ಬೂದಾಳು ನಟರಾಜ ಅವರಿಗೆ ಅನುವಾದ ಸಾಹಿತ್ಯ ಪ್ರಶಸ್ತಿ ಪ್ರದಾನ


 

ದೆಹಲಿ :
ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಸಾಹಿತ್ಯ ಪ್ರಶಸ್ತಿಯನ್ನು ಕನ್ನಡದ ಪ್ರಮುಖ ಲೇಖಕ ಡಾ. ಬೂದಾಳು ನಟರಾಜ ಅವರಿಗೆ ಇಂದಿಲ್ಲಿ ಪ್ರದಾನ ಮಾಡಲಾಯಿತು.
ರಾಜಸ್ತಾನದ ಸುಪ್ರಸಿದ್ಧ ಲೇಖಕರೂ ರಾಷ್ಟೀಯ ನಾಟಕ ಶಾಲೆಯ (ಎನ್ಎಸ್ ಡಿ) ಅಧ್ಯಕ್ಷರೂ ಆಗಿರುವ ಅರ್ಜುನ ದೇವ ಅವರು ನಟರಾಜ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಡಾ ನಟರಾಜ ಅವರು ಅನುವಾದಿಸಿರುವ ‘ಸರಹಪಾದ’ ಕೃತಿಯು ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿಯು ೫೦೦೦೦ ರೂಪಾಯಿ ಹಾಗೂ ಸನ್ಮಾನ ಒಳಗೊಂಡಿದೆ.
ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರಶಸ್ತಿಯನ್ನು ಡಾ. ಚಂದ್ರಶೇಖರ ಕಂಬಾರ ಅವರು ಪ್ರದಾನ ಮಾಡಿದರು.


Leave A Reply

Your email address will not be published.