ಲಕ್ಷಾಂತರ ರೂ ಪಂಪ್ ಸೆಟ್ ಕದ್ದ ಕಳ್ಳರನ್ನು ಜೈಲಿಗಟ್ಟಿದ್ದ PSI ಆನಂದ ಆದಗೊಂಡ..!

ಲಕ್ಷಾಂತರ ರೂ ಪಂಪ್ ಸೆಟ್ ಕದ್ದ ಕಳ್ಳರನ್ನು ಜೈಲಿಗಟ್ಟಿದ್ದ PSI ಆನಂದ ಆದಗೊಂಡ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಗ್ರಾಮೀಣ ಪೋಲೀಸರಿಂದ ಮಿಂಚಿನ ಕಾರ್ಯಾಚರಣೆ..!

ಲಕ್ಷಾಂತರ ರೂ ಪಂಪ್ ಸೆಟ್ ಕದ್ದ ಕಳ್ಳರನ್ನು ಜೈಲಿಗಟ್ಟಿದ್ದ PSI ಆನಂದ ಆದಗೊಂಡ..!

ಬೆಳಗಾವಿ : ಮಾರ್ಚ್ ತಿಂಗಳಿನಲ್ಲಿ ತಾಲೂಕಿನ ಮಚ್ಚೆ ಗ್ರಾಮದಲ್ಲಿನ ರೈತರ ಪಂಪ್ ಸೆಟ್ (ಕರೆಂಟ್ ಮೋಟಾರಗಳು) ಕಳುವಾದ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲೆ ತನಿಖೆ ಕೈಕೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹೊಲದಲ್ಲಿ ಬಾವಿಗಳಿಗೆ ನೀರು ಎತ್ತಲು ಕೂರಿಸಿದ್ದ ಸಾವಿರಾರು ರೂ ಮೌಲ್ಯದ ಪಂಪ್ ಸೆಟ್ ಕದಿಯುತ್ತಿದ್ದ ಖದಿಮರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ ಮೌಲ್ಯದ 18 ಪಂಪ್ ಸೆಟ್ ಮತ್ತು ಒಂದು ಅಟೋ ರಿಕ್ಷಾ ವಶಕ್ಕೆ ಪಡೆದು ಕಳ್ಳರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತರು ,  ಉಪ ಆಯುಕ್ತರು ( ಕಾ.ಸು ) ಮತ್ತು ಉಪ ಆಯುಕ್ತರು ( ಅಪರಾಧ ಮತ್ತು ಸಂಚಾರ ), ಗ್ರಾಮೀಣ ಎಸಿಪಿ ಗಣಪತಿ ಗುಡಾಜಿ  ಗ್ರಾಮೀಣ ಪೊಲೀಸ ಠಾಣೆ ಪಿಐ ಸುನೀಲ್‌ಕುಮಾರ ನಂದೇಶ್ವರ ಮಾರ್ಗದರ್ಶನದಲ್ಲಿ  ಪಿಎಸ್ಐ (ಕಾ ಸು) ಆನಂದ ಆದಗೊಂಡ ನೇತೃತ್ವದಲ್ಲಿ ಪ್ರೋ . ಪಿಎಸ್‌ಐ ವಿಶ್ವನಾಥ ಘಂಟಿಮಠ  ಸಿಬ್ಬಂದಿ ಎಮ್.ಜಿ.ಕೊಟಬಾಗಿ , ವಾಯ್ . ವಾಯ್ . ತಳವಾಡ ಸೇರಿಕೊಂಡು ಪ್ರಕರಣ ತನಿಖೆ ನಡೆಸಿ ಭೇದಿಸಿದ್ದಾರೆ.

ನಿನ್ನೆ ( 07-04-2022) ರಂದು ಬೆಳಗ್ಗೆ ಪೀರಣವಾಡಿಯ ತಾರಾನಗರ ಕ್ರಾಸ್ ಹತ್ತಿರ ಮೂರು ಜನ ಸಂಶಯಾಸ್ಪದ ರೀತಿಯಲ್ಲಿ ಸಿಕ್ಕಿದ್ದು , ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಇವರು ಠಾಣಾ ಹದ್ದಿನಲ್ಲಿ ಪಂಪ್ ಸೆಟ್ ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

1 ) ಸೈಯಬಅಲಿ ಖಾಸೀಮ್‌ಸಾಬ ನಾಯಕವಾಡಿ ವಯಸ್ಸು : 26 ವರ್ಷ ಸಾಃ ಜನತಾ ಕಾಲೋನಿ ಖಾದರವಾಡಿ ಹಾಲಿ : ಜನತಾ ಪ್ಲಾಟ , ಪೀರಣವಾಡಿ.

2 ) ನಾಗರಾಜ ಲಕ್ಷಣ ಕರನಾಯಕ ವಯಸ್ಸು : 24 ವರ್ಷ ಸಾ : ಜನತಾ ಪ್ಲಾಟ , ಪೀರಣವಾಡಿ. 

3 ) ರುದ್ರೇಶ ಮಲ್ಲಪ್ಪಾ ತಳವಾರ ವಯಸ್ಸು : 21 ವರ್ಷ ಸಾ : ಜನತಾ ಪ್ಲಾಟ , ಪೀರಣವಾಡಿ ಈ ಮೂವರು ಬಂಧಿತ ಆರೋಪಿಗಳು.

ಈ ಕಳ್ಳರಿಂದ ಸುಮಾರು 2,70,000 / ರೂಪಾಯಿ ಕಿಮ್ಮತ್ತಿನ ವಿವಿಧ ಕಂಪನಿಯ 18 ಪಂಪ್ ಸೆಟ್ ಗಳು ಮತ್ತು ಅಪರಾಧಕ್ಕೆ ಉಪಯೋಗಿಸಿದ ಆಟೋ ರಿಕ್ಷಾವನ್ನು ಜಪ್ತ ಮಾಡಲಾಗಿದೆ.

ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಲಾಗಿದೆ.

ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿದ ಪಿಎಸ್ಐ ಅನಂದ ಆದಗೊಂಡ ಹಾಗೂ ತಂಡಕ್ಕೆ ಪೊಲೀಸ ಆಯುಕ್ತರು, ಉಪಾಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.