ಸೂರ್ಯಾಸ್ತದ ನಂತರವೂ ಹಾರಾಡುವ ರಾಷ್ಟ್ರಧ್ವಜ...

ಸೂರ್ಯಾಸ್ತದ ನಂತರವೂ ಹಾರಾಡುವ ರಾಷ್ಟ್ರಧ್ವಜ...
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ:

ಸೂರ್ಯಾಸ್ತದ ಒಳಗೆ ಅವರೋಹಣ ಮಾಡಬೇಕಾದ ರಾಷ್ಟ್ರಧ್ವಜವನ್ನು ತಡರಾತ್ರಿಯವರೆಗೆ ಗಮನಿಸದೇ ಅವಮಾನಿಸುವ ದುಷ್ಟ ಕೃತ್ಯ ಬರಗಾಂವ ಗ್ರಾಪಂ ನಲ್ಲಿ ನಡೆದಿರುವುದು ವರದಿಯಾಗಿದೆ.
ಖಾನಾಪುರ ತಾಲೂಕಿನ ಬರಗಾಂವ  ಗ್ರಾಮ ಪಂಚಾಯಿತಿ ಮೇಲೆ ಹಾರಿಸಲಾಗುವ ರಾಷ್ಟ್ರಧ್ವಜವನ್ನು ಸೂರ್ಯಾಸ್ತದ ಒಳಗೆ ಇಳಿಸಬೇಕಿರುವುದು ರಾಷ್ಟ್ರ ಧ್ವಜಕ್ಕೆ ಕೊಡಬೇಕಾದ ಯೋಗ್ಯ ಗೌರವವಾಗಿದೆ. ಆದರೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಇಲ್ಲಿ ರಾಷ್ಟ್ರ್ರಧ್ವಜದ ಗೌರವದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು ವಿಡಿಯೋ ಕೂಡ ಹೊರಬಿದ್ದಿದೆ.
ಬೆಳಗಿನ ಸೂರ್ಯೋದಯ ಸಮಯಕ್ಕೆ  ಹಾರಿಸಲಾದ ಧ್ವಜವನ್ನು ಕಡ್ಡಾಯವಾಗಿ ಸೂರ್ಯಾಸ್ತದ ಒಳಗೆ ಇಳಿಸುವುದು ಸಹ ಅಷ್ಟೇ ಜವಾಬ್ದಾರಿಯ ಕರ್ತವ್ಯವಾಗಿದೆ ಆದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ, ಇದು ಹಲವು ಭಾರಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.