ವಿವಾದ ಸೃಷ್ಟಿಸಿತು RCU ಡಾಕ್ಟರೇಟ್ !

ವಿವಾದ ಸೃಷ್ಟಿಸಿತು RCU ಡಾಕ್ಟರೇಟ್ !
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜನ ಜೀವಾಳ ಸರ್ಚಲೈಟ್ 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈ ಬಾರಿ ನೀಡುತ್ತಿರುವ ಗೌರವ ಡಾಕ್ಟರೇಟ್ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಬೆಳಗಾವಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ರಾಮಚಂದ್ರೆಗೌಡ ಅವರು ಗೌರವ ಡಾಕ್ಟರೇಟ್ಗೆ ಸ್ವತಃ ರಮೇಶ್ ಅರವಿಂದ್ ಅರ್ಜಿ ಹಾಕಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಈ ಬಗ್ಗೆ ರಮೇಶ್ ಅರವಿಂದ್ ಅವರನ್ನು ಸಂಪರ್ಕಿಸಿದ ಪತ್ರಕರ್ತರು ನೀವು ಗೌರವ ಡಾಕ್ಟರೇಟ್ ಪಡೆಯಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ 'ನಾನು ಗೌರವ ಡಾಕ್ಟರೇಟ್ ಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ. ಆದರೆ, ವಿಶ್ವವಿದ್ಯಾಲಯದವರು ನಿನ್ನೆ ನನ್ನನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಗಮಿಸುವಂತೆ ಅಷ್ಟೇ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಡಾಕ್ಟರೇಟ್ ಪ್ರಸ್ತಾಪ ಆಗಿಲ್ಲ ಎಂದು ತಿಳಿಸಿದ್ದಾರೆ. ಇಷ್ಟಕ್ಕೂ ರಮೇಶ್ ಅರವಿಂದ್ ಅವರಿಗೆ ಬಹು ದೊಡ್ಡ ಹೆಸರಿದೆ. ಗೌರವ ಡಾಕ್ಟರೇಟ್ ಸಲುವಾಗಿ ಅವರು ಅರ್ಜಿ ಸಲ್ಲಿಸುವ ಸಣ್ಣ ಕೆಲಸಕ್ಕೆ
ಇಳಿಯರು  ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ. ಒಟ್ಟಾರೆ ವಿಶ್ವವಿದ್ಯಾಲಯ ಸುಳ್ಳಿನ ಕಂತೆ ಜೋಡಿಸಿರುವುದು ಸ್ಪಷ್ಟವಾಗಿದೆ .

ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿ ವರ್ಷ ತನ್ನ ಘಟಿಕೋತ್ಸದಲ್ಲಿ ನೀಡುವ ಗೌರವ ಡಾಕ್ಟರೇಟ್ ಈ ಬಾರಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
ಕನ್ನಡದ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಅವರಿಗೆ
ಈ ಬಾರಿ ವಿಶ್ವವಿದ್ಯಾಲಯದ ವತಿಯಿಂದ  ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಮೇಶ್ ಅರವಿಂದ್ ಸಮಸ್ತ ಕನ್ನಡಿಗರ ಮನ ಗೆದ್ದವರು. ಅವರಿಗೆ ಡಾಕ್ಟರೇಟ್ ಕೊಡುವುದಕ್ಕೆ ತಕರಾರೂ ಇಲ್ಲ. ಆದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅನುಸರಿಸಿರುವ ಕೆಲ ನೀತಿಗಳು ಕನ್ನಡಿಗರ ಮನ ನೋಯಿಸಲು ಕಾರಣವಾಗಿವೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ರಾಮಚಂದ್ರೇಗೌಡ ಹೇಳುವಂತೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೆ ರಮೇಶ್ ಅರವಿಂದ್ ಅರ್ಜಿ ಹಾಕಿದ್ದಾರಂತೆ !

ಆದರೆ, ಸ್ವತಃ ರಮೇಶ್ ಅರವಿಂದ್ ಹೇಳುವಂತೆ ನಾನು ಗೌರವ ಡಾಕ್ಟರೇಟ್ ನೀಡುವಂತೆ ಕೋರಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪತ್ರಕರ್ತರ ಮುಂದೆ ಕುಲಪತಿ ಸುಳ್ಳು ಹೇಳಿದ್ದಾರೋ ಎಂಬ ಚರ್ಚೆ ಈಗ ಶುರುವಾಗಿದೆ 

ಅಷ್ಟಕ್ಕೂ ರಮೇಶ್ ಅರವಿಂದ್ ಅವರಿಗೆ ಅರ್ಜಿ ಹಾಕಿ ಗೌರವ ಡಾಕ್ಟರೇಟ್ ಪಡೆಯುವ ಯಾವುದೇ ದರ್ದು ಇಲ್ಲ.ಯಾವುದೇ ಅರ್ಜಿ ಹಾಕದ ರಮೇಶ್ ಅರವಿಂದ್ ಅವರಿಗೆ ಇದೀಗ ವಿಶ್ವವಿದ್ಯಾಲಯ ಸುಳ್ಳಿನ ಸರಮಾಲೆ ಪೋಣಿಸಿರುವುದು ಅವರ ಅಭಿಮಾನಿಗಳ ಮನ ನೋಯಲು ಕಾರಣವಾಗಿದೆ.

ಗೌಡಾ : ಪತ್ರಿಕೆಗಳಿಗೆ ಮುಂಚಿತವಾಗಿ ಮಾಹಿತಿ ಸೋರಿಕೆ ಮಾಡಿದ ವಿವಿ ಕಾಣದ ಕೈಗಳು

 ಇನ್ನೊಂದೆಡೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಘಟಿಕೋತ್ಸವ ಸಂಬಂಧ ಇಂದು ಪತ್ರಿಕಾಗೋಷ್ಠಿ ಕರೆದಿದೆ. ಪತ್ರಿಕಾಗೋಷ್ಠಿಯಲ್ಲಿ ಮುಖ್ಯವಾಗಿ ಈ ಬಾರಿ ಗೌರವ ಡಾಕ್ಟರೇಟ್ ಯಾರಿಗೆ ನೀಡಲಾಗುತ್ತದೆ ಎಂಬ ಘೋಷಣೆ ಇರುತ್ತದೆ. ಆದರೆ ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಸಂಗತಿ ಮುಂಚಿತವಾಗಿಯೇ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಪತ್ರಿಕೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ನೀಡಬೇಕಾಗಿದ್ದ ಮಾಹಿತಿ ಸೋರಿಕೆ ಹೇಗೆ ಆಗಿದೆ ಎನ್ನುವುದು ಇದೀಗ ಬಹುಚರ್ಚಿತ ಸಂಗತಿಯಾಗಿದೆ.

ಸ್ವತಃ ಕುಲಪತಿ ಅಥವಾ ವಿಶ್ವವಿದ್ಯಾಲಯದ ಇನ್ನಿತರ ಮೂಲಗಳು ಪತ್ರಿಕೆಗಳಿಗೆ ಮುಂಚಿತವಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕಾಗಿದ್ದ ವಿಷಯವನ್ನು ಸೋರಿಕೆ
ಮಾಡಿರುವುದಕ್ಕೆ ಹಲವು ಹಿರಿಯ ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಈ ಬಾರಿ ಸಮಾಜ ಸೇವಾ ಕ್ಷೇತ್ರಕ್ಕೆ ಸಮಾಜಸೇವಕ ರವಿಚಂದರ್, ಬಸವ ತತ್ವ ಪ್ರಚಾರಕ್ಕೆ ಬೀದರನ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ಘಟಿಕೋತ್ಸವ ಸೆಪ್ಟೆಂಬರ್ 14 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ.

ಒಟ್ಟಾರೆ ಬೆಳಗಾವಿಯ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿ ಚಾಪ ಮೂಡಿಸಬೇಕಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಹೆಸರಿನ ವಿಶ್ವವಿದ್ಯಾಲಯ ಪ್ರತಿ ವರ್ಷ ಘಟಿಕೋತ್ಸವ ಸಂದರ್ಭದಲ್ಲಿ
ವಿವಾದಾಸ್ಪದವಾಗಿ ಗುರುತಿಸಿ ಕೊಳ್ಳುತ್ತಿರುವುದಕ್ಕೆ ಬೆಳಗಾವಿಯ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.