ರೋಷನ್‌ ಎಲ್ಲಿ ಓಡಾಡುತ್ತಾನೋ‌ ಅಲ್ಲೆಲ್ಲಾ ಹಿಂಬಾಲಿಸುತ್ತಿದೆ ಈ ಕೋಣ !

ರೋಷನ್‌ ಎಲ್ಲಿ ಓಡಾಡುತ್ತಾನೋ‌ ಅಲ್ಲೆಲ್ಲಾ ಹಿಂಬಾಲಿಸುತ್ತಿದೆ ಈ ಕೋಣ !
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App


ಕೊಪ್ಪಳ : 
ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತು ಬಹಳ ಜನಪ್ರಿಯ. ಅದರಂತೆ ಪ್ರಾಣಿಗಳು ಸಹ ದ್ವೇಷ ಸಾಧಿಸಿದರೆ ಮರೆತುಬಿಡುವುದಿಲ್ಲ ಎನ್ನುವುದಕ್ಕೆ ಇಲ್ಲೊಂದು ಅತ್ಯುತ್ತಮ ಉದಾಹರಣೆ ದೊರೆಯುತ್ತದೆ.


ಇದು ಅಂತಿಂಥ ವೈರತ್ವವಲ್ಲ. ವ್ಯಕ್ತಿಯೊಬ್ಬನ ಹಿಂಬಾಲಿಸುವ ಪ್ರಾಣಿಯೊಂದು ಆತನನ್ನು ನಿರಂತರವಾಗಿ ಎಡೆಬಿಡದೆ ಕಾಡುತ್ತಿದೆ. ಅಪ್ಪಿತಪ್ಪಿ ಆತನ ಎದುರು ಸಿಲುಕಿದರೆ ಆತನ ಜೀವವೇ  ಹೋಗುವ ಆತಂಕ ಎದುರಾಗಿದೆ. 
ಇದು ನಡೆದಿರುವ ಸತ್ಯ ಘಟನೆ.
ಬಂಡಿ ಹರ್ಲಾಪೂರ ಗ್ರಾಮದಲ್ಲಿ ರೋಷನ್‌ ಎನ್ನುವ ವ್ಯಕ್ತಿಯ ಬೆನ್ನಿಗೆ ಬಿದ್ದಿರುವ ಕೋಣ ಬೆಂಬಿಡದೇ ಕಾಡುತ್ತಿದೆ. ಇದು  ಗ್ರಾಮ ದೇವತೆಯ ಪವಾಡ, ಹಾಗಾಗಿ ಕೋಣ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿದೆ. ಕೋಣಕ್ಕೆ ಕ್ಷಮೆ ಕೇಳುವಂತೆ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕೋಣವನ್ನು ಗ್ರಾಮದ ಜನತೆ ಗ್ರಾಮ ದೇವತೆ ಕಂಠಿ ದುರ್ಗಮ್ಮ ದೇವಿಯ ಸಾಕು ಕೋಣವೆಂದು ಕಳೆದ ಎರಡು ವರ್ಷದ ಹಿಂದೆಯೇ ಊರಲ್ಲಿ ಬಿಡಲಾಗಿದೆ. ಊರ ಸುತ್ತ ಮುತ್ತ, ರೈತರ ಜಮೀನುಗಳಲ್ಲಿ ಮೇಯ್ದುಕೊಂಡು ಆರಾಮವಾಗಿಯೇ ಇದ್ದ  ಕೋಣಕ್ಕೆ ಕಳೆದ ವಾರ ರೋಷನ್‌ ಅಲಿ ಎರಡೇಟು ಬಡಿದಿದ್ದಾನೆ. ಆಗ ಸುಮ್ಮನಿದ್ದ ಕೋಣವು ಆರು ದಿನಗಳ ಬಳಿಕ ರೋಷನ್‌ ಅಲಿಯ ಮೇಲೆ ಹಾಯಲು ಮುಂದಾಗಿತ್ತಿದೆ. ಆತನನ್ನು ಎಲ್ಲಿ ಓಡಾಡಲು ಬಿಡುತ್ತಿಲ್ಲ.

ರೋಷನ್‌ ಅಲಿ ಎಲ್ಲಿ ಓಡಾಡುತ್ತಾನೋ‌ ಅಲ್ಲೆಲ್ಲಾ ಕೋಣ ಹಿಂಬಾಲಿಸುತ್ತಿದೆ. ಕೋಣ ನೋಡಿದ ಆತ ಭಯಗೊಂಡು ದೂರ ಓಡಿ ಹೋಗುವಂತಾಗಿದೆ. ಹಗಲು ರಾತ್ರಿ ಅವರ ಮನೆ ಮುಂಭಾಗದಲ್ಲಿಯೇ ಕಾಯುತ್ತಿರುವ ಕೋಣ ಆತನ ಮೇಲೆ ದ್ವೇಷ ಸಾಧಿಸುವುದನ್ನು ಕಣ್ಣಾರೆ ಕಂಡು ವೀಡಿಯೋ ಮಾಡಿದ್ದಾರೆ.

ಕೋಣ ರೊಚ್ಚಿಗೆದ್ದಿರುವುದಕ್ಕೆ ಗ್ರಾಮದ ದೇವಿಯೇ ಪವಾಡ ಇದಾಗಿದೆ. ನೀನು ಮೊದಲು ದೇವಿಗೆ ಕ್ಷಮೆ ಕೇಳು ಎಂದು ಜನತೆ ರೋಷನ್‌ ಅಲಿಗೆ ಮನವಿ ಮಾಡಿದ್ದಾರೆ. ಇದರಿಂದ ಆತನು ಕೋಣಕ್ಕೆ ಅಕ್ಕಿ, ಬೆಲ್ಲ ಸೇರಿ ಇತರ ಪದಾರ್ಥ ಇಟ್ಟು,‌ ಕ್ಷಮೆ ಕೇಳಿದ್ದಾನೆ. ಆದರೂ ಅದು ಎರಗಿ ಬರುತ್ತಿದೆ. ಇದರಿಂದ ಆತನಿಗೆ ದಿಕ್ಕೆ ತಿಳಿಯದಂತಾಗಿದೆ. ಇದೆಲ್ಲವನ್ನು ಅವಲೋಕಿಸಿದ ಜನತೆ ಕೋಣಕ್ಕೆ ಯಾರೂ ಹೊಡೆಯಬಾರದು ಎಂದು ಗ್ರಾಮಸ್ಥರಿಗೆ ಕಟ್ಟಾಜ್ಞೆ ಮಾಡಿದ್ದಾರೆ.