ಪುನೀತ್ 'ಅರಸು'ತ್ತ ಬಳಿ ಬಂದ ಬಿಳಿ ಪಾರಿವಾಳ...!

ಪುನೀತ್ 'ಅರಸು'ತ್ತ ಬಳಿ ಬಂದ ಬಿಳಿ ಪಾರಿವಾಳ...!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜನಜೀವಾಳ ಜಾಲ: ಬೆಳಗಾವಿ/ ಸವದತ್ತಿ:

ಕೆಲ ತಿಂಗಳುಗಳ ಹಿಂದೆ ಕನ್ನಡ ನಾಡನ್ನು ಬಿಟ್ಟು ಅಗಲಿದ ಜನಮಾನಸ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ನಾಡು ಮರೆತಿಲ್ಲ. ಇಡೀ ನಾಡೇ ಅವರ ಹೆಸರು ಹೇಳಿದರೆ ಕಂಬನಿಗೆರೆಯುತ್ತದೆ. ಇದಕ್ಕೆ ಅವರ ಅಭಿಮಾನಿಗಳು ಪಕ್ಷಿಗಳು ಸಹ ಪುನೀತ್ ರಾಜ್ ಕುಮಾರ್ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿರುವುದು ಕೆಲವೆಡೆ ಗೋಚರವಾಗುತ್ತಿವೆ ಬೆಳಗಾವಿ ಜಿಲ್ಲೆಯಲ್ಲೂ ಅಂತಹ ಘಟನೆ ನಡೆದಿದೆ.

ಎಲ್ಲಿಂದಲೊ ಬಂತು ಈ ಪಾರಿವಾಳ ..!: 
ಪುನೀತ್ ರಾಜಕುಮಾರ್ ಭಾವಚಿತ್ರ 'ಅರಸು'ತ್ತ ಬಂದ ಬಿಳಿ ಪಾರಿವಾಳ ಅಲುಗದೇ ಕುಳಿತಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ‌ ಕಡಬಿ ಗ್ರಾಮದಲ್ಲಿ ಈ ಗಮನ ಸೆಳೆಯುವ ಘಟನೆ ನಡೆದಿದ್ದು, ಕುರ್ಚಿ ಮೇಲೆ ಇಡಲಾದ ಪುನೀತ್ ರಾಜ್‍ಕುಮಾರ್ ಭಾವಚಿತ್ರದ ಪಕ್ಕ ಎಲ್ಲಿಂದಲೋ ಹಾರಿಬಂದ ಬಿಳಿ ಪಾರಿವಾಳ ಕಳೆದ ಮಾ. 19 ರಂದೇ ಬಂದು ಕುಳಿತಿದೆ. 

ಮನೆಯ ಮಾಲೀಕ ಚಾಯಪ್ಪ ಹುಂಡೇಕಾರ ಪ್ರತಿಕ್ರಿಯಿಸಿ ಈ ಪಾರಿವಾಳವನ್ನು ನಾವು ಸಾಕಿದ್ದಲ್ಲ. ಪುನೀತ್ ಕಾಲವಾದ ಬಳಿಕ ಅಭಿಮಾನಕ್ಕಾಗಿ ಮನೆಯಲ್ಲಿ ಅವರ ಭಾವಚಿತ್ರ ಇರಿಸಿದ್ದೆವು. ಆದರೆ ಎಲ್ಲಿಂದಲೋ ಬಂದ ಪಾರಿವಾಳ ಅವರ ಭಾವಚಿತ್ರದ ಬಳಿಯೇ ಎರಡು ದಿನದಿಂದ ಕುಳಿತಿದೆ ಎಂದಿದ್ದಾರೆ. ಕುತೂಹಲಕ್ಕೀಡಾದ ಜನತೆ ಪುನೀತರೊಂದಿಗೆ ಕುಳಿತ ಪಾರಿವಾಳ ನೋಡಲು ಆಗಮಿಸುತ್ತಿದ್ದಾರೆ.

ಇದೀಗ ಈ ಪಾರಿವಾಳದ ಇರುವಿಕೆ ಗ್ರಾಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೊನ್ನೆಯಷ್ಟೆ ಪುನೀತ್ ರಾಜ್ ಕುಮಾರ್ ಅವರ 
ಹುಟ್ಟುಹಬ್ಬವನ್ನು ಕನ್ನಡ ನಾಡೇ 
ಸಂಭ್ರಮದಿಂದ ಆಚರಿಸಿದೆ. ಅವರ ಅಭಿನಯದ ಜೇಮ್ಸ್‌‌ 
ಚಲನಚಿತ್ರಕ್ಕೆ ವಿಶ್ವದೆಲ್ಲೆಡೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಒಟ್ಟಾರೆ ಇದೀಗ ಕರ್ನಾಟಕ ಮಾತ್ರವಲ್ಲ, ಜಗತ್ತು ಪುನೀತ್ ರಾಜ್ ಕುಮಾರ್ ಅವರ ಗುಣಗಾನ ಮಾಡುತ್ತಿದೆ. ಮಾನವ ಕುಲಕ್ಕೆ ಮಾತ್ರವಲ್ಲ ಪಶು ಪಕ್ಷಿಗಳನ್ನು ಸಹ ಪುನೀತ್ ರಾಜ್ ಕುಮಾರ್ ಅವರ ಗುಣ ಸೆಳೆದಿದೆಯೆ , ಅವರ ಅಗಲುವಿಕೆ ಕೇವಲ ನಮಗೆ ಮಾತ್ರವಲ್ಲ. ಇನ್ನುಳಿದ ಜೀವಿಗಳಿಗೂ ಅನಾಥ ಭಾವ ಮೂಡಿಸಿದೆಯೆ ಎಂಬ ಅನುಮಾನ ವ್ಯಕ್ತವಾಗಿದೆ.