ಬೆಳಗಾವಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ; 9 ಜನರ ಬಂಧನ..!


ಮಹಾದ್ವಾರ ರೋಡ್ ಗ್ಯಾಂಬ್ಲಿಂಗ್ ಗ್ಯಾಂಗ್ ಬಂಧಿಸಿದ ಮಾರ್ಕೆಟ್ ಪೋಲೀಸರು.

ಜನಜೀವಾಳ ಜಾಲ ಬೆಳಗಾವಿ: ನಗರದ ಮಹಾದ್ವಾರ ರೋಡನಲ್ಲಿ ಲಕ್ಷಾಂತರ ರೂ ಕಟ್ಟಿ ಇಸ್ಪೀಟ್ ಆಡುತ್ತಿದ್ದ ಗುಂಪೊಂದನ್ನು ಮಾರ್ಕೆಟ್ ಪೋಲೀಸರು ಭೇದಿಸುವಲ್ಲಿ ಸಫಲರಾಗಿದ್ದಾರೆ.

ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಮಾರ್ಕೆಟ್ ಪಿಐ ತುಳಸಿಗೇರಿ ಹಾಗೂ ಸಿಬ್ಬಂದಿಗಳ ತಂಡ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಈ ವೇಳೆ ಆಟದಲ್ಲಿ ತೋಡಗಿದ್ದ 9 ಜನರನ್ನು ಬಂಧಿಸಿ ಅವರ ಬಳಿಯಿದ್ದ 1,03,440/- ರೂ ನಗದು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆದಿರುವುದಾಗಿ ಡಿಸಿಪಿ ವಿಕ್ರಂ ಅಮಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave A Reply

Your email address will not be published.