ಸ್ವಾತಂತ್ರ್ಯೋತ್ಸವಕ್ಕೆ ಹೊಸ ಜಿಲ್ಲೆ ಘೋಷಣೆ ಇಲ್ಲ ; ಆದರೆ ಹೊಸ ಜಿಲ್ಲಾಕೇಂದ್ರ  ಪ್ರಸ್ತಾಪ 

ಸ್ವಾತಂತ್ರ್ಯೋತ್ಸವಕ್ಕೆ ಹೊಸ ಜಿಲ್ಲೆ ಘೋಷಣೆ ಇಲ್ಲ ; ಆದರೆ ಹೊಸ ಜಿಲ್ಲಾಕೇಂದ್ರ  ಪ್ರಸ್ತಾಪ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಂಗಳೂರು:

ದೇವನಹಳ್ಳಿಯನ್ನು   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನು ಮಾಡುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಘೋಷಿಸಿದ್ದಾರೆ.

ದೇವನಹಳ್ಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಬಗ್ಗೆ 1ತಿಂಗಳ ಒಳಗೆ ಸರಕಾರ ಅಧಿಕೃತ ಆದೇಶ ಹೊರಡಿಸಲಿದೆ. ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ. ಸದ್ಯ ಈ ಸಮಸ್ಯೆ ಬಗೆಹರಿ ದಂತಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ರಾಜ್ಯದ ಅನೇಕ ಕಡೆ ಹೊಸ ಜಿಲ್ಲಾಕೇಂದ್ರ ಘೋಷಣೆಗೆ  ದಶಕಗಳಿಂದ ಸರಕಾರದ ಮೇಲೆ ಜನ ಒತ್ತಡ ಹೇರುತ್ತಿದ್ದಾರೆ.

 ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಜ್ಯ ಸರಕಾರ ಹೊಸ ಜಿಲ್ಲಾ ಕೇಂದ್ರ ಘೋಷಣೆ ಮಾಡುವ ಬಗ್ಗೆ ಕನಸು ಕಂಡಿದ್ದರು. ಆದರೆ ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಘೋಷಣೆ ಮಾಡದೇ ಇರುವುದು ಆಯಾ ಭಾಗದಲ್ಲಿ ಬೇಸರಕ್ಕೆ ಕಾರಣವಾಗಿದೆ. 


ಕರ್ನಾಟಕದಲ್ಲಿ ಚಿಕ್ಕೋಡಿ, ಗೋಕಾಕ, ಸಿರಸಿ, ಜಮಖಂಡಿ, ಕುಂದಾಪುರ, ಪುತ್ತೂರು, ಶಿರಾ/ಮಧುಗಿರಿ, ಹುಣಸೂರು,
ಶಿಕಾರಿಪುರ/ ಸಾಗರ, ಸಿಂಧನೂರು  ಮುಂತಾದ ಜಿಲ್ಲೆಗಳನ್ನು ರಚಿಸಬೇಕೆಂಬ ಬೇಡಿಕೆ ಇದೆ. 

ಈ ಹಿಂದೆ ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದೇ ಹೊಸ ಜಿಲ್ಲೆಗಳ ಘೋಷಣೆ ಮಾಡಿ ಅಸ್ತಿತ್ವಕ್ಕೆ ತಂದಿದ್ದರು. ಅವರು ಅಂದು ಘೋಷಣೆ ಮಾಡಿದ್ದ 7 ಜಿಲ್ಲೆಗಳಿಗೆ ಇದೀಗ 25 ವರ್ಷದ ಸಂಭ್ರಮ.