ನಿವೃತ್ತಿಗೂ ಮುನ್ನ ಗಣೇಶೋತ್ಸವವನ್ನು ಭರ್ಜರಿಯಾಗಿ ಆಚರಿಸಿದ ತಹಶಿಲ್ದಾರ ಆರ್ ಕೆ ಕುಲಕರ್ಣಿ..!

ನಿವೃತ್ತಿಗೂ ಮುನ್ನ ಗಣೇಶೋತ್ಸವವನ್ನು ಭರ್ಜರಿಯಾಗಿ ಆಚರಿಸಿದ ತಹಶಿಲ್ದಾರ  ಆರ್ ಕೆ ಕುಲಕರ್ಣಿ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ತಹಶಿಲ್ದಾರ ಕಛೇರಿ ಗಣೇಶೋತ್ಸವ ಅಂಗವಾಗಿ ಸತ್ಯನಾರಾಯಣ ಪೂಜೆ  ಹಾಗೂ ಮಹಾಪ್ರಸಾದ ಸಂಪನ್ನ..!

ವ್ರೃತ್ತಿ ಜೀವನದ ಕೊನೆಯ ಗಣೇಶೋತ್ಸವವನ್ನು ಸಹೋದ್ಯೋಗಿಗಳೊಂದಿಗೆ ಭರ್ಜರಿಯಾಗಿ ಆಚರಿಸಿದ ಆರ್ ಕೆ ಕುಲಕರ್ಣಿ..!

ಬೆಳಗಾವಿ: ಮುಂದಿನ ವರ್ಷ ನಿವೃತ್ತಿ ಆಗಲಿರುವ ಬೆಳಗಾವಿ ತಾಲೂಕು ತಹಶಿಲ್ದಾರ ಆರ್ ಕೆ ಕುಲಕರ್ಣಿ ಅವರು ತಮ್ಮ ಕಛೇರಿಯ ಹಾಗೂ ವೃತ್ತಿ ಜೀವನದ ಕೊನೆಯ ಗಣೇಶೋತ್ಸವವನ್ನು ಸಹೋದ್ಯೊಗಿಗಳು ಹಾಗೂ ಇಲಾಖೆ ಸಿಬ್ಬಂದಿಗಳೊಂದಿಗೆ ಜೊತೆಗೆ ಅದ್ದೂರಿಯಾಗಿ ಹಾಗೂ ಭರ್ಜರಿಯಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಸಂಪನ್ನಗೊಳಿಸಿದರು. 

ತಹಶಿಲ್ದಾರ ಕಛೇರಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಗಣೇಶನ ಮೂರ್ತಿಯ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದವನ್ನು ಇಂದು (ಶನಿವಾರ) ಎಲ್ಲರಿಗೂ ತಮ್ಮ ಸ್ವಂತ ಖರ್ಚಿನಲ್ಲಿ ಭರ್ಜರಿಯಾಗಿ ಏರ್ಪಡಿಸಿದ್ದರು.  ತಹಶಿಲ್ದಾರರ ಕಛೇರಿಯ, ಕಂದಾಯ ಇಲಾಖೆಯ ಹಾಗೂ ಎಲ್ಲ ಸರ್ಕಾರಿ ಕಛೇರಿಯ ಸಿಬ್ಬಂದಿಗಳು ಹಾಗೂ ನಗರದಲ್ಲಿನ ಸಾವಿರಾರು ಭಕ್ತರು ಗಣೇಶನ ಪೂಜೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.  


ಈ ಗಣೇಶೋತ್ಸವದಲ್ಲಿ ಉಪವಿಭಾಗಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಾದ ಶೀರಸ್ಥೆದಾರ ಹೈಗರ್, ಉಪತಹಶಿಲ್ದಾರ ಅಸೂದೆ, ಸಾಲೂಂಕೆ, ಕಂದಾಯ ಬ್ಯಾಂಕ್ ಹಾಗೂ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಕಂದಾಯ ಇಲಾಖೆ ನಿರೀಕ್ಷಕ ಸತೀಶ ಬಿಚಗತ್ತಿ , ಸತೀಶ ಭಾಂಡಗೆ, ರಾಜು ಗಲಗಲಿ, ಪ್ರಕಾಶ ಗಮಾನಿ, ಸಾಗರ ಅಂಗಡಿ, ಆರೀಫ ಮುಲ್ಲಾ, ನಾಗನೂರಿ ಭಾಗೋಜಿಕೊಪ್ಪ, ಶಶೀಧರ ಗುರವ, ದೇಸಾಯಿ, ಯಲ್ಲಪ್ಪಾ, ದಾಸನಾಳ, ನೇರ್ಲಿ, ಯಡವನ್ನವರ, ಜಾಧವ, ಸಂತೋಷ, ಉಪ್ಪಾರ, ವಿನಾಯಕ, ಕಿರಣ, ಸಾಗರ ಸೇರಿದಂತೆ ಹಿರಿಯ-ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಾಕ್ಷಿಯಾದರು.