ಇದೇ ತಿಂಗಳು ಪತ್ರಿಕಾ ಭವನಕ್ಕೆ ಶಂಕುಸ್ಥಾಪನೆ ..!

ಇದೇ ತಿಂಗಳು ಪತ್ರಿಕಾ ಭವನಕ್ಕೆ ಶಂಕುಸ್ಥಾಪನೆ ..!
ನನಸಾದ ಹಲವು ದಶಕದ ಕನಸು..!
ಬೆಳಗಾವಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಳಗಾವಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಂತೂ ಕಾಲ ಕೂಡಿ ಬಂದಿದೆ. ಮೇ.30 ರಂದು ಬೆಳಿಗ್ಗೆ10.30ಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬೆಳಗಾವಿ ಪತ್ರಿಕಾ ಭವನದ ನಿರ್ಮಾಣದ ಕುರಿತು ಕೇವಲ ಚರ್ಚೆಗಳು ನಡೆಯುತ್ತಲೇ ಬಂದಿತ್ತು.
ನಿರ್ಗಮಿತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಾಗ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಕೊನೆಗೂ ಇಲ್ಲಿನ ಪತ್ರಕರ್ತರ ಬೇಡಿಕೆಗೆ ಸ್ಪಂದಿಸಿ ಶಂಕು ಸ್ಥಾಪನೆ ಮುಹೂರ್ತ ನಿಗದಿ ಮಾಡಿರುವುದು ಬೆಳಗಾವಿ ಪತ್ರಕರ್ತರಲ್ಲಿ ಸಂತಸದ ವಾತಾವರಣ ನಿರ್ಮಿಸಿದೆ.
ಸದ್ಯ ನಿಗದಿ ಪಡಿಸಿರುವ ಸ್ಥಳದಲ್ಲಿಯೇ ಪತ್ರಿಕಾ ಭವನ ನಿರ್ಮಿಸಿದರೆ ಪತ್ರಕರ್ತರಿಗೆ ಅನುಕೂಲವಾಗಲಿದೆ ಎಂದು ಎಲ್ಲ ಪತ್ರಕರ್ತರ ಆಶಯವಾಗಿದೆ.