ತೆಲಂಗಾಣಕ್ಕೆ ರಾಯಚೂರು ಬೇಕಂತೆ 

ತೆಲಂಗಾಣಕ್ಕೆ ರಾಯಚೂರು ಬೇಕಂತೆ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App


ಹೈದ್ರಾಬಾದ್ :
ನೆರೆಯ ತೆಲಂಗಾಣ ಇದೀಗ ಕರ್ನಾಟಕದ ಭೂಮಿ ಮೇಲೆ ಕಣ್ಣಿಟ್ಟಿದೆ. ಕರ್ನಾಟಕದ ರಾಯಚೂರನ್ನು ತಮ್ಮ ರಾಜ್ಯಕ್ಕೆ ಸೇರಿಸುವ ಸಣ್ಣ ಪ್ರಯತ್ನಕ್ಕೆ ಮುಂದಾದಂತಿದೆ. ಈ ಬಗ್ಗೆ ಸ್ವತಃ ಆ ರಾಜ್ಯದ ಮುಖ್ಯಮಂತ್ರಿಯೇ ನೀಡಿರುವ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಇಷ್ಟಕ್ಕೂ ಮುಖ್ಯಮಂತ್ರಿ ನೀಡಿದ ಹೇಳಿಕೆ ಏನು ?
ರಾಯಚೂರು ಜಿಲ್ಲೆಯ ಜನ ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಬಯಸುತ್ತಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೇಳಿದ್ದಾರೆ.

 ತೆಲಂಗಾಣ ಸರಕಾರದ ಅಭಿವೃದ್ಧಿ ಯೋಜನೆಗಳಿಂದ ರಾಯಚೂರು ಜನ ಆಕರ್ಷಿತರಾಗುತ್ತಿದ್ದಾರೆ ಎಂದು ಅವರು ನೈರುತ್ಯ ತೆಲಂಗಾಣದ ನೂತನ ಜಿಲ್ಲೆ ವಿಕಾರಾಬಾದ್ ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಗಡಿ ಪ್ರದೇಶವಾದ ತಾಂಡೂರಿನಲ್ಲಿರುವ ನೀವು ಕರ್ನಾಟಕದ ಜತೆ ಉತ್ತಮ ಸಂಪರ್ಕ ಹೊಂದಿದ್ದೀರಿ. ರಾಯಚೂರಿನ ಗಡಿ ಭಾಗದ ಕೆಲ ಜನರು ತೆಲಂಗಾಣದ ಜನತೆ ತಮ್ಮನ್ನು ವಿಲೀನಗೊಳಿಸುವಂತೆ ಇಲ್ಲವೇ ನಮ್ಮ ರಾಜ್ಯದಲ್ಲಿ  ಅಭಿವೃದ್ಧಿ ಕಾರ್ಯಕ್ರಮಗಳನ್ನು ತಮಗೂ ಒದಗಿಸುವಂತೆ ಒತ್ತಾಯಿಸಿದ್ದಾರೆ ಎಂದು ಚಂದ್ರಶೇಖರ್ ರಾವ್ ಅವರು ತಮ್ಮ ಸರ್ಕಾರದ ಉಚಿತ ಕುಡಿಯುವ ನೀರಿನ ಮಿಷನ್ ಭಗೀರಥ, ಹಾಲುಣಿಸುವ ತಾಯಂದಿರಿಗೆ ಕೆಸಿಆರ್ ಕಿಟ್, ಉಚಿತ ವಿದ್ಯುತ್,  ಪ್ರತಿ ಎಕರೆಗೆ ರೂ. ಹತ್ತು ಸಾವಿರ ವಾರ್ಷಿಕ  ಸಹಾಯ ಧನ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.

 ಕೆಸಿಆರ್ ಈ ಈ ಹಿಂದೆಯೂ ಮಹಾರಾಷ್ಟ್ರದ ನಾಂದೇಡ್ ಗಡಿಭಾಗದ ಜನರು ತೆಲಂಗಾಣ ಜತೆ ಸೇರಲು ಬಯಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. 


ಕಳೆದ ವರ್ಷ ಕರ್ನಾಟಕದ ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಇದೇ ರೀತಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅಭಿವೃದ್ಧಿ ವಿಷಯದಲ್ಲಿ ರಾಯಚೂರನ್ನು ಮೊದಲಿನಿಂದಲೂ ನಿರ್ಲಕ್ಷಿಸಲಾಗುತ್ತಿದೆ. ಉತ್ತರ ಕರ್ನಾಟಕ ಎಂದರೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಎಂದಷ್ಟೇ ಪರಿಗಣಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಂದರೆ ಬೀದರ್, ಕಲಬುರ್ಗಿ ಎರಡನ್ನು ಮಾತ್ರ ನೋಡಲಾಗುತ್ತದೆ. ರಾಯಚೂರು ಬೇಡವಾಗಿದ್ದರೆ ಅದನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿದ್ದರು. ಇದು ತೆಲಂಗಾಣ ರಾಜ್ಯದಲ್ಲಿ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಗಿತ್ತು. ಕರ್ನಾಟಕದ ಗಡಿ ಪ್ರದೇಶಗಳ ಬಗ್ಗೆ ಹಕ್ಕು ಮಂಡಿಸಲು ಇದು ಸಕಾಲ ಎಂದು ಜನ ಪ್ರತಿಕ್ರಿಯಿಸಿದ್ದವು.