RCU ಪೋರನಿಂದ ಘೋರ ಕೃತ್ಯ ..!

RCU ಪೋರನಿಂದ ಘೋರ ಕೃತ್ಯ ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

RCU ಪೋರನಿಂದ ಘೋರ ಕೃತ್ಯ ..!

ಪ್ರೀತಿಸಿದವಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ..!

ಬೆಳಗಾವಿ : ಭೂತರಾಮನಹಟ್ಟಿ RCU  ವಿಶ್ವವಿದ್ಯಾಲಯದಲ್ಲಿ ಎಂ.ಎ (ರಾಜ್ಯಶಾಸ್ತ್ರ) ವಿಭಾಗದಲ್ಲಿ ಓದುತ್ತಿದ್ದ  ಯುವಕ ಪ್ರೀತಿ ಸಿಗದ ಹಿನ್ನೆಲೆಯಲ್ಲಿ  ಯುವತಿಯನ್ನು ಕೊಲೆಗೈದು ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಬೆಳಗಾವಿಯ ನಗರದ ಬಸವಕಾಲೋನಿಯಲ್ಲಿ ನಡೆದಿದೆ.

ಇಂದು (ಶುಕ್ರವಾರ) ಈ ಘಟನೆ ನಡೆದಿದ್ದು ಕೊಲೆಯಾದ 28 ವರ್ಷದ ಯರಗಟ್ಟಿಯ ಮಡ್ಲೂರ ಗ್ರಾಮದ ಯುವತಿ ರೇಣುಕಾ ಕೆಂಚಪ್ಪ ಪಂಚಣ್ಣವರ ಬೆಳಗಾವಿಯಲ್ಲಿ ನರ್ಸ ಆಗಿ ಕೆಲಸ ಮಾಡುತ್ತಿದ್ದಳು.

ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಮೂಲತಃ ಸವದತ್ತಿಯ ತಾಲೂಕಿನ ಬೂದಿಗೊಪ್ಪ ಗ್ರಾಮದ ಮೂಲದವನಾದ 26 ವರ್ಷದ  ರಾಮಚಂದ್ರ ಬಸವಂತಪ್ಪ ತೆಣಗಿ. ಎರಡು ವರ್ಷಗಳಿಂದ ರೇಣುಕಾ ಇತ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ಯುವತಿ ಪ್ರೀತಿ ಮುಂದುವರೆಸಲು ನಿರಾಕರಿಸಿದ್ದಕ್ಕೆ ಹತಾಶನಾಗಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ಮೂಲಕ ತಿಳಿದಿದೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಸಿಪಿಐ ಮಂಜುನಾಥ ಹಿರೇಮಠ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ತಿವ್ರ ತನಿಖೆ ಕೈಕೊಂಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಪಿ ರವೀಂದ್ರ ಗಡಾದಿ ಬೆಳಗಾವಿಯು ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವತಿಯನ್ನು ಕೊಲೆ ಮಾಡಿದ್ದಾನೆ.ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಮೃತ ವ್ಯಕ್ತಿ ಈ ಕುರಿತಂತೆ ಡೆತ್ ನೋಟನ್ನು ಕೂಡ ಬರೆದಿಟ್ಟಿದ್ದಾನೆ. ಈ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದು ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಮೃತ ಯುವಕನ ತಂದೆ ಬಸವಂತ ತೆಣಗಿ, ಮಾತನಾಡಿ ಇದರ ಬಗ್ಗೆ ಆತ ಮನೆಯಲ್ಲಿ ಯಾರಿಗೂ ಹೇಳಿಲ್ಲ. ಹೇಳಿದ್ದರೆ ಏನಾದರೂ ಮಾಡಬಹುದಿತ್ತು. ಭೂತರಾಮನಹಟ್ಟಿ RCU ವಿಶ್ವವಿದ್ಯಾಲಯದಲ್ಲಿ ಎಂ.ಎ ಓದಿಕೊಂಡು, ಸಿಇಟಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ. ಮಂಗಳವಾರ ಊರಿಗೆ ಬಂದಿದ್ದ. ಹೋಗಬೇಡಪ್ಪ ನಾಳೆ ಹೋಗು ಎಂದಿದ್ದಕ್ಕೆ ಕೇಳದೇ ಬಂದಿದ್ದಾನೆ. ಫೋನ್ ಮಾಡಿದರೆ ವಾಪಸ್ ಮಾಡುತ್ತೇನೆ ಎಂದು ಹೇಳಿದ್ದ. ಹುಡುಗಿಯೂ ಕೂಡ ನಮ್ಮ ಸಮಾಜದವಳೆ. ಇದರ ಬಗ್ಗೆ ಹೇಳಿದ್ದರೆ ನಾವು ಏನಾದರೂ ಮಾಡಬಹುದಿತ್ತು. ಆದರೆ ಈ ರೀತಿ ಆಗಿದೆ. ನಮಗೆ ಈ ಕುರಿತಂತೆ ಯಾವುದೂ ಮಾಹಿತಿಯಿಲ್ಲ ಎಂದರು.ಇನ್ನು ಸ್ವಲ್ಪ ದುಡುಕಿದ್ದ ಕಾರಣ ಈ ಪ್ರೀತಿಯಲ್ಲಿ ಎರಡು ಜೀವಗಳೇ ಬಲಿಯಾಗಿವೆ ಎಂದು ಕಣ್ಣೀರಿಡುತ್ತಿದ್ದಾರೆ..