ಮೂಡಲಗಿ ಪುರಸಭೆಯಿಂದ  ಬೆಳ್ಳಂಬೆಳಗ್ಗೆ ಸ್ವಚ್ಛತೆ ಕಾರ್ಯ

ಮೂಡಲಗಿ ಪುರಸಭೆಯಿಂದ  ಬೆಳ್ಳಂಬೆಳಗ್ಗೆ ಸ್ವಚ್ಛತೆ ಕಾರ್ಯ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮೂಡಲಗಿ :
ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ 
ಎಂದು ಅನೇಕ ಸಲ  ಪತ್ರಿಕೆ ಮೂಲಕ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಪುರಸಭೆ ಅಧಿಕಾರಿಗಳು ಈಗ ಸ್ವಚ್ಛ ಭಾರತ ಅಭಿಯಾನಕ್ಕೆ ಮುಂದಾಗಿದ್ದಾರೆ. ಮೂಡಲಗಿ ಹೃದಯ ಭಾಗದಲ್ಲಿರುವ ಹಳ್ಳವು ಬರಿ ಸಾರಾಯಿ ಬಾಟಲಿಗಳಿಂದ ತುಂಬಿಕೊಂಡಿತು. ಹೀಗಾಗಿ ಮೂಡಲಗಿ ನಗರ ತನ್ನ ಸೌಂದರ್ಯವನ್ನು ಕಳೆದುಕೊಂಡು ಅನೇಕ ವರ್ಷಗಳೇ ಕಳೆದಿವೆ ಎನ್ನುತ್ತಿರುವ ಸಾರ್ವಜನಿಕರಿಗೆ ಬೆಳ್ಳಂಬೆಳಗ್ಗೆ ಹಳ್ಳದ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಅಭಿನಂದಿಸಿದರು.