ಬೆಳಗಾವಿಯಲ್ಲಿ ಮತ್ತೆ ಐವರು 420 ಪತ್ರಕರ್ತರ ಬಂಧನ..!

ಬೆಳಗಾವಿಯಲ್ಲಿ ಮತ್ತೆ ಐವರು 420 ಪತ್ರಕರ್ತರ ಬಂಧನ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮತ್ತೆ ಐವರು 420 ಪತ್ರಕರ್ತರ ಬಂಧನ..!

ನಕಲಿ ಐಡಿ ತೋರಿಸಿ ಲಕ್ಷಾಂತರ ರೂ ಲಫಟಾಯಿಸಿದ್ದ ಪತ್ರಕರ್ತರನ್ನು ಸೆರೆಹಿಡಿದ ಬೆಳಗಾವಿ ಪೊಲೀಸರು.

ಬೆಳಗಾವಿ : ದಿನಾಂಕ 19/08/2022 ರಂದು ಮುಂಜಾನೆ 09:15 ಗಂಟೆಯಿಂದ 09:22 ಗಂಟೆಯ ನಡುವಿನ ಸಮಯದಲ್ಲಿ ಬೆಳಗಾವಿ ರಾಮತೀರ್ಥ ನಗರದ ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ ಎಂಬುವರಿಂದ ಹೆಸರು ವಿಳಾಸ ಗೊತ್ತಿಲ್ಲದ ಸುಮಾರು 35 ರಿಂದ 45 ವರ್ಷ ವಯಸ್ಸಿನ 4 ಜನ ವ್ಯಕ್ತಿಗಳು ಇಂಡಿಕಾ ಕಾರ ಗಾಡಿ ನಂಬರ ಕೆ.ಎ -22 / ಪಿ -5752 ನಲ್ಲಿ ಚಾಲಕ ಸೇರಿ ಒಟ್ಟು ಐದು ಜನರು ಕೂಡಿಕೊಂಡು ಬಂದು “ ನಾವು ಪೊಲೀಸರು ನಿಮ್ಮ ಗಾಡಿಯನ್ನು ತಪಾಸಣೆ ಮಾಡಬೇಕು ನೀವು ಗಾಡಿಯಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಿರಿ ಎನ್ನುವ ಬಗ್ಗೆ ಮಾಹಿತಿ ಇದೆ ಅಂತಾ ಹೇಳಿ ಮೋಸದಿಂದ ವಾಹನವನ್ನು ತಪಾಸಣೆ ಮಾಡಿದಂತೆ ನಟಿಸಿದ್ದಾರೆ. ನಂತರ ನೀವು ಕಿತ್ತೂರ ಪೊಲೀಸ್ ಠಾಣೆಗೆ ಬನ್ನಿರಿ ಅಂತಾ ಹೇಳಿ ಮೋಸ ಮಾಡಿ ಗಾಡಿಯಲ್ಲಿದ್ದ 4.79.250 / ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದ 5 ಜನ 420 ಪತ್ರಕರ್ತರನ್ನು ಕಿತ್ತೂರು ಪೊಲೀಸರು ಬಂಧಿಸಿ ಜೈಲಿಗಟ್ತಿದ್ದಾರೆ.
 
ಬೆಳಗಾವಿ ರಾಮತೀರ್ಥ ನಗರದ ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ  ಇವರು ನೀಡಿದ ದೂರಿನನ್ವಯ  ಕಿತ್ತೂರ ಪೊಲೀಸರು ಅಪರಾಧ ಸಂಖ್ಯೆ : 11/2022 ಕಲಂ : 419 , 420 ಸ.ಕ 34 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಸಂಜೀವ ಪಾಟೀಲ ತಿವ್ರ ತನಿಖೆ ಕೈಕೊಂಡು ಆರೋಪಿಗಳನ್ನು ಪತ್ತೆಹಚ್ಚುವ ಆದೇಶಿಸಿದ್ದರು.

ಇದರ ಬೆನ್ನಲೆ ಶಿವಾನಂದ ಕಟಗಿ , ಡಿ.ಎಸ್.ಪಿ. ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಕಿತ್ತೂರ ವೃತ್ತ ನಿರೀಕ್ಷಕರಾದ  ಮಹಾಂತೇಶ ವಿ ಹೊಸಪೇಟೆ ಮತ್ತು  ಹನಮಂತ ಎಲ್ ಧರ್ಮಟ್ಟಿ ಪಿ.ಎಸ್.ಐ ( ಕಾ.ಸು ) ,  ಕೆ.ಎಂ.ಕಲ್ಲೂರ ಪಿ.ಎಸ್.ಐ ( ತ.ವಿ ) ಕಿತ್ತೂರ ,  ಪ್ರವೀಣ ಕೋಲೆ ಪಿಎಸ್‌ಐ ದೊಡವಾಡ ರವರ ತಂಡದವರಿಂದ ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಇಲ್ಲಿಯವರೆಗೆ ಐದು ಜನ ಆರೋಪಿಗಳನ್ನು ದಸ್ತಗೀರ ಮಾಡಿ ಮೋಸ ಮಾಡಿ ತೆಗೆದುಕೊಂಡು ಹೋದ ಹಣದಲ್ಲಿ 70,000 / - ರೂಪಾಯಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರ ಗಾಡಿ ನಂ ಕೆ.ಎ -22 / ಪಿ 5752 ಮತ್ತು ಎರಡು ಮೋಟರ್ ಸೈಕಲ್ ಗಳನ್ನು ಹಾಗೂ ಆರೋಪಿಗಳಿಂದ ನಕಲಿ ಪ್ರೆಸ್ ಗುರುತಿನ ಚೀಟಿಯನ್ನು ( Fake Press IID Card ) ತಯಾರಿಸಿ ಅದನ್ನು ಅಪರಾಧದಲ್ಲಿ ಬಳಕೆ ಮಾಡಿದ್ದು ಎರಡು ಗುರುತಿನ ಚೀಟಿಗಳನ್ನು ಜಪ್ತ ಮಾಡಿದ್ದಾರೆ.

 1.ಸೆಹಲ್ ಅಹ್ಮದ್ ಶಹಾಬುದ್ದಿನ ತರಸಗಾರ (41)

2.ನಯೀಮ್ ಮಹಮ್ಮದ್ ಶಫಿ ಮುಲ್ಲಾ (30)

3.ಸರ್ವೇಶ್ ಮೋಹನ ತುಡಯೇಕರ್ (38)

4.ಬಸವರಾಜ ಗೌಡಪ್ಪಾ ಪಾಟೀಲ (32)

5.ಜಾಕೀರ ಹುಸೇನ್ ಖುತಬುದ್ದೀನ ಮನಿಯಾರ(42) ಐವರು ಬಂಧಿತ 420 ಆರೋಪಿಗಳು.

ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದ್ದು ಇನ್ನೂ ನಾಲ್ಕು ಜನರನ್ನು ಪತ್ತೆ ಮಾಡುವದು , ಮೋಸ ಮಾಡಿದ ಉಳಿದ ಹಣವನ್ನು ಜಪ್ತಿ ಮಾಡುವುದು , ಅಪರಾಧ ಕೃತ್ಯದ ಸಮಯದಲ್ಲಿ ಬಳಸಿರುವ ಗುರುತಿನ ಚೀಟಿಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

 
ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಎ.ಆರ್.ಭಾವನ್ನವರ ಎ.ಎಸ್.ಐ. ಜಿ.ಜಿ.ಹಂಪಣ್ಣವರ.ಎ.ಎಸ್.ಐ . ಟಿ.ವಿ.ಸೋಮನು ಎ.ಎಸ್.ಐ. ಎನ್.ಎ.ಚಂದರಗಿ , ಆರ್.ಎಸ್.ಶೀಲ , ಡಿ.ಎಮ್.ದರಗಾದ , ಎಮ್.ಎಮ್.ದ್ಯಾಮನಗೌಡರ , ಎಲ್.ಎಫ್ . ಜಂಬಲವಾಡಿ , ಎಸ್.ಎ.ದಫೇದಾರ , ಕೆ.ಎಸ್.ಮಧುರ . ಎನ್.ಆರ್.ಗಳಗಿ , ಆರ್.ಎಸ್.ತೇಲ , ಬಿ.ಎ.ಅಗಸಿಮನಿ . ಏ.ಐ.ಹಡಪದ . ಎಸ್.ಎಚ್.ಹಾದಿಮನಿ , ಕೃಷ್ಣಾ ಭಜಂತ್ರಿ  ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಹಾಗೂ  ಹಿರಿಯ ಅಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.