ಹಾಲಭಾವಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಪತಿ ಸೇರಿ ಮೂವರ ಬಂಧನ..!

ಹಾಲಭಾವಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಪತಿ ಸೇರಿ ಮೂವರ ಬಂಧನ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಹಾಲಭಾವಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ ಪತಿ ಸೇರಿ ಮೂವರ ಬಂಧನ..!

ಮೂರು ದಿಕ್ಕಿನಿಂದ ಮೂವರನ್ನು ಬಂಧಿಸಿ ಹಿಂಡಲಗಾ ಸೇರಿಸಿದ ಕಾಕತಿ ಪೊಲೀಸರು..!

ಬೆಳಗಾವಿ : ಹಾಲಭಾವಿಯಲ್ಲಿ ರೆಣುಕಾ ಭರಮಾ ನಾಯಿಕ ಎಂಬಾಕೆ ತನ್ನ ಪತಿ, ಆತನ ಸಹೋದರ, ಆತನ ಪತ್ನಿ ಹಾಗೂ ಮಾವಂದಿರು ಸೇರಿಕೊಂಡು ತವರು ಮನೆಯಿಂದಿ ವರದಕ್ಷಿಣೆ ತರುವಂತೆ ನೀಡುತಿದ್ದ  ಕಿರುಕುಳಕ್ಕೆ ಬೇಸತ್ತು ದಿ: 11-9-2022 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ತಲೆಮರಿಸಿಕೊಂಡಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಕೊನೆಗೂ ಕಾಕತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಥಣಿ, ಪಾಶ್ಚಾಪೂರ ಹಾಗೂ ಐನಾಪೂರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಭರಮಾ ಮುಶಪ್ಪಾ ನಾಯಿಕ, ಹಾಲಪ್ಪಾ ಮುಶಪ್ಪಾ ನಾಯಿಕ ಹಾಗೂ ಯಲ್ಲಪ್ಪಾ ಮುಶಪ್ಪಾ ನಾಯಿಕ ಮೂವರು ಸಹೋದರರನ್ನು ಎಸಿಪಿ ಎಸ್ ವಿ ಗಿರೀಶ್ ಮಾರ್ಗದರ್ಶನದಲ್ಲಿ ಪಿಐ ಐ ಎಸ್ ಗುರುನಾಥ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಹುಲಕುಂದ, ಪಿಎಸ್ಐ ಆದಿತ್ಯ ರಾಜನ್, ಸಿಬ್ಬಂದಿ ಪ್ರಕಾಶ ಬಲ್ಲಾಳ, ತುಕಾರಾಮ ದೊಡಮನಿ, ಯಲ್ಲಪ್ಪಾ ಕೊಚ್ಚರಗಿ, ವೀರುಪಾಕ್ಷಿ ಮಾನಗಾವಿ ಸೇರಿದಂತೆ ಇತರರ ತಂಡ ಪತ್ತೆ ಹಚ್ಚಿ ಬಂಧಿಸಿ ಹಿಂಡಲಗಾ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಿರುವ ಇಬ್ಬರು ಆರೋಪಿಗಳಾಗಿ ಈ ತಂಡ ತಿವ್ರ ತನಿಖೆ ಕೈಕೊಂಡಿದ್ದು ಶೀಘ್ರದಲ್ಲೇ ಬಂಧನ ಮಾಡುವುದಾಗಿ ತಿಳಿದು ಬಂದಿದೆ.