ಬೆನಕನ ಹಳ್ಳಿ ದತ್ತು: ಡಾ.ರವೀಂದ್ರನಾಥ

ಬೆನಕನ ಹಳ್ಳಿ ದತ್ತು: ಡಾ.ರವೀಂದ್ರನಾಥ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ :
 ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಜ್ಯೋತಿ 
ನಗರದ ಡೊಂಬರ ಎಸ್.ಸಿ ಕಾಲೋನಿಗೆ ಇತ್ತೀಚೆಗೆ ಭೇಟಿ ನೀಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 
ಪೊಲೀಸ್ ಮಹಾನಿರ್ದೇಶಕ ಡಾ. ಪಿ.ರವೀಂದ್ರನಾಥ ಅವರು ಕಾಲೋನಿಯಲ್ಲಿ ವಸತಿ ಹಾಗೂ ಇತರ ಮೂಲಭೂತ 
ಸೌಕರ್ಯಗಳ ಕೊರತೆಯನ್ನು ಪರಿಶೀಲಿಸಿದರು.


ಜ್ಯೋತಿ ನಗರದ ಡೊಂಬರ ಎಸ್.ಸಿ ಕಾಲೋನಿಯಲಿ ್ಲ ವಸತಿ ಮತು ್ತ ಇತರ ಮೂಲಭೂತ ಸೌಕರ್ಯಗಳನ್ನು 
ಒದಗಿಸುವ ಮತ್ತು ಕಾಲೋನಿಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜ್ಯೋತಿ ನಗರದ ಎಸ್.ಸಿ ಕಾಲೋನಿಯನ್ನು 
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇಲಾಖೆಯು ‘ದತ್ತಕು’ ತೆಗೆದುಕೊಳ್ಳುವ ಬಗ್ಗೆ ಘೋಷಿಸಿದೆ. ನಾಗರಿಕ ಹಕ್ಕು 
ಜಾರಿ ನಿರ್ದೇಶನಾಲಯ ಇಲಾಖೆಯು ಇತರ ಇಲಾಖೆಗಳ ಸಹಯೋಗ ಹಾಗೂ ಸಹಕಾರದೊಂದಿಗೆ ಜ್ಯೋತಿ ನಗರದ 
ಡೊಂಬರ ಎಸ್.ಸಿ ಕಾಲೋನಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮತ್ತು ಕಾಲೋನಿಯನ್ನು 
ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು ಎಂದು ಬೆಳಗಾವಿ ಪ್ರಾದೇಶಿಕ ನಾಗರಿಕ ಹಕ್ಕು 
ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಅನೀಲಕುಮಾರ ಭೂಮರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.