625 ಕ್ಕೆ 625 ಅಂಕ ಪಡೆದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು

625 ಕ್ಕೆ 625 ಅಂಕ ಪಡೆದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಕಾರವಾರ :
ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಮೂವರು ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ಸೇರಿ ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 7 ಎಸ್.ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಕಾರವಾರ ಶೈಕ್ಷಣಿಕ ಜಿಲ್ಲೆಗೆ ಸಂಬಂಧಿಸಿದಂತೆ ಕುಮಟಾ ತಾಲೂಕಿನ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು 625 ಅಂಕ ಗಳಿಸಿರುವುದು ವಿಶೇಷವಾಗಿದೆ.
ಕುಮಟಾದ ಸಿ.ವಿ.ಎಸ್.ಕೆ.ವಿ. ಪ್ರೌಢ ಶಾಲೆಯ  ಮೇಘನಾ ಭಟ್, ಕಾರ್ತಿಕ್ ಭಟ್ ಹಾಗೂ ದೀಕ್ಷಾ ನಾಯ್ಕ  ಸಂಪೂರ್ಣ 625 ಅಂಕ ಪಡೆದು ಟಾಪರ್ಸ್ ಆಗಿದ್ದಾರೆ.
ಇನ್ನುಶಿರಸಿ ಶೈಕ್ಷಣಿಕ ಜಿಲ್ಲೆಯ ಶರ್ಮಿನಾ ಶೇಖ್, ತುಷಾರ್ ಶಾನಭಾಗ್, ಚಿರಾಗ್ ನಾಯ್ಕ ಹಾಗೂ ಕನ್ನಿಕಾಪರಮೇಶ್ವರಿ ಹೆಗಡೆ 625 ಕ್ಕೆ‌625 ಅಂಕಗಳನ್ನು ಪಡೆದಿದ್ದಾರೆ ಎಂದೂ ಮಾಹಿತಿ ನೀಡಿರುವ ಎರಡೂ ಶೈಕ್ಷಣಿಕ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.