ಕೂಲ್ ಮೈಂಡ್ ಸತೀಶ ಜಾರಕಿಹೊಳಿ ಮೊದಲ ಬಾರಿಗೆ ಮೌನ ಮುರಿದಿದ್ದೇಕೆ ?

ಕೂಲ್ ಮೈಂಡ್ ಸತೀಶ ಜಾರಕಿಹೊಳಿ ಮೊದಲ ಬಾರಿಗೆ ಮೌನ ಮುರಿದಿದ್ದೇಕೆ ?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಸೈಲೆಂಟ್ ಸತೀಶ್ ವೈಲೆಂಟ್ ಆಗಿದ್ದೇಕೆ?

ಇದೇ ಮೊದಲ ಬಾರಿಗೆ ಸತೀಶ ಜಾರಕಿಹೊಳಿ ಮೌನ ಮುರಿದಿದ್ದೇಕೆ ?

ಮಾಧ್ಯಮಗಳ ಟೀಕೆ-ಹೊಗಳಿಕೆಗೆ ಎಂದಿಗೂ ತಲೆ ಕೆಡಿಸಿಕೊಂಡ ನಾಯಕರಲ್ಲ !

1 ಲಕ್ಷ ಲ್ಯಾಪ್ ಟಾಪ್ 3 ಲಕ್ಷಕ್ಕೆ ಖರೀದಿ.?

ಬುಡಾ ಸೈಟ್ ಹಂಚಿಕೆಯಲ್ಲಿ ಗೋಲ್ ಮಾಲ್...!

ತಿಂಡಿ ಕಟ್ಟೆಯಲ್ಲಿ ಬಿಜೆಪಿಗರು ತಿನ್ನುತ್ತಿರುವುದೇನು?

ಉದ್ದುದ್ದಾಗಿ ಉದ್ಭವಿಸಿದವೇಕೆ ಈ ಪ್ರಶ್ನೆಗಳು?

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಇದೀಗ ಬೆಳಗಾವಿಯ ಹಿರಿಯ 
ಯೂಟ್ಯೂಬ್ ವಾಹಿನಿ ಪತ್ರಕರ್ತರೊಬ್ಬರ ವಿರುದ್ಧ  ಸಿಡಿದೆದ್ದಿದ್ದಾರೆ. ಕೇವಲ ತಮ್ಮನ್ನು, ತಮ್ಮ ಪಿಎಗಳನ್ನು, ಜಾರಕಿಹೊಳಿ ಕುಟುಂಬವನ್ನು ಸದಾ ಟಾರ್ಗೆಟ್ ಮಾಡುತ್ತಿದ್ದ ಯೂಟ್ಯೂಬ್ ಚಾನಲ್ ಒಂದರ ವಿರುದ್ಧ ಕೂಲ್ ಮೈಂಡ್ ಎಂದೇ ಖ್ಯಾತಿ ಪಡೆದ ಸತೀಶ ಜಾರಕಿಹೊಳಿ ಇದೀಗ ಮೊದಲ ಬಾರಿಗೆ ಕೆರಳಿ ಕೆಂಡವಾಗಿದ್ದಾರೆ. ಈ ಬಗ್ಗೆ ಅವರು ಆ ಪತ್ರಕರ್ತರಿಗೆ ಬಹಿರಂಗ ಸವಾಲು ಹಾಕಿದ್ದು ನಿಮಗೆ ಇಚ್ಛೆ ಇದ್ದರೆ ಕರೆಯಿರಿ, ನಾನೇ ಸ್ವತಃ  ನಿಮ್ಮ ಸ್ಟುಡಿಯೋಗೆ ಬಂದು ಬಹಿರಂಗ ಚರ್ಚೆಗೆ ಕುಳಿತುಕೊಳ್ಳುವೆ ಎಂದು 
ತಮ್ಮನ್ನೇ ಗುರಿಯಾಗಿಸಿ ಎಪಿಸೋಡ್ ನಿರ್ಮಿಸುತ್ತಿದ್ದ ಆ ಹಿರಿಯ ಪತ್ರಕರ್ತರ ಯೂಟ್ಯೂಬ್ ಸರಣಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸತೀಶ ಜಾರಕಿಹೊಳಿ ರಾಜ್ಯದ ಪ್ರಭಾವಿ ಜನನಾಯಕ. ಮಾಧ್ಯಮಗಳ ವಿರುದ್ಧ ಎಂದಿಗೂ ಮಾತನಾಡುವ ನಾಯಕನಲ್ಲ. ವಿವಾದಾಸ್ಪದ ಹಾಗೂ ಪ್ರಚಾರದ ಬೆನ್ನತ್ತಿ ಹೋಗುವ ನಾಯಕರು ಅವರಲ್ಲ. ಮಾಧ್ಯಮಗಳು ಸಹ ಅವರ ವಿರುದ್ಧ ಎಂದಿಗೂ ಕೆಟ್ಟದ್ದಾಗಿ ಬರೆದುಕೊಂಡಿಲ್ಲ. ಅದಕ್ಕೆ ತಕ್ಕಂತೆ ಸತೀಶ ಜಾರಕಿಹೊಳಿ ಅವರು 
ತಾಳ್ಮೆ ಹಾಗೂ ಜಾಣ್ಮೆಯಿಂದ ಮಾತನಾಡುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಆದರೆ ಅವರು ಇದೀಗ ಮೊಟ್ಟ ಮೊದಲ ಬಾರಿಗೆ ಮೌನ ಮುರಿದು ರೋಷಾವೇಶ ಕ್ಕೊಳಗಾಗಿದ್ದಾರೆ. ತಮ್ಮೊಳಗೆ 
ಮಡುಗಟ್ಟಿದ್ದ ವಾಹಿನಿ ವಿರುದ್ಧದ ಎಪಿಸೋಡ್ ಗಳಿಗೆ ಕೋಪೋದ್ರೇಕಗೊಂಡಿದ್ದಾರೆ.

ಯಮಕನಮರಡಿ ಶಾಸಕರು ಆಗಿರುವ ಸತೀಶ ಜಾರಕಿಹೊಳಿ ಅವರು ಇದೇ ಮೊದಲ ಬಾರಿಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಯೂಟ್ಯೂಬ್ ವಾಹಿನಿ ವಿರುದ್ಧ ಮಾತನಾಡಿದ್ದಾರೆ. ಸತೀಶ ಜಾರಕಿಹೊಳಿ ಮಾತನಾಡಿರುವ ಈ ಧ್ವನಿಮುದ್ರಿಕೆ ಈಗ ವೈರಲ್ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರು ಮಾತನಾಡಿರುವ ಧ್ವನಿಮುದ್ರಿಕೆಯಲ್ಲಿ ಇರುವುದಾದರೂ ಏನು ಗೊತ್ತೇ ? ಸತೀಶ ಜಾರಕಿಹೊಳಿ ಅವರ ಮಾತಿನಲ್ಲೇ ಕೇಳಿ ಬನ್ನಿ.

ಸತೀಶ ಜಾರಕಿಹೊಳಿ ಹೇಳಿದ್ದಿಷ್ಟು :

ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಸದ್ಯ ಗರ್ದಿ ಗಮ್ಮತ್ ಯೂಟ್ಯೂಬ್ ಹೆಸರಿನಲ್ಲಿ ವಾಹಿನಿ ನಡೆಸುತ್ತಿರುವ ಹುದಲಿ ಮೂಲದ ಬಾಪುಗೌಡ ಪಾಟೀಲ ಅವರು ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು.

ಆತ್ಮೀಯರೇ ಈಗಾಗಲೇ 2 ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಂದುಕೊಂಡಿರುವೆ. ಬಹಳ ದಿನಗಳಿಂದ ಮನಸಿನಲ್ಲಿತ್ತು. ಆದರೆ ಬಾಪುಗೌಡ ಪಾಟೀಲ ಅವರು ಮಾಡುತ್ತಿರುವ ಎಪಿಸೋಡ್ ನ್ನು ನೆಗೆಟಿವ್ ಆಗಿ ತೆಗೆದುಕೊಂಡಿದ್ದೆ. ಆದರೆ, ಅವರ ಎಪಿಸೋಡ್ ನಿಂದ ಸಾರ್ವಜನಿಕರು, ಕಾರ್ಯಕರ್ತರು, ಅಧಿಕಾರಿಗಳಿಗೆ ಗೊಂದಲ ಸೃಷ್ಟಿಯಾಗಿದೆ. ಅದಕ್ಕೆ ಇತಿಶ್ರೀ ಹಾಡಬೇಕು ಎಂದು ಬೆಳಕು ಚೆಲ್ಲಲು ಇದೀಗ ಪ್ರಯತ್ನ ಮಾಡಿರುವೆ.

ಯೂಟ್ಯೂಬ್ ವಾಹಿನಿ ನಡೆಸುತ್ತಿರುವ ಬಾಪುಗೌಡ ಪಾಟೀಲ ಹುದಲಿಯವರು. ಈಗ ಬೆಳಗಾವಿಯಲ್ಲಿ ವಾಸವಾಗಿದ್ದಾರೆ. ಗರ್ದಿ ಗಮ್ಮತ್ ಹೆಸರಿನಲ್ಲಿ ಸುಮಾರು ವರ್ಷದಿಂದ ಅವರು ಯೂಟ್ಯೂಬ್ ವಾಹಿನಿ ಮೂಲಕ ಮಾತನಾಡುತ್ತಿದ್ದಾರೆ.
ಅವರು ನೂರು ಎಪಿಸೋಡ್ ಮಾಡಿದಾಗಲೇ ಜನರಿಗೆ ಸತ್ಯ ಹೇಳಬೇಕು ಎಂದುಕೊಂಡಿದ್ದೆ. ಆದರೆ ಸುಮ್ಮನಾಗಿದ್ದೆ, ಅವರ ಮಾತಿಗೆ ಮಹತ್ವ ಏಕೆ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ಸುಮ್ಮನಿರಲು ಸಾಧ್ಯವಿಲ್ಲ, ಎಲ್ಲರಿಗೂ ಆಗಿರುವ ಗೊಂದಲ ನಿವಾರಣೆಗೆ ನಾನು ಮಾತನಾಡುತ್ತಿದ್ದೇನೆ ಎಂದು ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ), ಮಹಾನಗರ ಪಾಲಿಕೆ, ತಿನಿಸು ಕಟ್ಟಡಗಳು ಭ್ರಷ್ಟಾಚಾರದಿಂದ ನಲುಗಿಹೋಗಿವೆ. ಬೆಳಗಾವಿಯಲ್ಲೇ ಮನೆ ಮಾಡಿಕೊಂಡಿರುವ ನಿಮಗೆ ಈ ವಿಷಯ ಗಮನಕ್ಕೆ ಬಂದಿಲ್ಲವೇ ? ಜಿಲ್ಲೆಯ 18 ಶಾಸಕರ ಸಮಸ್ಯೆ ನಿಮಗೆ ಗೊತ್ತಿಲ್ಲವೆ ಅವರ ಬಗ್ಗೆ ಬರೆಯಿರಿ. ಕೇವಲ ನನ್ನನ್ನು, ನನ್ನ ಪಿಎಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಏಕೆ ? ಇಷ್ಟಕ್ಕೆ ನೀವೊಬ್ಬರು ಪ್ರಾಮಾಣಿಕ ಪತ್ರಕರ್ತರ ಗ್ರಾಮಪಂಚಾಯಿತಿ ಸದಸ್ಯರಿದ್ದಾಗ ರೇಶನ್ ಕಾರ್ಡ್ ಮಾಡಿಸಿ ಕೊಡುವುದಾಗಿ ಜನರಿಂದ ಎಷ್ಟು ವಸೂಲಿ ಮಾಡಿ ಕೊಂಡಿದ್ದೀರಿ ಗೊತ್ತಿಲ್ಲವೇ ?

ಪ್ರೆಸಿಡೆನ್ಸಿ ಕ್ಲಬ್ ಮೆಂಬರ್ ಶಿಪ್...! ಒಂದಲ್ಲ...! ಎರಡು..!!

ಈಗ ನಿಮ್ಮ ವಿಷಯಕ್ಕೆ ಬರುವೆ. ಬೆಳಗಾವಿ ಪ್ರಸಿಡೆನ್ಸಿ ಕ್ಲಬ್ ನಲ್ಲಿ ನೀವು ಅದ್ಹೇಗೆ ಸದಸ್ಯತ್ವ ಮಾಡಿಕೊಂಡಿದ್ದೀರಿ. ಉತ್ತರ ಕೊಡಿ. ಒಂದೂವರೆ ಲಕ್ಷ ನೀಡಿ ಮಾಡಿಕೊಳ್ಳಬೇಕಾದ ಸದಸ್ಯತ್ವವನ್ನು ನೀವು ಹಾಗೂ ನಿಮ್ಮ ಶಿಷ್ಯ ಶಿವಾನಂದ ಪಡಗುರಿಯವರು 3 ಲಕ್ಷ ಹಣ ಕೊಡದೆ ಅದ್ಹೇಗೆ ಮಾಡಿಕೊಂಡಿದ್ದೀರಿ. ನಿಮಗೆ ಉಚಿತವಾಗಿ, ದೇಣಿಗೆಯಾಗಿ ಸದಸ್ಯತ್ವ ಮಾಡಿಕೊಟ್ಟಿರುವರೋ ? 

ನಿಮ್ಮ ಅಂಗಡಿ ಕಣಬರ್ಗಿ ರಸ್ತೆಯಲ್ಲಿದೆ. 3 ಜನ ಅದನ್ನು ನಡೆಸುತ್ತಿದ್ದೀರಿ. ಆ ಅಂಗಡಿಗೆ ತಾಗಿಯೇ ನಿಮ್ಮ ಅಂಗಡಿ ಇದೆ. ನೀವು ಆ ಅಂಗಡಿ ಬಗ್ಗೆಯೂ ಮಾಹಿತಿ ಕೊಡಿ !

ಗೋಕಾಕ ಚುನಾವಣೆ ಕಾಲಕ್ಕೆ ನಾನು ಮೊದಲ ಬಾರಿ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದೆ. ಅದೊಂದು ಸಂದರ್ಭದಲ್ಲಿ ಬಿಟ್ಟರೆ ಮತ್ತೆ ಬೆಂಬಲ ನೀಡಲಿಲ್ಲ. ಮತ್ತೆ ನಡೆದ ಚುನಾವಣೆಗಳಲ್ಲಿ ರಮೇಶ್ ಜಾರಕಿಹೊಳಿ ಸೋಲು ಸ್ಥಿತಿಗೆ ಬಂದಿದ್ದರು. ಭೀಮಶಿ ಜಾರಕಿಹೊಳಿ, ಅಶೋಕ್ ಪೂಜಾರಿ ಅವರ ನಡುವಿನ ಗೊಂದಲದಲ್ಲಿ ರಮೇಶ್ ಜಾರಕಿಹೊಳಿ ಗೆದ್ದರು. ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ಗೋಕಾಕಕ್ಕೆ ಬಂದು ರಮೇಶ್ ಜಾರಕಿಹೊಳಿ 
ಅವರನ್ನು ಗೆಲ್ಲಿಸಿದರು ಎಂದು 
 ಅವರು ವಿಶ್ಲೇಷಿಸಿದ್ದಾರೆ.

ಎಪಿಸೋಡ್ ನಲ್ಲಿ ಸತೀಶ್ ಜಾರಕಿಹೊಳಿಯವರ ಮನೆಯಲ್ಲಿ ಅವರ ಪಿಎಗಳು ಸಾರ್ವಜನಿಕರಿಂದ ಸಾಕಷ್ಟು ದಂಡ(ಹಣ ವಸೂಲಿ)ಕಟ್ಟಿಸಿಕೊಳ್ಳುತ್ತಾರೆ, ಅವರ ಜತೆ ಇದ್ದವರೇ ದಂಡ ತೆಗೆದುಕೊಳ್ಳುತ್ತಾರೆ. ಅವರ ಪಿಎಗಳ ಇದನ್ನು ಮಾಡುತ್ತಿದ್ದರೂ 
ಭಾವಿ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ಬರುತ್ತಿಲ್ಲವೇ, ಇದರಿಂದ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಬಾಬಾಗೌಡ ಪಾಟೀಲರು  ಅವರು ಬಹಳ ಜಾಣತನದಿಂದ, ಸೂಕ್ಷ್ಮವಾಗಿ ಹೇಳುತ್ತಾರೆ. ಪದೇ ಪದೇ ಅವರ ಗಮನಕ್ಕೆ ಇದು ಬರುವುದಿಲ್ಲವೇ ಎಂದು ಹೇಳುತ್ತಾರೆ. ಮೊದಲು ನನ್ನ ಹೆಸರು ಕೆಡಿಸುತ್ತಾರೆ, ನಂತರ ಅದನ್ನು ಅವರ ಗಮನಕ್ಕೆ ಇಲ್ಲವೇ ಎನ್ನುತ್ತಾರೆ. ಇದನ್ನು ನಾನೀಗ ಸಾರ್ವಜನಿಕರಿಗೆ ಹೇಳಲೇಬೇಕು. ಮನೆ, ಸರಕಾರಿ ಕಚೇರಿ, ದೇವಸ್ಥಾನ ಇಂಥ ಸ್ಥಳದಲ್ಲಿ ಈ ರೀತಿಯ ಚಟುವಟಿಕೆ ಸ್ವಾಭಾವಿಕ. ಜನರು ಸಚಿವರು, ಶಾಸಕರ
ಭೇಟಿಗೆ ಜನ ಬಂದಿರುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆಗ ಅವರವರ ವ್ಯವಹಾರ ಅವರವರು ಮಾಡುತ್ತಾರೆ ನಿಜ. ಆದರೆ ಅದನ್ನು ಬಾಪುಗೌಡ ಪಾಟೀಲ ಅವರು ನಮ್ಮ ತಲೆಗೆ ಇದನ್ನು ಕಟ್ಟುವ ಪ್ರಯತ್ನ ಮಾಡುತ್ತಾರೆ. ಸಾಕಷ್ಟು ಚಾನಲ್ ನವರು ನನ್ನ ಬಗ್ಗೆ ಪರ ಹಾಗೂ ವಿರೋಧವಾಗಿ ತೋರಿಸುತ್ತಾರೆ. ಆದರೆ ಅವರೆಲ್ಲ ದ್ವೇಷದ ಹಿನ್ನೆಲೆ ಇಲ್ಲದೆ ಎಪಿಸೋಡ್ ಮಾಡುತ್ತಾರೆ. ಅವುಗಳ ಬಗ್ಗೆ ನಾನು ಎಂದೂ ಮಾತನಾಡಿಲ್ಲ. ಆದರೆ ಬಾಪುಗೌಡ ಪಾಟೀಲರ ಬಗ್ಗೆ ಸ್ಪಷ್ಟೀಕರಣ ನೀಡುವ ಅನಿವಾರ್ಯತೆ ಇದೆ. ಸಾರ್ವಜನಿಕರಿಗೆ ಸಹ ಇದನ್ನು ನಾನೀಗ ಹೇಳಲೇಬೇಕಾಗಿದೆ.  

ಪಿಎ ಗಳ ಮೂಲಕ ದಂಡ ಕಟ್ಟಿಸಿಕೊಳ್ಳುವುದು ನಾನೇನು ಪ್ರಾರಂಭ ಮಾಡಿಲ್ಲ, ಅಂಥ ಚಟುವಟಿಕೆಗಳಿಗೆ ನಾನು ಎಂದಿಗೂ ಪ್ರೋತ್ಸಾಹ ಕೊಡುವುದೂ ಇಲ್ಲ. ಅವರವರ ವ್ಯವಹಾರ ಮಾಡುತ್ತಾರೆ. ಅದರಲ್ಲಿ ತಪ್ಪಿಲ್ಲ.

ಆದರೆ ಬಾಪುಗೌಡ ಪಾಟೀಲ ನನ್ನ ವಿರೋಧಿಗಳ ಜತೆ ಕೈಜೋಡಿಸುವ ವ್ಯಕ್ತಿ. ಪ್ರಾಮಾಣಿಕ ಪತ್ರಕರ್ತ ಎಂದು ನಂಬಲು ಸಾಧ್ಯವಿಲ್ಲ. ನಾವೂ ಸಹ ಯೂಟ್ಯೂಬ್ ಮಾಡಿ ಬಾಪುಗೌಡರ ಗಮನಕ್ಕೆ ತರಲು ಪ್ರಯತ್ನ ಮಾಡಿರುವೆ. ಕಚೇರಿ, ದೇವಸ್ಥಾನದ ಹೊರಗೆ ಕುಳಿತು ದಂಡ(ಹಣ ವಸೂಲಿ) ಕಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅದಕ್ಕೆ ನಾನು ಜವಾಬ್ದಾರಿ ಅಲ್ಲ.

ಇವರಿಗೆ ಬೇರೆ ಶಾಸಕರು ಸಿಗುವುದಿಲ್ಲವೇ ? ನಾನಷ್ಟೇ ತಪ್ಪು ಮಾಡುತ್ತೇನೆಯೇ ? ಬೇಕಾದವರು ತಪ್ಪು ಮಾಡೋದಿಲ್ಲವೇ ? ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಏಕಸ್ ಕಂಪನಿಗೆ ದಂಡ ಹಾಕಬಹುದಿತ್ತು ಎಂದು ಎಪಿಸೋಡ್ ತಯಾರಿಸಿದ್ದಾರೆ. ಆದರೆ ನನ್ನ ಪಿಎಗಳು ಅಲ್ಲಿಗೆ ಯಾಕೆ ಹೋಗಿಲ್ಲ ಎಂದು ವಾಹಿನಿಯಲ್ಲಿ ಮಾತನಾಡಿದ್ದಾರೆ ! ಕಂಪನಿಗೆ ದಂಡ ಹಾಕುವುದು ನಮ್ಮ ಕೆಲಸ ಅಲ್ಲ. ಅದು ಸರಕಾರಿ ಅಧಿಕಾರಿಗಳು ಮಾಡಬೇಕಾದ ಕೆಲಸ. ನಾನು ದಂಡ ಹಾಕುವ ವ್ಯಕ್ತಿಯಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಬಾಪುಗೌಡ ಪಾಟೀಲ ಅವರು ಎಪಿಸೋಡ್ ತಯಾರಿಸಿದ್ದಾರೆ. ನಾನು ಲಟಕಿ ಹೊಡೆದರೆ ಬೆಳಗಾವಿ ಜಿಲ್ಲೆ ವಿಭಜನೆ ಆಗುತ್ತದೆಯಂತೆ. ಆದರೆ ಸತೀಶ್ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲ ಎನ್ನುತ್ತಾರೆ. ಜತೆಗೆ ಜಾರಕಿಹೊಳಿ ಕುಟುಂಬ ಯಾವಾಗ ಒಂದಾಗುತ್ತದೆ ಎಂದು ಹೇಳುತ್ತಾರೆ. ಮೊದಲ ಚುನಾವಣೆ ಹೊರತುಪಡಿಸಿ ಬೇರಾವ ಚುನಾವಣೆಯಲ್ಲೂ ನಾನು ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸಲಿಲ್ಲ ಎನ್ನುವ ಅಂಶವನ್ನು ಸತೀಶ್ ಪ್ರಸ್ತಾಪಿಸಿದ್ದಾರೆ.

ಕಮಿಷನ್ ಕುರಿತು ಶಾಸಕರ ಮನೆ ದೇವರು ಮಕ್ಕಳ ಮೇಲೆ ಆಣೆ ಮಾಡಲಿ ಎನ್ನುತ್ತಾರೆ,  
ನನ್ನ ಪಿಎ ಗಳ ಬಗ್ಗೆ ಮಾತ್ರ ಹೇಳುತ್ತಾರೆ. ಕೇವಲ ನನಗೆ ಮಾತ್ರ ಪಿಎಗಳು ಇದ್ದಾರೆಯೇ ? ರಾಜ್ಯದ ಇನ್ನುಳಿದ 224 ಶಾಸಕರಿಗೆ ಪಿಎಗಳಿ ಇಲ್ಲವೇ ? ನನ್ನ ಪಿಎಗಳು ಮಾತ್ರ ಅವರಿಗೆ ಕಾಣಿಸುತ್ತಿದ್ದಾರೆಯೇ ಎಂದು ಪಿಎಗಳ ಬಗೆಗಿನ ಎಪಿಸೋಡ್ ನ್ನು ನಿರಂತರವಾಗಿ ತಯಾರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಶಾಸಕರ ಬಗ್ಗೆ ಬಾಪುಗೌಡ ಪಾಟೀಲ ಇದುವರೆಗೆ ಒಂದೇ ಒಂದು ಎಪಿಸೋಡ್ ತೋರಿಸಿದ ಉದಾಹರಣೆ ಇಲ್ಲ. ಪ್ರತಿ ಸಲ ಜಾರಕಿಹೊಳಿ ಕುಟುಂಬ, ನನ್ನ ಪಿಎಗಳು ಮಾತ್ರ ಅವರಿಗೆ ಕಾಣಿಸುತ್ತಾರೆ. ಜಿಲ್ಲೆಯ ಬೇರೆ ಶಾಸಕರು ತಪ್ಪು ಮಾಡುತ್ತಿಲ್ಲವಾ ಅಥವಾ ಅವರಿಗೆ ಪಿಎಗಳು ಇಲ್ಲವೇ ?ಎಲ್ಲಾ ಶಾಸಕರ ಬಗ್ಗೆಯೂ ಅವರು ಯೂಟ್ಯೂಬ್ ನಲ್ಲಿ ತೋರಿಸಬೇಕು. ಅದೂ ಸಮಾನವಾಗಿ ತೋರಿಸಬೇಕು. ಆವಾಗ ನಿಜವಾದ ಪತ್ರಕರ್ತ ಎನಿಸಿಕೊಳ್ಳುತ್ತಾರೆ.

2008 ರಿಂದ ವಲಸೆ ಬಂದ  ಶಾಸಕರು ಕಾಂಗ್ರೆಸ್ ಪಕ್ಷವನ್ನು ತಮ್ಮ ಹಿರಿತನಕ್ಕೆ ಬಳಸಿಕೊಳ್ಳುತ್ತಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಚೇರಿಗೆ ಕೀಲಿ ಹಾಕುತ್ತಾರೆ ಎಂಬ ಎಪಿಸೋಡ್ ಗೆ ಪ್ರತ್ಯುತ್ತರ ನೀಡಿದ ಸತೀಶ್ ಜಾರಕಿಹೊಳಿ ಅವರು, ನಾನು ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದೇನೆ. ಇನ್ನೂ ಹತ್ತು ವರ್ಷ ಪಕ್ಷಕ್ಕಾಗಿ ಸೇವೆ ಮಾಡುವೆ. ಈ ಹಿಂದೆಯೂ ಶಂಕರಾನಂದ, ಸಿದ್ನಾಳ, ಕೌಜಲಗಿ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದಾರೆ. ಅವರಂತೆ ಈಗ ನಾನು ದುಡಿಯುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಸುದೀರ್ಘ ಇತಿಹಾಸ ಹೊಂದಿದ ಪಕ್ಷ. ಆದರೆ ನಮ್ಮ ಪಕ್ಷದ ಕಚೇರಿಗೆ ನಾನು ಹೋದ ಮೇಲೆಯೂ ಎಂದಿಗೂ ಕೀಲಿ ಹಾಕುವುದಿಲ್ಲ.

ಏನು ಮಾಡುವುದಿದ್ದರೂ (ಎಪಿಸೋಡ್)ಅದನ್ನು ಸೂಕ್ಷ್ಮವಾಗಿ ಮಾಡಬೇಕು. ನಾನಿಲ್ಲದಿದ್ದರೆ ಇನ್ನಾರಾದರೂ ಪಕ್ಷವನ್ನು ನಡೆಸುತ್ತಾರೆ. ಪಕ್ಷ ಅದು ಪಕ್ಷದ ಕಚೇರಿಗೆ ಕೀಲಿ ಹಾಕುವ ಪ್ರಶ್ನೆಯೇ ಬಾರದು ಎಂದು ಅವರು ಸ್ಪಷ್ಟನೆ ನೀಡಿದರು. 

ನೀವು ಇರುವ ಬೆಳಗಾವಿ ನಗರದ ಬಗ್ಗೆ ಎಂದಾದರೂ ಯೂಟ್ಯೂಬ್ ನಲ್ಲಿ ಎಪಿಸೋಡ್ ಮಾಡಿದ್ದೀರಾ ?ಬುಡಾ, ಕಾರ್ಪೋರೇಷನ್ ಬಗ್ಗೆ ನೀವು ತೋರಿಸುತ್ತೀರಾ ? 1ಲಕ್ಷದ ಲ್ಯಾಪ್ ಟ್ಯಾಪ್ ಗೆ 3 ಲಕ್ಷ ಮಾಡಿದ್ದಾರೆ. ಅದನ್ನು ನೀವು ತೋರಿಸುತ್ತೀರಾ ? ತಿನಿಸು ಕಟ್ಟಾ ಅಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ 13 ಸಾವಿರ ಬಾಡಿಗೆ ತೋರಿಸಿ ಅದನ್ನು 30-40 ಸಾವಿರಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಅವುಗಳನ್ನು ನಡೆಸಲು ಕೊಟ್ಟಿದ್ದಾರೆ. ಇವುಗಳ ಟೆಂಡರ್ ನ್ನು ಸಣ್ಣ ಪತ್ರಿಕೆಗೆ ನೀಡಿ ಹಂಚಿಕೆ ಮಾಡಿದ್ದಾರೆ.

ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕರ ಉಲ್ಲೇಖವನ್ನು ಪರೋಕ್ಷವಾಗಿ ನಮ್ಮ ಮಾಡಿರುವ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡ ಯುವಕರ ಬಗ್ಗೆ ಪೋಲಿಸರು ಹೆದರಿಸುತ್ತಾರೆ. ನೀವು ನಮ್ಮ ಶಾಸಕರ ಜತೆ ಇರಬೇಕು, ಇಲ್ಲವಾದರೆ ನಿಮ್ಮ ಮೇಲೆ ಕೇಸ್ ಹಾಕುವುದಾಗಿ ಬೆದರಿಸುತ್ತಾರೆ. ಬುಡಾದಲ್ಲಿ ಮೊನ್ನೆ 600 ಸೈಟ್ ನೀಡಿದ್ದಾರೆ. ಅದನ್ನೂ ನಿಮ್ಮ ಯೂಟ್ಯೂಬ್ ನಲ್ಲಿ ತೋರಿಸಿ ನೋಡೋಣ. ಸಾಕಷ್ಟು ಸಮಸ್ಯೆಗಳು ಜಿಲ್ಲೆಯಲ್ಲಿವೆ. ಅದರ ಬಗ್ಗೆಯೂ ಯೂಟ್ಯೂಬ್ ನಲ್ಲಿ ತೋರಿಸಿ ನೋಡೋಣ ? 


ನೀವು ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಂತು ಸೋತಿದ್ದೀರಿ. ನಿಮ್ಮ ಸ್ವಂತ ಜಮೀನಿನಲ್ಲಿ ಟ್ರ್ಯಾಕ್ಟರ್  ಹೋಗಿದ್ದಕ್ಕೆ ಎಷ್ಟು ಜನರಿಂದ 5 ಸಾವಿರ ದಂಡ ಪಡೆದುಕೊಂಡಿದ್ದೀರಿ ಎನ್ನುವುದು ನನಗೆ ಗೊತ್ತಿದೆ. ನೀವು ಮೊದಲು ನಮ್ಮ ಜತೆಗಿದ್ದವರು. 200 ಇಸ್ವಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನರಿಗೆ ರೇಷನ್ ಕಾರ್ಡ್ ನೀಡುವುದಾಗಿ ಎಷ್ಟು ಹಣ ಪಡೆದುಕೊಂಡಿದ್ದೀರಿ ? ಸಿದ್ಧನಗೌಡ ಭದ್ರಕಾಳಿ  ಅವರ ವಿಷಯ ಕುರಿತ ವಸೂಲಿ ಊರವರು ಹೇಳುತ್ತಾರೆ.

ತಮ್ಮ ಆಕಳು ಟೆಂಪೋ ಡಿಕ್ಕಿ ಹೊಡೆದು ಸತ್ತಾಗ ಟೆಂಪೋ ಚಾಲಕನಿಂದ ಇಪ್ಪತ್ತು ಸಾವಿರ ದಂಡ ಕಟ್ಟಿಸಿಕೊಂಡಿದ್ದೀರಿ. ಹುದಲಿ-ಮುತ್ಯಾನಟ್ಟಿ ರಸ್ತೆ ಕಾಮಗಾರಿ ವೇಳೆ ಕಂಟ್ರಾಕ್ಟರ್ ಗೆ ಹೆದರಿಸಿ ಕ್ಯಾಮೆರಾವನ್ನು  ಅದ್ಹೇಗೋ ಹೇಗೋ ತೋರಿಸಿ ವಸೂಲಿ ಮಾಡಿಕೊಂಡಿದ್ದೀರಲ್ಲ. ಅದನ್ನು ನೋಡಲು ನನಗೆ ಬಹಳ ಮಜಾ ಅನಿಸುತ್ತದೆ. ಮಾರುತಿ ಎಂಬವರ ಜಮೀನು ವಿಷಯದಲ್ಲಿ ಎಷ್ಟು ದಂಡ ಕಟ್ಟಿಸಿಕೊಂಡಿದ್ದೀರಿ. ನೀವೊಬ್ಬರು ಎಷ್ಟು ಪ್ರಾಮಾಣಿಕರು, ಪ್ರಾಮಾಣಿಕ ಪತ್ರಕರ್ತ ಎನ್ನುವುದು ನನಗೆ ಗೊತ್ತಿದೆ. ನಿಮ್ಮ ಇತಿಹಾಸ ತಿಳಿದಿದೆ. ನಿಮ್ಮ ಬಗ್ಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವು ಹಿಂದೆ ಮಾಡಿರುವ ಮಾಡಿರುವುದು ಏನು ಎನ್ನುವುದು ಗೊತ್ತಿದೆ. ಆದರೆ ನೀವೀಗ ಆಚಾರತನ ಹೇಳುತ್ತಿದ್ದೀರಿ. ನೀವು ಯಾರ್ಯಾರಿಂದ ಎಷ್ಟೆಷ್ಟು ಪಡೆದುಕೊಂಡಿದ್ದೀರಿ ? ಸಮಾಜ ಕಲ್ಯಾಣ ಇಲಾಖೆಗೆ ಫೋನ್ ಮಾಡಿ ದಂಡ ಕಟ್ಟಿಸಿಕೊಂಡ ಬಗ್ಗೆ ನನ್ನಲ್ಲಿ ರೆಕಾರ್ಡ್ ಇದೆ.  ಅನಂತರ ಅ ಇಲಾಖೆಯ ವಿಡಿಯೋ ಸ್ಟಾಪ್ ಮಾಡಿದ್ದೇಕೆ ? ಇದಕ್ಕೆ ಸ್ಪಷ್ಟೀಕರಣ ನೀಡಿ. ಬಹಿರಂಗ ಚರ್ಚೆಗೆ ನಾನು ಸಿದ್ಧ.

ನಮ್ಮ ಸಕ್ಕರೆ ಕಾರ್ಖಾನೆ 2600, 2,700 ಹಣವನ್ನು ರೈತರಿಗೆ ನೀಡುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಕೆಲ ಕಾರ್ಖಾನೆಗಳು  
ರೂ.2500 ನೀಡುತ್ತವೆ. ಆದರೂ ಅವುಗಳ ಬಗ್ಗೆ ಹೇಳದೆ ಕೇವಲ ನನ್ನ ಕಾರ್ಖಾನೆಯ ಬಗ್ಗೆ ಎಪಿಸೋಡ್ ನಲ್ಲಿ ತಿಳಿಸಲಾಗುತ್ತದೆ. ಎಲ್ಲದಕ್ಕೂ ಕೇವಲ ಸತೀಶ ಜಾರಕಿಹೊಳಿ ನಿಮ್ಮ ಚಾನಲ್ ಗೆ ಟಾರ್ಗೆಟ್ ಆಗಿದ್ದಾರೆ. ನೀವೆಷ್ಟೇ ನನ್ನ ಬಗ್ಗೆ ಹೇಳಿದರು ನನಗೇನೂ ಆಗುವುದಿಲ್ಲ. ನೀವು ನನ್ನ ತೋರಿಸುವುದರಿಂದ ಜನ ನನ್ನನ್ನು ಬಿಟ್ಟು ಹೋಗುವುದಿಲ್ಲ. ಜನ ಬರುತ್ತಾರೆ, ಹೋಗುತ್ತಾರೆ. ಜಿಲ್ಲೆಯ ಎಲ್ಲಾ ಶಾಸಕರ ಸಮಸ್ಯೆ ತೋರಿಸುವುದಾದರೆ ಪರವಾಗಿಲ್ಲ. ಆದರೆ ಕೇವಲ ನನ್ನೊಬ್ಬನನ್ನೇ ಟಾರ್ಗೆಟ್ ಮಾಡಿ ತೋರಿಸುವುದು ಏಕೆ ? 
ನಾನು ಯಮಕನಮರಡಿ ಕ್ಷೇತ್ರ ಪ್ರತಿನಿಧಿಸುವ ಮೊದಲು ಆ ಕ್ಷೇತ್ರ ಹೇಗಿತ್ತು ? ಈಗ ಹೇಗಿದೆ ?ಅದರ ಬಗ್ಗೆ ಬೆಳಕು ಚೆಲ್ಲಿ. ಜಿಲ್ಲೆಯ ಹದಿನೆಂಟು ಶಾಸಕರ ಬಳಿಯೂ ಸಮಸ್ಯೆಗಳಿವೆ. ಆ ಬಗ್ಗೆಯೂ ಬೆಳಕು ಚೆಲ್ಲಿ. ಒಳ್ಳೆಯ ಪ್ರಾಮಾಣಿಕ ಪತ್ರಕರ್ತರು ಇಂಥ ಕೆಲಸವನ್ನು ಮಾಡುತ್ತಾರೆ. ನಿಮಗೆ ಇಚ್ಛೆ ಇದ್ದರೆ ನಾನೇ ಸ್ವತಃ ನಿಮ್ಮ ಸ್ಟುಡಿಯೋಕ್ಕೆ ಚರ್ಚೆಗೆ ಬರುತ್ತೇನೆ. ಎಲ್ಲವನ್ನೂ ಹೇಳುತ್ತೇನೆ. ಕೇವಲ ನನ್ನ ಬಗ್ಗೆ ಮಾತ್ರ ಎಪಿಸೋಡ್ ತಯಾರಿಸದೇ ಬೇರೆಯವರ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿ ಎಂದು ಸತೀಶ ಜಾರಕಿಹೊಳಿ ಅವರು ಬಾಪುಗೌಡ ಪಾಟೀಲ ಅವರಿಗೆ 
ಸವಾಲು ಹಾಕಿದ್ದಾರೆ.