ಯಮನಾಪೂರ ಹೈವೇ ಮೇಲೆ ರಸ್ತೆ ಅಪಘಾತ; ಓರ್ವನ ದುರ್ಮರಣ.

ಯಮನಾಪೂರ ಹೈವೇ ಮೇಲೆ ರಸ್ತೆ ಅಪಘಾತ; ಓರ್ವನ ದುರ್ಮರಣ.
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೈಕ್ ಮೇಲೆ ಹರಿಹಾಯ್ದ ವಾಹನ, ಅಪ್ಪಚ್ಚಿಯಾದ ಸವಾರನ ತಲೆ- ದೇಹ.

ಜನಜೀವಾಳ ಜಾಲ ಬೆಳಗಾವಿ : ನಗರಕ್ಕೆ ಅಂಟಿಕೊಂಡಿರುವ ಯಮನಾಪೂರ ಗ್ರಾಮದ ಇಂದು ಸಂಜೆ ಸಮಯದಲ್ಲಿ ಹೈವೆ ಮೇಲೆ ಚಲಿಸತ್ತಿದ್ದ ಬೈಕ್  ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ತಲೆ ಮೇಲೆ ಚಕ್ರಗಳು ಹಾಯ್ದು ತಲೆ ಅಪ್ಪಚ್ಚಿಯಾಗಿ ಗುರುತು ಸಿಗದಂತಾಗಿದೆ. ವಾಹನ ಹಾಯ್ದು ಹೋದ ಮೇಲೆ ಹಿಂದೆ ಬರುತ್ತಿದ್ದ ಅನೇಕ ವಾಹನಗಳು ಬೈಕ್ ಸವಾರನ ಮೇಲೆ ಹರಿಹಾಯ್ದ ಪರಿಣಾಮ ದೇಹವು ಕೂಡ ಅಪ್ಪಚ್ಚಿಯಾಗಿ ಹೋಗಿದೆ.

ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ವ್ಯಕ್ತಿಯ ಬಳಿ ಸಿಕ್ಕಿರುವ ಲೈಸೆನ್ಸ್ ದಾಖಲೆ ಆಧಾರದ ಮೇಲೆ ಪೋಲೀಸರು ಕುಟುಂಬದವರನ್ನು ಸಂಪರ್ಕಿಸಿದಾಗ ಇವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತ ಗ್ರಾಮದ ಉಮೇಶ ಅಶೋಕ ಬಿರ್ಜೆ(31) ಎಂದು ತಿಳಿದು ಬಂದಿದೆ.

ಉಮೇಶ ಗೌಂಡಿ ಕೆಲಸಗಾರನಾಗಿದ್ದು ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳುವಾಗ ಅಪಘಾತ ಸಂಭವಿಸಿದೆ.

ಘಟನೆ ಸ್ಥಳಕ್ಕೆ ಮೊದಲು ಕಾಕತಿ ಪೋಲೀಸರು ಭೇಟಿ ನೀಡಿದ್ದರು. ನಂತರ ಉತ್ತರ ಸಂಚಾರಿ ಪೋಲೀಸರಿಗೆ ತಿಳಿಸಿದ್ದಾರೆ. ಪಿಐ ಶ್ರೀಕಾಂತ ಗಾವಿ ಹಾಗೂ ಸಿಬ್ಬಂದಿ ಮುಲ್ಲಾ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.