ಬೆಳಗಾವಿಯಲ್ಲಿ ಮಹಿಳೆ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಆರೋಪಿ ನಿರ್ದೋಷಿ..!

ಬೆಳಗಾವಿಯಲ್ಲಿ ಮಹಿಳೆ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಆರೋಪಿ ನಿರ್ದೋಷಿ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿಯಲ್ಲಿ ಮಹಿಳೆ, ಇಬ್ಬರು ಮಕ್ಕಳನ್ನು ಕೊಲೆ ಆರೋಪಿ ಮಾಡಿದನಿರ್ದೋಷಿ..!


ಧಾರವಾಡ ಹೈಕೋರ್ಟ್ ದಿಂದ ಮಹತ್ವದ ಆದೇಶ..!


ಬೆಳಗಾವಿ: ಕುವೆಂಪು ನಗರದಲ್ಲಿ 7 ವರ್ಷಗಳ ಹಿಂದೆ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಆರೋಪಿ ಯುವಕನಿಗೆ ಧಾರವಾಡ ಹೈಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.

ಏನಿದು ಘಟನೆ ..?

ಕುವೆಂಪು ನಗರದಲ್ಲಿ ಅಕ್ಕಪಕ್ಕದಲ್ಲೇ ವಾಸವಾಗಿದ್ದ 23 ವರ್ಷದ ಪ್ರವೀಣ ಎಸ್ ಭಟ್ ಹಾಗೂ 37 ವರ್ಷದ ರೀನಾ ರಾಕೇಶ್ ಮಾಲಗತ್ತಿ ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಆದರೆ ರೀನಾಳ ಕಾಟ ತಾಳಲಾರದೆ ‍ಪ್ರವೀಣ 16 ಅಗಸ್ಟ್ 2015 ರ ಬೆಳಗ್ಗೆ ರೀನಾಳನ್ನು ಆಕೆಯ ಮನೆಯ ಮಲಗುವ ಕೊನೆಯಲ್ಲಿ ಕೊಲೆ ಮಾಡಿ ಹಿಂದಿರುಗುವ ಸಮಯದಲ್ಲಿ ಇಬ್ಬರು ಮಕ್ಕಳಾದ ಸಾಹಿತ್ಯ (5) ಆದಿತ್ಯ (12) ಕೊಲೆ ಮಾಡಿದ್ದನ್ನು ನೋಡಿದ್ದಕ್ಕಾಗಿ ಅವರನ್ನು ಕೊಲೆ ಮಾಡಿ ಬಂದಿದ್ದ ಎಂದು ಅಂದು ಎಪಿಎಂಸಿ ಪೋಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಱಿದ್ದರು.

ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018 ರ ಏಪ್ರಿಲ್ 16 ರಂದು ಪ್ರವೀಣ್‌ ಭಟ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು . ಆದರೆ , ಈ ಆದೇಶವನ್ನು ತಡೆಹಿಡಿದ ಧಾರವಾಡ ಹೈಕೋರ್ಟ್ ಪೀಠವು ಮೊನ್ನೆ (ಜೂನ್ 21 ರಂದು) ಆರೋಪಿಯನ್ನು ಖುಲಾಸೆ ಮಾಡಿದೆ . ನ್ಯಾಯಮೂರ್ತಿಗಳಾದ ಕೆ.ಎಸ್ . ಮುದಗಲ್ ಹಾಗೂ ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ .

ಈ ತೀರ್ಪು ಜನಸಾಮಾನ್ಯರನ್ನು ಬೆಚ್ಚಿ ಬೆಳಿಸುವಂತೆ ಮಾಡಿದೆ. ಏಕೆಂದರೆ ತಾಯಿ, ಮಗ ಹಾಗೂ ಮಗಳನ್ನು ಕ್ರೂರವಾಗಿ ಕೊಂದವನು ನಿರ್ದೋಷಿ ಆಗಿದ್ದಾದರೂ ಹೇಗೆಎಂದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ.