ಮೇಲ್ಮನೆ ಚುನಾವಣೆ : ಬುಧವಾರ ಡಿಕೆಶಿ ಬೆಳಗಾವಿಗೆ ದೌಡು !

ಮೇಲ್ಮನೆ ಚುನಾವಣೆ : ಬುಧವಾರ ಡಿಕೆಶಿ ಬೆಳಗಾವಿಗೆ ದೌಡು !
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ :
ತಮ್ಮ ಸಾರಥ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯನ್ನು ಗೆಲ್ಲ ಬೇಕೆಂಬ ತವಕದಲ್ಲಿರುವ 
ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಮೇ 25 ರಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅವರ ಆಗಮನ ಇದೀಗ ಬೆಳಗಾವಿ ಕಾಂಗ್ರೆಸ್ಸಿಗರಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮಧ್ಯಾಹ್ನ 12.30 ಕ್ಕೆ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಸದ್ಯ ಘೋಷಿಸಿರುವ ಅಭ್ಯರ್ಥಿಗಳ ಪರ ಕೆಲ ಅಪಸ್ವರ ಕೇಳಿಬರುತ್ತಿದೆ. ಸೋಮವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಭೆಗೆ ಕೆಲ ಕಾಂಗ್ರೆಸ್ ಶಾಸಕರು ಗೈರು ಹಾಜರಾಗಿದ್ದರು. ಭಿನ್ನಾಭಿಪ್ರಾಯದ ಮಾತು ಕೇಳಿಬಂದಿದ್ದವು. ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ಡಿಕೆಶಿ ಯಾವ ಕ್ರಮ ಅನುಸರಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.