RCU ಬಳಿ ಪ್ರಯಾಣಿಕ ಬಸ್ ಅಪಘಾತ; ಒರ್ವನ ದುರ್ಮರಣ.

RCU ಬಳಿ ಪ್ರಯಾಣಿಕ ಬಸ್ ಅಪಘಾತ; ಒರ್ವನ ದುರ್ಮರಣ.
ಅಪಘಾತಕ್ಕಿಡಾದ ಬಸ್ ಹಾಗೂ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸುತ್ತಿರುವ ಕಾಕತಿ ಪಿಐ ಗುರುನಾಥ ಮತ್ತು ಪಿಎಸ್ಐ ಅವಿನಾಶ ಯರಗೊಪ್ಪ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

RCU ಬಳಿ ಬಸ್ ಅಪಘಾತ; ಒರ್ವನ ದುರ್ಮರಣ.

ಮಧ್ಯರಾತ್ರಿ ಪ್ರಾಣಾಯಾಮದಿಂದ ಪಾರಾದ ಪ್ರಯಾಣಿಕರು..!

ಬೆಳಗಾವಿ: ಇಂದು ನಸುಕಿನ ಜಾವ ಬೆಂಗಳೂರು ಕಡೆಯಿಂದ ಮುಂಬಯಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಭೂತರಾಮನಟ್ಟಿ ಗ್ರಾಮದ ಬಳಿಯಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರಾಸ್‍‌ ಬಳಿ ಅಪಘಾತಕ್ಕಿಡಾಗಿದೆ. ಬಸ್ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕ್ಲೀನರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುಣಿಗಲ್  ಮದ್ದೂರು ರಸ್ತೆಯ ಸಯ್ಯದನಾಸಿರ ಪಾಶಾ (50) ಮೃತ ಚಾಲಕ. 

ಅದೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದ ಕ್ಲೀನರ್ ಖಾಲಿದ ಮಹಮ್ಮದ್ ಗಾಯಗೊಂಡವ.

ಬೆಂಗಳೂರು ಮೂಲದ ನ್ಯಾಷನಲ್ ಟ್ರಾವೆಲ್ಸ್  ಮಾಲಿಕತ್ವದ ಪ್ರಯಾಣಿಕರ ಬಸ್ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರು ಕಡೆಯಿಂದ ಮುಂಬಯಿಗೆ ಹೋಗುತ್ತಿದ್ದ ವೇಳೆ ಆರ್ ಸಿ ಯು ಕ್ರಾಸ್ ಬಳಿ ಮುಂದೆ ಹೊರಟಿದ್ದ ಮತ್ತೊಂದು ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಬಸ್ ತಕ್ಷಣ ಸ್ಥಳದಲ್ಲಿಯೇ  ನಿಂತಿದ್ದರಿಂದ ಪ್ರಯಾಣಿಕರು ಪ್ರಾಣಾಯಾಮದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪಿಐ ಐ ಎಸ್‌ ಗುರನಾಥ, ಪಿಎಸ್ಐ ಅವಿನಾಶ್ ಯರಗೊಪ್ಪ ಎಎಸ್ಐ ಸುರೇಶ್ ನೂಲಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತದಿಂದಾಗಿ ನಸುಕಿನ ಜಾವ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಲ ಕಾಲ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರಿಂದ ಸಂಚಾರ ತೆರವುಗೊಳಿಸಲು ಕಾಕತಿ ಪೊಲೀಸರು ಹರಸಾಹನ ಪಡಬೇಕಾಯಿತು.