ನಾನು ಸಾಯ್ತಿನಿ ..,ನಿನ್ನನ್ನು ಸಾಯಿಸ್ತಿನಿ..! ಅಥಣಿಯಲ್ಲಿ ಸಿಂದಗಿ ಶಿವಾನಂದನ ಕಿತಾಪತಿ..!

ನಾನು ಸಾಯ್ತಿನಿ ..,ನಿನ್ನನ್ನು ಸಾಯಿಸ್ತಿನಿ..! ಅಥಣಿಯಲ್ಲಿ ಸಿಂದಗಿ ಶಿವಾನಂದನ ಕಿತಾಪತಿ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ನಾನು ಸಾಯ್ತಿನಿ ..,ನಿನ್ನನ್ನು ಸಾಯಿಸ್ತಿನಿ..!

ಅಥಣಿಯಲ್ಲಿ ಸಿಂದಗಿ ಶಿವಾನಂದ ಮಾಡಿದ ಕಿತಾಪತಿ ಏನು ಗೊತ್ತಾ..?

ಬೆಳಗಾವಿ :ಸಿಂದಗಿ ಶಿವಾನಂದ ಹೆಂಡತಿ ಪ್ರೀತಿಯೊಂದಿಗೆ ಸರಿಯಾಗಿ ಸಂಸಾರ ಮಾಡದಿದ್ದಕ್ಕೆ ಅವಳು ಅಥಣಿಯ ತವರು ಮನೆ ಸೇರಿದ್ದಾಳೆ. 

ಹೆಂಡತಿ ಬಿಟ್ಟು 3 ತಿಂಗಳು ಸುಮ್ಮನಿದ್ದು ನಂತರ ಪತ್ನಿ ಪ್ರೀತಿ ಅಗತ್ಯತೆ ಗೊತ್ತಾಗಿ ದಿಗ್ಭ್ರಾಂತನಾಗಿದ್ದಾನೆ. ಮುಂದೆನೂ ಮಾಡಲು ತೋಚದೆ ಮನೆಯಲ್ಲಿದ್ದ ರಿವಾಲ್ವರ ತೆಗೆದುಕೊಂಡು ನಿನ್ನೆ (ಸೋಮವಾರ, ಸೆಪ್ಟೆಂಬರ್‌ 12) ಮಧ್ಯಾಹ್ನ ಪತ್ನಿಯ ತವರು ಮನೆ ಅಥಣಿಗೆ  ಬಂದಿದ್ದಾನೆ. 

ಪ್ರೀತಿ ... ನನ್ನ ಜೊತೆ ಸಿಂದಗಿಗೆ ಬಾ ಇಲ್ಲದಿದ್ದರೆ ನಿನ್ನನ್ನು ಗುಂಡು ಹಾಕಿ ಸಾಯಿಸುತ್ತೇನೆ ಎಂದು ಅವಾಜ ಹಾಕಿದ್ದಾನೆ. ಆಗ ಇತನನ್ನು ಅತ್ತೆ ಮಾವ ಸಮಾಧಾನ ಮಾಡಿ ಕಳಿಸಿದ್ದಾರೆ. 

ಆದರೆ ಸಿಂದಗಿ ಶಿವಾನಂದ ರಾತ್ರಿ 9 ಗಂಟೆಗೆ ಮತ್ತೆ ಬಂದು ಪ್ರೀತಿ ಎದುರು ಗಾಳಿಯಲ್ಲಿ ಎರಡು ಗುಂಡು ಹಾರಿಸಿದ್ದಾನೆ. ಉಳಿದಿರುವ 4 ಗುಂಡುಗಳಲ್ಲಿ ನಿನಗೆ ಎರಡು ಹೊಡೆದು.. ನನಗೆ ಎರಡು ಹೊಡೆದುಕೊಂಡು ನಾನು ಸಾಯ್ತಿನಿ ...,ನಿನ್ನನ್ನು ಸಾಯಿಸ್ತಿನಿ ಎಂದು ಗರ್ಜಿಸಿ ಅಥಣಿ ಪೊಲೀಸರ ಅಥಿತಿಯಾಗಿದ್ದಾನೆ.

ಬೆಳಗಾವಿ ಎಸ್ಪಿ ಸಂಜೀವ ಪಾಟೀಲ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.