗೇವಾಡಿ ಪೊಲೀಸರು ಬಲೆ ಬಿಸಿ ತಿವ್ರ ಶೋಧ ನಡೆಸಿದ್ದಾರೆ.

ಕೊಲೆ ಆಗಿದ್ದು ಏಕೆ..? ನಿನ್ನೆ ನಡೆದಿದ್ದು ಏನು..?
ಕೊಲೆಯಾದ ಗದಗಯ್ಯ ಹಿರೇಮಠ ಕಸುಬು ಜ್ಯೋತಿಷಿ ಹೇಳುವುದು. ಮೂಲತಃ ಕೊಂಡಸಕೊಪ್ಪ ಗ್ರಾಮದವರಾಗಿದ್ದ ಇವರು ಮಳೆಯಿಂದಾಗಿ ಇವರ ಮನೆಯ ಸಂಪರ್ಕ ಹಾದಿ ಹದಿಗೆಟ್ಟು ಕೆಸರಾಗಿದ್ದರಿಂದ ಜ್ಯೋತಿಷಿ ಕೇಳಲು ಬರುವವರಿಗೆ ಕಷ್ಟವಾಗುತ್ತಿದೆ ಎಂದು ಪತ್ನಿಯ ತವರು ಮನೆ ಸಿಂದೋಳ್ಳಿಗೆ ಹೋಗಿ ವಾಸವಾಗಿದ್ದರು. 

ಕೊಲೆ ಮಾಡಿರುವ ಆರೋಪಿ ವಿಠ್ಠಲ ಸಾಂಬ್ರೇಕರ ಹಾಗೂ ಗದಗಯ್ಯ ಇಬ್ಬರು ಒಳ್ಳೆಯ ಸ್ನೇಹಿತರು ಹಾಗೂ ಇಬ್ಬರ ಕುಟುಂಬದವರು ಪರಸ್ಪರ ಒಡನಾಟದಿಂದ ಇದ್ದವರು. 

ಕೊಲೆಗೆ ಕಾರಣವಾದ 2 ಲಕ್ಷ ರೂ..!

2 ವರ್ಷಗಳ ಹಿಂದೆ ವಿಠ್ಠಲ ಸ್ನೇಹಿತ ಗದಗಯ್ಯಗೆ ವಯಕ್ತಿಕ ಕೆಲಸಕ್ಕಾಗಿ 2  ಲಕ್ಷ ರೂ ನೀಡಿದ್ದ. ಅದನ್ನು ಕಳೆದ ಆರು ತಿಂಗಳಿನಿಂದ ಕೇಳುತ್ತಲೆ ಬಂದಿದ್ದಾನೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಗದಗಯ್ಯ ಬೇಜವಾಬ್ದಾರಿಯಿಂದ ದಿನ ಕಳೆಯುತ್ತ ಬಂದಿದ್ದಾನೆ. ಮರಳಿ ಕೊಡಲು ನಿರಾಸಕ್ತಿ ತೋರಿಸಿದ್ದಾನೆ. ಇದರಿಂದ ಕೆಂಡ‍ಮಂಡಲವಾಗಿದ್ದ ವಿಠ್ಠಲ ಕಳೆದೆರಡು ತಿಂಗಳಿನಿಂದ ಇತನನ್ನು ಮುಗಿಸಿಯೇ ಬಿಡಬೇಕೆಂದು ಕಾದು ಕುಳಿತಿದ್ದ.  ನಿನ್ನವ ಆ ಅವಕಾಶ ಸಿಕ್ಕಿದ್ದರಿಂದ ಆ ಕೆಲಸ ಮಾಡಿ ಮುಗಿಸಿದ್ದಾನೆ.

ನಿನ್ನೆ (ಶುಕ್ರವಾರ) ನಡೆದ್ದಿದ್ದೆನು..? ಚೈನೈ ಗೆ ಹೋಗಬೇಕಾಗಿದ್ದವ ಮಸನ ಸೇರಿದ್ದ ಹೇಗೆ..?

ನಿನ್ನೆ ಮುಂಜಾನೆ ವಿಠ್ಠಲ ಕೊಂಡಸಕೊಪ್ಪದಿಂದ ಸಿಂದೋಳ್ಳಿಗೆ ಬಂದಿದ್ದಾನೆ. ಚೈನೈಗೆ ಹೋಗುವ ತಯಾರಿಯಲ್ಲಿದ್ದ ಗದಗಯ್ಯ  ವಿಠ್ಠಲನನ್ನು ಕರೆದುಕೊಂಡು ಸಾಂಬ್ರಾಗೆ ಹೋಗಿದ್ದಾನೆ. ತಾನೂ ಸ್ವಲ್ಪ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ನಂತರ ವಿಠ್ಠಲನಿಗೆ ಬಟ್ಟೆ ಕೊಡಿಸಿದ್ದಾನೆ. ನಂತರ ನಾನು ಚೈನೈಗೆ ಹೋಗುತ್ತಿದ್ದು, ನಾನು ಕೊಂಡಸಕೊಪ್ಪ ಗ್ರಾಮಕ್ಕೆ ಬಂದು ಅಲ್ಲಿಂದ ಧಾರವಾಡಗೆ ಹೋಗಿ ರೇಲ್ವೆ ಮೂಲಕ ಚೈನೈಗೆ ಹೋಗುತ್ತಿದ್ದೆನೆ ಅದಕ್ಕಾಗಿ ನೀನು ನಿನ್ನ ಬೈಕ್ ಮೇಲೆ ನನ್ನನ್ನು ಕರೆದುಕೊಂಡು ಹೋಗು ಎಂದು ಕೇಳಿಕೊಂಡಿದ್ದಾನೆ. ಇದೆ ಸಮಯಕ್ಕಾಗಿ ಕಾಯುತ್ತಿದ್ದ ವಿಠ್ಠಲ ತಕ್ಷಣ ಹೂಂ ಎಂದಿದ್ದಾನೆ. ತನ್ನ ಬೈಕನ್ನು ಗದಯ್ಯನಿಗೆ ನಡೆಸಲು ಹೇಳಿ ಹಿಂದೆ ತಾನೂ ಕುಳಿತಿದ್ದಾನೆ. 

ಸಾಂಬ್ರಾದಿಂದ ಸಿಂದೋಳ್ಳಿಗೆ ಬಂದು ಅಲ್ಲಿಂದ ಕೊಂಡಸಕೊಪ್ಪ ಕಡೆ ಬರುತ್ತಿರುವಾಗ ಹಲಗಾ ಹತ್ತಿರದ ತಾರಿಹಾಳ ಕ್ರಾಸ್ ಹತ್ತಿರ ಬೈಕ್ ಇದ್ದಕ್ಕಿದ್ದಂತೆ ಕೆಟ್ಟು ನಿಂತಿದೆ. ಗದಗಯ್ಯ ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸುರುವಾಗ ಖೈಮಾ ಮಾಡುವ ಚಾಕುವಿನಿಂದ  ತೀವ್ರವಾಗಿ ಗದಗಯ್ಯನ ಕುತ್ತಿಗೆಯನ್ನು ಎರಡು ಬಾರಿ ಕಡಿದಿದ್ದಾನೆ. ಇಷ್ಟಕ್ಕೆ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾನೆ. ಇಷ್ಟಕ್ಕೆ ಬಿಡದೆ ಕುತ್ತಿಗೆಯನ್ನು ತುಂಡು ಆಗುವಷ್ಟು ಬಾರಿ ಕೊಚ್ಚಿದ್ದಾನೆ. ಇಷ್ಟರಲ್ಲೇ ಈತನ ದಾಳಿಗೆ ಗದಗಯ್ಯನ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನು ಖಾತರಿ ಮಾಡಿಕೊಂಡ ಕೊಲೆ ಆರೋಪಿ ವಿಠ್ಠಲ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆ ಗದಗಯ್ಯನ ಕುಟುಂಬ, ಕೊಂಡಸಕೊಪ್ಪ ಹಾಗೂ ಸಿಂದೋಳ್ಳಿ ಮಾತ್ರವಲ್ಲದೆ ಇಡಿ ಬೆಳಗಾವಿಯನ್ನು ಬೆಚ್ಚಿ ಬಿಳಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ ಪೊಲೀಸ್ ಕಮೀಷನರ್ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಎಸ್ ವಿ ಗಿರೀಶ್ ಹಾಗೂ ಬಾಗೇವಾಡಿ ಪಿಐ ಘಟನೆ ಸ್ಥಳಕ್ಕೆ ಧಾವಿಸಿ ತಿವ್ರ ತನಿಖೆ ಕೈಕೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ಕಾರ್ಯ ಕೈಗೊಂಡಿದ್ದಾರೆ. 

ಈ ಕುರಿತು ಕೊಲೆಯಾದ ಗದಗಯ್ಯ ಪತ್ನಿ ವಾಣಿಶ್ರೀ ಹಿರೇಮಠ ಹಿರೇ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

2 ಲಕ್ಷಕ್ಕಾಗಿ ಕುಚುಕು ಗೆಳೆಯನ ಕುತ್ತಿಗೆಯನ್ನು ಸೀಳುವಷ್ಟು ವಿಠ್ಠಲ ಕ್ರೂರಿಯಾಗಿದ್ದಾದರೂ ಏಕೆ? ಎಂದು ತಿಳಿಯಬೇಕಿದೆ.