ಫೆಬ್ರವರಿ ೧೬ ರಿಂದ ೩ ದಿನಗಳ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ

Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

• ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಟೆರಿ) ಆಯೋಜನೆ

• ಇದು ಟೆರಿಯ ೨೧ ನೇ ಆವೃತ್ತಿಯ ಶೃಂಗಸಭೆ

ಬೆಂಗಳೂರು, ೧೧ ಫೆಬ್ರವರಿ ೨೦೨೨: ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಟೆರಿ) ತನ್ನ ೨೧ ನೇ ಆವೃತ್ತಿಯ ವಾರ್ಷಿಕ ಫ್ಲಾö್ಯಗ್‌ಶಿಪ್ ಕಾರ್ಯಕ್ರಮವಾದ ವರ್ಲ್ಡ್ ಸಸ್ಟೆನೇಬಿಲಿಟಿ ಡೆವಲಪ್‌ಮೆಂಟ್ ಸಮ್ಮಿಟ್ (WSDS) (ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ) ೨೦೨೨ ಅನ್ನು ಫೆಬ್ರವರಿ ೧೬ ರಿಂದ ೧೮ ರವರೆಗೆ ಆಯೋಜನೆ ಮಾಡುತ್ತಿದೆ. ಈ ಶೃಂಗಸಭೆಯು ಅತ್ಯುತ್ತಮ ಸ್ಥಿತಿಸ್ಥಾಪಕತ್ವದ ಗ್ರಹವನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಸುಸ್ಥಿರ ಮತ್ತು ಸಮಾನವಾದ ಭವಿಷ್ಯವನ್ನು ರೂಪಿಸುವುದನ್ನು ಖಚಿತಪಡಿಸುತ್ತದೆ. ಮೂರು ದಿನಗಳ ಕಾಲ ನಡೆಯಲಿರುವ ಈ ವರ್ಚುವಲ್ ಶೃಂಗಸಭೆಯಲ್ಲಿ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ವರ್ಲ್ಡ್ ಸಸ್ಟೇನಿಬಿಲಿಟಿ ಡೆವಲಪ್‌ಮೆಂಟ್ ಸಮ್ಮಿಟ್ ೨೦೨೨ ರಾಜ್ಯಗಳ ಮುಖ್ಯಸ್ಥರು, ಅಂತಾರಾಷ್ಟ್ರೀಯ ಸಂಸ್ಥೆಗಳು, ಸರ್ಕಾರ, ವ್ಯಾಪಾರ ಮತ್ತು ಉದ್ಯಮ, ಸಂಶೋಧನೆ ಮತ್ತು ಶಿಕ್ಷಣ, ನಾಗರಿಕ ಸಮಾಜ ಮತ್ತು ಯುವಕರನ್ನು ಒಟ್ಟುಗೂಡಿಸುತ್ತದೆ. ಇದು ಗ್ರಹಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಶಿಕ್ಷಣ, ನಾಗರಿಕ ಸಮಾಜ ಮತ್ತು ಯುವಕರನ್ನು ಒಟ್ಟುಗೂಡಿಸುತ್ತದೆ. ಇದು ಗ್ರಹಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಮಾನವಾದ ಪ್ರತಿಕ್ರಿಯೆಗಳ ಅಗತ್ಯವಿರುವ ವಿಧಾನದ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸಲಾಗುತ್ತದೆ. ಶೃಂಗಸಭೆಯು ಹವಾಮಾನ ಬದಲಾವಣೆ, ಸುಸ್ಥಿರವಾದ ಬಳಕೆ ಮತ್ತು ಉತ್ಪಾದನೆ, ಶಕ್ತಿ ಮತ್ತು ಸಂಪನ್ಮೂಲ ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ಸಾಮಾನ್ಯಗಳ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸಲು ಉದ್ದೇಶಿಸಿದೆ. ಈ ಶೃಂಗಸಭೆಯು ಸಚಿವರ ಅಧಿವೇಶನಗಳು, ಯುವ ಸಮೂಹ, ಮಹಿಳಾ ನಾಯಕತ್ವದ ಸಂವಾದಗಳು, ಕಾರ್ಪೊರೇಟ್ ಸಂವಾದಗಳು ಮತ್ತು ಇತರೆ ವಿಷಯಾಧಾರಿತ ಟ್ರಾö್ಯಕ್‌ಗಳನ್ನು ಒಳಗೊಂಡಿರುತ್ತದೆ. ಶೃಂಗಸಭೆಯು ಮಹತ್ವಾಕಾಂಕ್ಷೆ ಮತ್ತು ಕ್ರಿಯೆಯನ್ನು ಹೆಚ್ಚಿಸಲು ಎಲ್ಲಾ ಹಂತಗಳಲ್ಲಿ ಬದ್ಧತೆಯನ್ನು ಬಲಪಡಿಸುವ ಸಲುವಾಗಿ ಂಛಿಣ೪ಇಚಿಡಿಣh ಮ್ಯಾನಿಫೆಸ್ಟೋ ಮತ್ತು ಂಛಿಣ೪ಇಚಿಡಿಣh ಸ್ಟ್ರಾಟೆಜಿ ಪೇಪರ್‌ಗಳನ್ನು ಸಹ ಬಿಡುಗಡೆ ಮಾಡುತ್ತದೆ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚು ಸಮರ್ಥನೀಯವಾದ ಮತ್ತು ಸಮಾನವಾದ ಜಗತ್ತನ್ನು ರಚಿಸುವ ಗುರಿಯನ್ನು ಹೊಂದಿದೆ.

ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಪ್ರಧಾನ ಕಾರ್ಯದರ್ಶಿ ಡಾ.ವಿಭಾ ಧವನ್ ಅವರು ಮಾತನಾಡಿ, ``ಟೆರಿಯ ವರ್ಲ್ಡ್ ಸಸ್ಟೇನೇಬಲ್ ಡೆವಲಪ್‌ಮೆಂಟ್ ಸಮ್ಮಿಟ್ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಇದು ವಿಶ್ವದಾದ್ಯಂತ ರಾಜಕೀಯ ನಾಯಕರು, ವಿಜ್ಞಾನ ತಜ್ಞರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮಾಜದ ಪ್ರಚಾರಕರನ್ನು ಆಹ್ವಾನಿಸುತ್ತದೆ. ಕಳೆದ ೨೦ ವರ್ಷಗಳಿಂದ ಈ ಶೃಂಗಸಭೆಯು ರಾಜಕೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜವನ್ನು ಕಾರ್ಯಗತಗೊಳಿಸಲು ಸಂವೇದನಾಶೀಲಗೊಳಿಸುವ ನಿಟ್ಟಿನಲ್ಲಿ ಬುದ್ಧಿಮತ್ತೆಯ ಚರ್ಚೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕ್ರಿಯೆಯ ಕುರಿತು ವಿವಿಧ ದೃಷ್ಟಿಕೋನಗಳನ್ನು ಯಶಸ್ವಿಯಾಗಿ ಸಂಗ್ರಹ ಮಾಡಿದೆ. ಈ ಶೃಂಗಸಭೆಯ ಸರಣಿಯಲ್ಲಿ ಇಲ್ಲಿಯವರೆಗೆ ೨೫,೦೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಈ ವರ್ಷದ ಶೃಂಗಸಭೆಯ ೨೧ ನೇ ಆವೃತ್ತಿಯಲ್ಲಿ ಸಂಬಂಧಪಟ್ಟ ಎಲ್ಲಾ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದರು.

ಮೂರು ದಿನಗಳ ಕಾಲ ನಡೆಯಲಿರುವ ಈ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮುಖ ಉಪನ್ಯಾಸಕರು ಇಂತಿದ್ದಾರೆ:-
• ಡಾ. ಇರ್ಫಾನ್ ಅಲಿ, ಗಯಾನ ದೇಶದ ಗೌರವಾನ್ವಿತ ಅಧ್ಯಕ್ಷ
• ಅಮಿನಾ ಜೆ.ಮೊಹಮ್ಮದ್, ಯುನೈಟೆಡ್ ನೇಷನ್‌ನ ಡೆಪ್ಯೂಟಿ ಸೆಕ್ರಟರಿ-ಜನರಲ್
• ಸ್ಟೀವನ್ ಗ್ಯುಲ್‌ಬಿಲ್ಟ್, ಕೆನಡಾದ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ.
• ಜಾನ್ ಫೋರ್ಬ್ಸ್ ಕರ‍್ರಿ, ಯುನೈಟೆಡ್ ಸ್ಟೇಟ್ಸ್ನ ಸ್ಪೆಷಲ್ ಪ್ರೆಸಿಡೆನ್ಷಿಯಲ್ ಎನ್‌ವಾಯ್ ಫಾರ್ ಕ್ಲೆöÊಮೇಟ್
• ಡಾ.ಯಾಸ್ಮೀನ್ ಫೌದ್, ಈಜಿಪ್ಟ್ನ ಪರಿಸರ ಸಚಿವ.
• ಎಸ್ಪೆನ್ ಬಾರ್ತ್ ಎಡ್ಜ್, ನಾರ್ವೆಯ ಹವಾಮಾನ ಮತ್ತು ಪರಿಸರ ಸಚಿವ.
• ಎಮ್ಮಾ ಕರಿ, ಫಿನ್ಲಾಂಡ್‌ನ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವೆ.
• ಅಮಿನಾಥ್ ಶೌನ, ಮಾಲ್ಡೀವ್ಸ್ನ ಪರಿಸರ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನ ಸಚಿವೆ.
• ಬರ್ಬರ ಪೊಂಪಿಲಿ, ಫ್ರಾನ್ಸ್ ಸರ್ಕಾರದ ಪರಿಸರ ಪರಿವರ್ತನೆ ಸಚಿವೆ.
• ನಿತಿನ್ ದೇಸಾಯಿ, ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ.
• ಸ್ಟೆಫಿ ಲಿಮ್ಕೆ, ಜರ್ಮನಿಯ ಪರಿಸರ, ಪ್ರಕೃತಿ ರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕ ರಕ್ಷಣೆ ಸಚಿವೆ.
• ಅಬ್ದುಲ್ಲಾ ಶಾಹಿದ್, ಮಾಲ್ಡೀವ್ಸ್ನ ವಿದೇಶಾಂಗ ಸಚಿವ ಮತ್ತು ಯುಎನ್ ಜನರಲ್ ಅಸೆಂಬ್ಲಿಯ ೭೬ ನೇ ಸೆಶನ್‌ನ ಅಧ್ಯಕ್ಷ.
• ಪ್ಯಾಟ್ರಿಸಿಯಾ ಎಸ್ಪಿನೋಸ, ಎಕ್ಸಿಕ್ಯೂಟಿವ್ ಸೆಕ್ರೆಟರಿ, ಯುನೈಟೆಡ್ ನೇಷನ್ಸ್ ಫ್ರೇಂವರ್ಕ್ ಕನ್ವೆನ್ಷನ್ ಆನ್ ಕ್ಲೆöÊಮೇಟ್ ಚೇಂಜ್.
• ಫ್ರಾನ್ಸ್ ಟಿಮ್ಮರ‍್ಮಾನ್ಸ್, ಯೂರೋಪಿಯನ್ ಕಮಿಷನ್‌ನ ಕಮಿಷನರ್ & ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್- ಯೂರೋಪಿಯನ್ ಗ್ರೀನ್ ಡೀಲ್.
• ಪ್ರೊಫೆಸರ್ ಪೆಟ್ಟೆರಿ ಟಾಲಾಸ್, ಸೆಕ್ರೆಟರಿ- ಜನರಲ್, ವರ್ಲ್ಡ್ ಮೆಟ್ರಾಲಾಜಿಕಲ್ ಆರ್ಗನೈಸೇಷನ್, ಜಿನೇವಾ, ಸ್ವಿಟ್ಜರ್‌ಲ್ಯಾಂಡ್.
• ಅಲೋಕ್ ಶರ್ಮಾ, ಸಿಒಪಿ೨೬ ಪ್ರೆಸಿಡೆಂಟ್ & ಮಿನಿಸ್ಟರ್ ಆಫ್ ಸಟೇಟ್ ಅಟ್ ದಿ ಕ್ಯಾಬಿನೆಟ್ ಆಫೀಸ್, ಯುನೈಟೆಡ್ ಕಿಂಗ್ಡಂ.
• ಮನೀಶ್ ಚೌರಾಸಿಯಾ, ಮ್ಯಾನೇಜಿಂಗ್ ಡೈರೆಕ್ಟರ್ & ಸಿಇಒ, ಟಾಟಾ ಕ್ಲೀನ್ ಟೆಕ್ ಕ್ಯಾಪಿಟಲ್ ಲಿಮಿಟೆಡ್.
• ಎರಿಕ್ ಸೊಲ್ಹೀಮ್, ಫಾರ್ಮರ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಫ್ ಯುಎನ್ ಎನ್‌ವಾರ‍್ನಮೆಂಟ್ & ಪ್ರೆಸಿಡೆಂಟ್ ಗ್ರೀನ್ ಬೆಲ್ಟ್ ಅಂಡ್ ರೋಡ್ ಇನ್‌ಸ್ಟಿಟ್ಯೂಟ್.
• ಡಾ.ಪಲನಿವೆಲ್ ತೈಗ ರಾಜನ್, ತಮಿಳುನಾಡು ಸರ್ಕಾರದ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆ ಸಚಿವ.
• ಡಾ.ವಿಭಾ ಧವನ್, ಡೈರೆಕ್ಟರ್ ಜನರಲ್, ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್.
• ಡಾ.ಅಜಯ್ ಮಾಥೂರ್, ಡೈರೆಕ್ಟರ್ ಜನರಲ್, ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್.

೨೦೦೧ ರಲ್ಲಿ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ ಆರಂಭವಾದಾಗಿನಿಂದ ಪರಿಸರ ಮತ್ತು ಸುಸ್ಥಿರತೆಯ ಅತ್ಯಂತ ಜಟಿಲವಾದ ಸಮಸ್ಯೆಗಳನ್ನು ಗುರುತಿಸುವ ಮೂಲಕ ಭಾರತದ ಯೋಜನೆಗಳು, ನೀತಿಗಳು, ಆದ್ಯತೆಗಳು ಮತ್ತು ಕ್ರಮಗಳನ್ನು ಪ್ರದರ್ಶಿಸಲು ಮತ್ತು ಚರ್ಚಿಸಲು ಇದೊಂದು ಮಹತ್ವದ ವೇದಿಕೆಯಾಗಿದೆ. ಸಿಒಪಿ೨೭ ಕಂಪಾಸ್ ಮತ್ತು ಎಸ್‌ಡಿಜಿ ಚಾರ್ಟರ್‌ನಂತಹ ಮಾರ್ಗದರ್ಶನ ಚಟುವಟಿಕೆಗಳಿಗೆ ಶೃಂಗಸಭೆಯು ಒಂದು ರಚನಾತ್ಮಕವಾದ ಪಾತ್ರವನ್ನು ನಿರ್ವಹಿಸುತ್ತದೆ. ಕಳೆದ ಹಲವಾರು ವರ್ಷಗಳಲ್ಲಿ ಅನೇಕ ಸಹಯೋಗಗಳು ಮತ್ತು ಪಾಲುದಾರಿಕೆಗಳನ್ನು ಪೋಷಿಸಲಾಗಿದೆ ಮತ್ತು ಮುಂದೆ ಸಾಗುತ್ತಿದೆ. ಸುಸ್ಥಿರವಾದ ಮತ್ತು ಸಮಾನವಾದ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೀತಿಗಳ ಸಾಮಾಜಿಕ- ಆರ್ಥಿಕ ಆಯಾಮಗಳು ಮತ್ತು ಅನುಷ್ಠಾನ ಕ್ರಮಗಳಿಗೆ ಸರಿಯಾದ ರೀತಿಯ ಪರಿಗಣನೆಯ ಅಗತ್ಯವೂ ಇರುತ್ತದೆ.