ಟಿಪ್ಪು-ಸಾವರ್ಕರ್ ಫೋಟೋ ವಿವಾದ ; ಚಾಕು ಇರಿತ :ಲಾಠಿ ಪ್ರಹಾರ 144 ಸೆಕ್ಷನ್ ಜಾರಿ  

ಟಿಪ್ಪು-ಸಾವರ್ಕರ್ ಫೋಟೋ ವಿವಾದ ; ಚಾಕು ಇರಿತ :ಲಾಠಿ ಪ್ರಹಾರ 144 ಸೆಕ್ಷನ್ ಜಾರಿ  
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಶಿವಮೊಗ್ಗ :
ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಫೋಟೋ ವಿಚಾರದಲ್ಲಿ 2 ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದ್ದು ಇದೀಗ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144  ಜಾರಿಯಾಗಿದೆ.

ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಸೋಮವಾರ ಉಭಯ ಕೋಮುಗಳ ನಡುವೆ ತೀವ್ರ ವಾಗ್ವಾದ ನಡೆದು ಕೊನೆಗೆ ಲಾಠಿ ಪ್ರಹಾರ ನಡೆದಿದೆ.

75 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫೋಟೋ ಹಾಕಲಾಗಿತ್ತು. ಆಗ 1ಗುಂಪು ಸಾವರ್ಕರ್ ಫೋಟೋ ತೆಗೆಯಲು  ಪ್ರಯತ್ನಿಸಿದೆ. 
ಆ ಸಂದರ್ಭದಲ್ಲಿ ಉಭಯ ಗುಂಪುಗಳ ನಡುವೆ ಗಲಾಟೆ ಉಂಟಾಗಿ ಪೋಲಿಸರು ಸಾವರ್ಕರ್ ಫೋಟೋವನ್ನು ತೆರವು ಮಾಡಿದ್ದಾರೆ.


ಹಿಂದೂ ಸಂಘಟನೆ ಕಾರ್ಯಕರ್ತರು ಸಾವರ್ಕರ್ ಫೋಟೋ ತೆರವುಗೊಳಿಸಿರುವ ಕ್ರಮಕ್ಕೆ ಆಕ್ಷೇಪಿಸಿದರು. ಪ್ರತಿಭಟನೆ ಸ್ಥಳಕ್ಕೆ ಮತ್ತೊಂದು ಗುಂಪು ನುಗ್ಗಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ಚದುರಿಸಲು ಲಾಠಿ ಪ್ರಹಾರ ನಡೆಸಿದರು.

ಇದೀಗ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 

ವ್ಯಕ್ತಿಯೊಬ್ಬರಿಗೆ ಚಾಕು ಇರಿತ :
ಶಿವಮೊಗ್ಗದ 
ಉಪ್ಪಾರಕೇರಿಯಲ್ಲಿ ಪ್ರೇಮ್ ಸಿಂಗ್ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಾವರ್ಕರ್ ಫೋಟೊ ತೆರವಿಗೆ ಯತ್ನಿಸಿದ್ದಕ್ಕೆ 2ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು ಶಿವಮೊಗ್ಗ ನಗರಾದ್ಯಂತ 3ದಿನ ನಿಷೇಧಾಜ್ಞೆ ಹೇರಲಾಗಿದೆ.

ಗಾಂಧಿಬಜಾರ್ ನಲ್ಲಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ಪ್ರವೀಣ್ ಎಂಬುವವರಿಗೂ ಚಾಕುವಿನಿಂದ ಇರಿಯಲಾಗಿದೆ.