ಬೆಳಗಾವಿಯಲ್ಲಿ ನಾಲ್ಕು ಜನ ಬ್ಲ್ಯಾಕ್ ಮೇಲ್ ಪತ್ರಕರ್ತರ ಬಂಧನ..!

ಬೆಳಗಾವಿಯಲ್ಲಿ ನಾಲ್ಕು ಜನ ಬ್ಲ್ಯಾಕ್ ಮೇಲ್ ಪತ್ರಕರ್ತರ ಬಂಧನ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ನಾಲ್ಕು ಜನ ಬ್ಲ್ಯಾಕ್ ಮೇಲ್ ಪತ್ರಕರ್ತರ ಬಂಧನ..!

ನಕಲಿ ಪತ್ರಕರ್ತರನ್ನು ಮಟ್ಟ ಹಾಕಲು ಪಣತೊಟ್ಟ SP  ಸಂಜೀವ ಪಾಟೀಲ..!!

ಬೆಳಗಾವಿ : ಗುರುರಾಜ್ ಶಿವಾನಂದ ಹುಕ್ಕೇರಿ ಸಾ| ನದಿಗುಡಿಕೇತ್ರ ಎಂಬಾತ ಇಂದು ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ಗಾಡಿ ನಂಬರ್ ಕೆ ಎ 22 ಡಿ 0557 ಇದರಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಕೊನ್ನೂರಿನಿಂದ ಹೆಬ್ಬಾಳಕ್ಕೆ ಹೊರಟಿದ್ದಾರೆ. ಅಷ್ಟರಲ್ಲೆ ಟಾಟಾ ಇಂಡಿಗೋ ಕಾರ್ ನಂಬರ್ ಎಂ ಎಚ್ 08 ಆರ್ 1641 ರಲ್ಲಿ ಬಂದ ನಾಲ್ಕು ಜನ ನಕಲಿ ಪರ್ತಕರ್ತರ ಗ್ಯಾಂಗ್ ಬಂದು ಗೂಡ್ಸ್ ಗಾಡಿ ಅಡ್ಡಗಟ್ಟಿ ನಿಲ್ಲಿಸಿ ನಾವು ಪತ್ರಕರ್ತರು ನಿಮ್ಮ ಗಾಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದೀರಿ ಎಂದು  ಎಳೆದಾಡಿ ಜಗ್ಗಾಡಿ ಅವ್ಯಾಚವಾಗಿ ಬೈದು ಹಣ ಕೊಡಬೇಕು ಕೊಡದಿದ್ದರೆ ಫುಡ್ ಇನ್ಸ್ಪೆಕ್ಟರ್ ಗೆ ಮತ್ತು ಪೊಲೀಸರಿಗೆ ತಿಳಿಸಿ ನಿಮ್ಮ ಗಾಡಿ ಸೀಜ್ ಮಾಡಿಸುತ್ತೇವೆ ಎಂದು ಹೆದರಿಕೆ ಹಾಕಿದ್ದಾರೆ.

ಇದಕ್ಕೆ ಬಗ್ಗದ ಗೂಡ್ಸ್ ಗಾಡಿ ಮಾಲಿಕ ಯಮಕನಮರಡಿ ಪೊಲೀಸರಿಗೆ ವಿಷಯ ತಿಳಿಸಿ ನಕಲಿ ಪತ್ರಕರ್ತರ ಗ್ಯಾಂಗ್ ವಿರುದ್ಧ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಯಮಕನಮರಡಿ ಪೊಲೀಸರು  U/S 506,341,384,34,506 IPC ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಕೊಂಡಿದ್ದಾರೆ. 

1.ಕಿರಣ ಕೃಷ್ಣಾ ಗಾಯಕವಾಡ
2.ಸಚಿನ ಭೀಮಪ್ಪಾ ಕಾಂಬಳೆ
3.ಸಂತೋಷ ಮನೋಹರ ದೊಡ್ಡಮನಿ
4.ದಾದು ವಿಶ್ವನಾಥ ಲೋಖಂಡೆ ಬಂಧಿತ ನಕಲಿ ಪತ್ರಕರ್ತರು.

ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ಅವರು ಬೆಳಗಾವಿಯಲ್ಲಿ ನಕಲಿ ಪತ್ರಕರ್ತರ ಹಾವಳಿಯನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿ ಕೇಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಸೊಗಿನಲ್ಲಿ ಬಂದು ಲೂಟಿ ಮಾಡುವವರನ್ನು ಜೈಲಿಗಟ್ಟುವ ವ್ಯವಸ್ಥೆ ಮಾಡಿರುವುದಾಗಿ ತಿಳಿದು ಬಂದಿದೆ.