ಭಾನುವಾರ ಮುಂಜಾನೆ ಗೋವಾದಲ್ಲಿ ನಡೆದ ಅಪಘಾತದಲ್ಲಿ ಮೂವರು ಬೆಳಗಾವಿ ಯುವಕರ ಸಾವು 

ಭಾನುವಾರ ಮುಂಜಾನೆ ಗೋವಾದಲ್ಲಿ ನಡೆದ ಅಪಘಾತದಲ್ಲಿ ಮೂವರು ಬೆಳಗಾವಿ ಯುವಕರ ಸಾವು 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಪಣಜಿ :
ಗೋವಾದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವನ್ನಪ್ಪಿದ್ದಾರೆ.  ವರದಿಗಳ ಪ್ರಕಾರ, ಗೋವಾ ಪೊಲೀಸರು ಗುರುತಿಸಿರುವ ಮೂವರು ಮೃತರನ್ನು  ಅನಗೋಳಕರ  (28), ರೋಹನ್ ಗದಗ (26), ಸನ್ನಿ ಅಣ್ವೇಕರ್  (31) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ.  ವಿಶಾಲ ಕಾರೇಕರ್ (27) ಗಂಭೀರವಾಗಿ ಗಾಯಗೊಂಡಿದ್ದಾರೆ.  ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಾಪುಸಾ ಬಳಿಯ ಕುಚೇಲಿ ಬಳಿ ಅವರ ವಾಹನ ರಸ್ತೆ ಬದಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಬೆಳಗಿನ 4 ರ ಸುಮಾರಿಗೆ ಸ್ವಿಫ್ಟ್ ಕಾರು ಮರಕ್ಕೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಒಬ್ಬ ಗಂಭೀರ ಗಾಯಗೊಂಡಿದ್ದಾನೆ.
ಬೆಳಗಾವಿ ನೋಂದಣಿ KA-22, A-9813 ಕಾರಿನ ಮೂಲಕ ಗೋವಾ ಪೊಲೀಸರು ಬೆಳಗಾವಿಯಲ್ಲಿ ಅವರ ಮನೆಯವರ ತಪಾಸಣೆ ಕೈಗೊಂಡರು. ಸ್ಥಳೀಯ ಪೊಲೀಸರು ತಪಾಸಣೆ ಕೈಗೊಂಡರು.